ಕಲೆರಹಿತ, ಸದಾ ಯಂಗ್ ಎನಿಸುವ ಚರ್ಮ ಬೇಕೇ? ಹಾಗಾದರೆ ಈ ಸಲಹೆ ಫಾಲೋ ಮಾಡಿ!
ಹೆಣ್ಣು ಉದ್ಯೋಗಸ್ಥೆ ಅಥವಾ ಗೃಹಿಣಿಯೇ ಆಗಿರಲಿ, ತನ್ನ ವೈಯಕ್ತಿಕ ಆರೋಗ್ಯ ಸೌಂದರ್ಯಗಳ ಕಡೆ ಗಮನ ಕೊಡಲು ಇವಳಿಗೆ ಬಿಡುವೇ ಇರುವುದಿಲ್ಲ. ಈ ಕುರಿತಾಗಿ ಸೌಂದರ್ಯ ತಜ್ಞೆಯರ ಸಲಹೆ ಏನು? ಸದಾ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಬೇಕೆಂಬುದು ಪ್ರತಿ ಹೆಣ್ಣಿನ ಆಸೆ. ತಾನು ಇತರರಿಗಿಂತ ಸದಾ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂಬುದೇ ಅವಳ ಆಶಯ. ನಿಮ್ಮ ಚರ್ಮಕ್ಕೆ ಹೆಚ್ಚಿನ ಹೊಳಪು, ಮೃದುತ್ವ, ಕೋಮಲತೆ, ಕಾಂತಿ ತುಂಬಿ ಸದಾ ಯಂಗ್ ಆಗಿರಲು ಈ ಸಲಹೆಗಳನ್ನು ಅನುಸರಿಸಿ : ಮಾಯಿಶ್ಚರೈಸರ್
ನಿಮ್ಮ ಚರ್ಮವನ್ನು ಸದಾ ಮಾಯಿಶ್ಚರೈಸ್ಡ್ ಆಗಿಟ್ಟುಕೊಳ್ಳಿ. ಇದಕ್ಕಾಗಿ ಮೊದಲ ಸುತ್ತಿನ ಕೆಲಸವೆಂದರೆ ಚರ್ಮವನ್ನು ಹೈಡ್ರೇಟೆಡ್ ಆಗಿಸುವುದು. ಹೆಚ್ಚಿನ ಗ್ಲೋಗಾಗಿ ದಿನಕ್ಕೆ 2 ಸಲ ಅಗತ್ಯ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಎಕ್ಸ್ ಫಾಲಿಯೇಟ್ ಮೈಲ್ಡ್ ಸ್ಕ್ರಬ್ ನಿಂದ ವಾರದಲ್ಲಿ 2 ಸಲ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿ. ಇದರಿಂದ ಚರ್ಮದ ಹೊರಪದರದಿಂದ ಡೆಡ್ ಸೆಲ್ಸ್ ತೊಲಗಿಸಲು ಎಷ್ಟೋ ನೆರವಾಗುತ್ತದೆ. ಇದು ಚರ್ಮದಿಂದ ಕೊಳಕಿನ ಪದರ ತೊಲಗಿಸಿ, ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡಬಲ್ಲದು. ಹೀಗಾಗಿ ನೀವು ಬಳಸುವ ಸ್ಕಿನ್ ಪ್ರಾಡಕ್ಟ್ಸ್ ಆಳವಾಗಿ ಚರ್ಮದೊಳಗೆ ಇಳಿಯಲು ನೆರವಾಗುತ್ತದೆ.
ಕ್ಲೆನ್ಸಿಂಗ್
ಚರ್ಮದ ಪ್ರಕಾರ ಗಮನಿಸಿಕೊಂಡು, ಸೂಕ್ತ ಕ್ಲೆನ್ಸರ್ ಆರಿಸಿ ಚರ್ಮವನ್ನು ಕ್ಲಿಯರ್ ಮಾಡಿ. ಕ್ಲೆನ್ಸಿಂಗ್ ಗೆ ಮೊದಲು ಮೇಕಪ್ ನ್ನು ಮೈಸೆಲಾರ್ ವಾಟರ್ ನಿಂದ ಅಗತ್ಯ ಕ್ಲೀನ್ ಮಾಡಿ.
ಪೌಷ್ಟಿಕ ಆಹಾರ ಸೇವಿಸಿ
ನಿಮ್ಮ ದೈನಂದಿನ ಆಹಾರದಲ್ಲಿ ಆದಷ್ಟೂ ಶುಗರ್, ಸಾಲ್ಟ್ ಕಟ್ ಮಾಡಿ. ಹಬ್ಬಗಳಲ್ಲಿ ಇದು ತುಸು ಅಸಾಧ್ಯವಾದರೂ, ಹೀಗೆ ರೆಗ್ಯುಲರ್ ಆಗಿ ಮಾಡುವುದರಿಂದ, ನಿಮ್ಮ ಚರ್ಮ ರೇಡಿಯೆಂಟ್ ಆಗುವುದರ ಜೊತೆ, ಇಡೀ ದಿನ ಎನರ್ಜಿಟಿಕ್ ಆಗಿರುತ್ತದೆ.
ರಿಚ್ ಆ್ಯಂಟಿ ಆಕ್ಸಿಂಡೆಟ್ಸ್ ತುಂಬಿರುವ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ನಿಂಬೆ, ದಾಳಿಂಬೆ, ಬೆರೀಸ್, ಅವಕಾಡೋ, ಟೊಮೇಟೊಗಳನ್ನು ಧಾರಾಳ ಬಳಸುತ್ತಿರಿ.
ಚರ್ಮವನ್ನು ಹೆಚ್ಚು ಕಾಂತಿಯುತ ಗೊಳಿಸಲು, ಪ್ರತಿದಿನ ಸುಮಾರು 1000 ಮಿ.ಗ್ರಾಂ.ನಷ್ಟು ವಿಟಮಿನ್ ಸಿ ಸತ್ವವುಳ್ಳ ಆಹಾರ ಸೇವಿಸಿ. ಗ್ಲೂಟೆಥಿಯಾನ್ ಟ್ಯಾಬ್ಲೆಟ್ಸ್ ಜೊತೆಗೆ ಇನ್ನು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಪ್ಲಂಪಿ ಹೈಡ್ರೇಟೆಡ್ ಚರ್ಮಕ್ಕಾಗಿ, ಅಧಿಕ ಪ್ರಮಾಣದಲ್ಲಿ ಆಗಾಗ ನೀರು ಕುಡಿಯಿರಿ. ಇಷ್ಟು ಮಾತ್ರವಲ್ಲದೆ, ಹ್ಯಾಲೂರೋನಿಕ್ ಆ್ಯಸಿಡ್ ಸೀರಂ ಬಳಸುವುದರಿಂದಲೂ, ಚರ್ಮ ಹೈಡ್ರೇಟೆಡ್‌ಸ್ಮೂತ್ ಆಗಿರುತ್ತದೆ. ಏಕೆಂದರೆ ಈ ಆ್ಯಸಿಡ್ ಒಂದು ಶುಗರ್‌ಮಾಲಿಕ್ಯೂ ಆಗಿದ್ದು, ಇದು ಚರ್ಮದಲ್ಲಿ ನೈಸರ್ಗಿಕವಾಗಿಯೇ ಕಂಡುಬರುತ್ತದೆ. ಚರ್ಮದ ಮೇಲೆ ಬೀಳುವ ನೀರನ್ನು ಕೊಲೋಜೆನ್ ಜೊತೆಗೆ ಬಂಧಿಸಿಡಲು ನೆರವಾಗುತ್ತದೆ. ಇದರಿಂದಾಗಿ ಚರ್ಮ ಆರೋಗ್ಯಕರವಾಗಿ ನಳನಳಿಸುತ್ತಾ, ಹೈಡ್ರೇಟೆಡ್ ಆಗಿ ಕಂಡು ಬರುತ್ತದೆ. ಇದು ಚರ್ಮದ ಹೈಡ್ರೇಶನ್ ನ್ನು ಉಳಿಸಿಕೊಳ್ಳುವಲ್ಲಿಯೂ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದರ ಫೇಸ್ ಆಯಿಲ್ ನ್ನು ಡ್ರೈ ಸ್ಕಿನ್ ಗಾಗಿ ಬಳಸುವುದು ಉತ್ತಮ.