ಹೂವಿನಂತಹ ಚರ್ಮದ ಮೇಲೆ ನವಿರಾದ ಗೆರೆ ಮತ್ತು ಸುಕ್ಕುಗಳು ಕಾಣಿಸತೊಡಗಿತೆಂದರೆ ಮನಸ್ಸು ತಳಮಳಗೊಳ್ಳುತ್ತದೆ. ಏಕೆಂದರೆ ಸುಕ್ಕುಗಳು ವೃದ್ಧಾಪ್ಯದ ಸಂಕೇತಲ್ಲವೇ! ಅಂದರೆ ವೃದ್ಧಾಪ್ಯದ ಕಡೆಗೆ ಹೆಜ್ಜೆಯಿಡುತ್ತಿದ್ದೇವೆಂದು ಮನ ಮುದುಡುತ್ತದೆ. ನೀವು ಕೆಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಚರ್ಮದ ಹೆಚ್ಚು ವಯಸ್ಸು ಅದು ಸಡಿಲವಾಗುವುದನ್ನು ತಡೆಯಬಹುದು.
ಸ್ಕಿನ್ ಏಜಿಂಗ್ ಗೆ ಹಲವು ಕಾರಣಗಳಿರುತ್ತವೆ. ಕೆಲವು ವಿಷಯಗಳ ಬಗ್ಗೆ ನಾವೇನೂ ಮಾಡಲು ಸಾಧ್ಯವಿರುವುದಿಲ್ಲ. ಆದರೆ ಉಳಿದವುಗಳನ್ನು ನಾವು ಪ್ರಭಾವಗೊಳಿಸಬಹುದು.
ವಯಸ್ಸು ಹೆಚ್ಚುವುದು ಸ್ವಾಭಾವಿಕ ಪ್ರಕ್ರಿಯೆ. ಅದನ್ನು ನಾವು ತಡೆಯಲು ಸಾಧ್ಯವಿಲ್ಲ. ಕಾಲ ಕಳೆದಂತೆ ನಮ್ಮ ಮುಖದ ಮೇಲೆ ತೆಳುವಾದ ರೇಖೆಗಳು ಕಾಣಿಸಿಕೊಳ್ಳತೊಡಗುತ್ತವೆ. ನಮ್ಮ ಚರ್ಮ ತೆಳುವಾಗುತ್ತಾ ಸಡಿಲಗೊಳ್ಳುತ್ತದೆ. ಈ ಬದಲಾವಣೆಯಲ್ಲಿ ನಮ್ಮ ಜೀನ್ ನ ಪಾತ್ರವಿರುತ್ತದೆ. ವಯಸ್ಸು ಹೆಚ್ಚುತ್ತಿದ್ದಂತೆ ಆಗುವ ಬದಲಾವಣಾ ಪ್ರಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಇಂಟ್ರಿಸಿಕ್ ಏಜಿಂಗ್ ಎಂದು ಕರೆಯಲಾಗುತ್ತದೆ.
ಸ್ಕಿನ್ ಏಜಿಂಗ್ ತಡೆಯಿರಿ
ಮೇಲೆ ಹೇಳಿದಂತೆ ಸ್ಕಿನ್ ಏಜಿಂಗ್ ನ ಇತರೆ ಕೆಲವು ಅಂಶಗಳನ್ನು ನಾವು ಪ್ರಭಾವಗೊಳಿಸಬಹುದು. ಪರಿಸರ ಮತ್ತು ಜೀವನಶೈಲಿ ಇವೆರಡೂ ನಮ್ಮ ಚರ್ಮವನ್ನು ವಯಸ್ಸಿಗೆ ಮೊದಲೇ ಘಾಸಿಗೊಳಿಸುತ್ತವೆ. ನಾವು ಕೊಂಚ ಎಚ್ಚರಿಕೆ ವಹಿಸಿ ವಯಸ್ಸು ಹೆಚ್ಚು ಪ್ರಭಾವವನ್ನು ನಿಧಾನಗೊಳಿಸಬಹುದು.
ಅಪೋಲೋ ಆಸ್ಪತ್ರೆಯ ಡಾ. ಅರುಣ್, ಸ್ಕಿನ್ ಏಜಿಂಗ್ ನ್ನು ತಡೆಯುವ ಕೆಲವು ಉಪಾಯಗಳನ್ನು ತಿಳಿಸಿಕೊಡುತ್ತಾರೆ.
ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸಿ : ನಿಮ್ಮ ದಿನನಿತ್ಯ ಜೀವನ ಕ್ರಮವಿರಬಹುದು ಅಥವಾ ಸಮುದ್ರ ತೀರದಲ್ಲಿ ಕಾಲ ಕಳೆಯಲು ಹೋಗಿರಬಹುದು. ಎಲ್ಲೇ ಇದ್ದರೂ ಸೂರ್ಯಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ನೀವು ಆದಷ್ಟು ನೆರಳಿನಲ್ಲಿರುವುದು, ಬಟ್ಟೆಯಿಂದ ಶರೀರನ್ನು ಮರೆ ಮಾಡುವುದು, ಬ್ರಾಡ್ ಸ್ಪೆಕ್ ಟ್ರಮ್, ಎಸ್‌ಪಿಎಫ್ 30 ಅಥವಾ ಇನ್ನಾವುದೇ ಉತ್ತಮ ವಾಟರ್ ರೆಸಿಸ್ಟೆನ್ಸ್ ಸನ್ ಸ್ಕ್ರೀನ್ ಹಚ್ಚಿ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು.
ಸಮತೋಲನ ಆಹಾರ ಸೇವಿಸಿ : ಕೆಲವು ಅಧ್ಯಯನಗಳಿಂದ ತಿಳಿದು ಬಂದಿರುವುದೇನೆಂದರೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಚರ್ಮದ ಅಕಾಲಿಕ ಸುಕ್ಕುಗಳನ್ನು ತಡೆಗಟ್ಟಬಹುದು. ಹೆಚ್ಚು ಸಿಹಿ ತಿನಿಸು ಮತ್ತು ಕಾರ್ಬೋಹೈಡ್ರೇಟ್ ಯುಕ್ತವಾದ ಆಹಾರ ಸೇವನೆಯಿಂದ ವಯಸ್ಸು ಹೆಚ್ಚುತ್ತಿರುವ ಕುರುಹುಗಳು ತೀವ್ರ ಗತಿಯನ್ನು ಪಡೆಯುತ್ತವೆ.
ನಾನ್ ಸರ್ಜಿಕಲ್ ಚಿಕಿತ್ಸಾ ವಿಧಾನಗಳು : ಬೊಟೊಕ್ಸ್ ಮತ್ತು ಫಿಲರ್ಸ್ ಚರ್ಮ ಚಿಕಿತ್ಸೆಯ ನಾನ್ ಸರ್ಜಿಕಲ್ ವಿಧಾನಗಳಾಗಿವೆ. ಮುಖ ಚರ್ಮದ ಕಾಯಕಲ್ಪ ಚಿಕಿತ್ಸೆಗಾಗಿ ಈ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇವು ರಾಸಾಯನಿಕ ರೂಪದಿಂದ ಬೇರೆಯಾಗಿರುವುದರಿಂದ ಅವುಗಳ ಚಿಕಿತ್ಸಾ ವಿಧಾನ ಬೇರೆ ರೀತಿಯದಾಗಿರುತ್ತದೆ. ಮುಖದ ಚರ್ಮದ ಮೇಲಿನ ನವಿರಾದ ಗೆರೆಗಳು ಮತ್ತು ಸುಕ್ಕುಗಳನ್ನು ಕಡಿಮೆಗೊಳಿಸಲು ಇವೆರಡು ವಿಧಾನಗಳನ್ನು ಬಳಸಲಾಗುವುದು.
ವ್ಯಾಯಾಮ : ಹಗುರವಾದ ವ್ಯಾಯಾಮ ಬ್ಲಡ್ ಸರ್ಕ್ಯುಲೇಶನ್ ನ್ನು ಉತ್ತಮಗೊಳಿಸುತ್ತದೆ ಮತ್ತು ಇಮ್ಯೂನ್ ಸಿಸ್ಟಮ್ ನ್ನು ಬಲಗೊಳಿಸುತ್ತದೆ. ಇದರಿಂದ ಚರ್ಮ ಯೌವನಭರಿತವಾಗಿ ಕಾಣುತ್ತದೆ. ನೀವು ಧೂಮಪಾನ ಮಾಡುವವರಾದರೆ ಅದನ್ನು ನಿಲ್ಲಿಸಿ. ಧೂಮಪಾನ ಸ್ಕಿನ್ ಏಜಿಂಗ್ ನ್ನು ತೀವ್ರವಾಗಿ ಹೆಚ್ಚಿಸುತ್ತದೆ. ಅದರಿಂದ ಚರ್ಮದ ಮೇಲೆ ಸುಕ್ಕು ಮೂಡುತ್ತದೆ. ಚರ್ಮ ಮುದುಡುತ್ತದೆ.