ಬೇಸಿಗೆಯಲ್ಲಿ ಮುಖದ ಮೇಲೆ ಮೇಕಪ್‌ ಅಧಿಕ ಹೊತ್ತು ಉಳಿಯುವಂತೆ ಮಾಡುವುದು ಸುಲಭವಲ್ಲ. ಹೀಗಿರುವಾಗ ವಧು ತನ್ನ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳದಿದ್ದರೆ ಅಥವಾ ಬ್ಯೂಟಿ ಎಕ್ಸ್ ಪರ್ಟ್ಸ್ ಗೈಡೆನ್ಸ್ ನಲ್ಲಿ ಸಮರ್ಪಕ ಮೇಕಪ್‌ ಟ್ರೀಟ್‌ಮೆಂಟ್‌ ಟಿಪ್ಸ್ ಫಾಲೋ ಮಾಡದಿದ್ದರೆ ಏನಾದೀತು.

ನವ ವಧು ಮದುವೆಯ ದಿನ ತಾನು ಅಂದುಕೊಂಡಷ್ಟು ಸುಂದರವಾಗಿರದೆ ಇದ್ದರೆ ಇದೇನು ಹುಡುಗಿ ಡಲ್ ಆಗಿದ್ದಾಳೆ, ಎಂದು ಅತಿಥಿಗಳು ಉದ್ಗರಿಸುವ ಸಾಧ್ಯತೆಗಳೂ ಇವೆ!

ಬೇಸಿಗೆಯ ಮದುವೆಯಲ್ಲಿ ನವ ವಧು ವಹಿಸಬೇಕಾದ ಎಚ್ಚರಿಕೆಗಳನ್ನು ಗಮನಿಸೋಣ.

ಚರ್ಮವನ್ನು ಅತ್ಯಾಕರ್ಷಕ ಹಾಗೂ ಹೊಳೆ ಹೊಳೆಯುವಂತೆ ಮಾಡಲು ಅತಿ ಮುಖ್ಯ ಸಾಧನ ಎಂದರೆ ನೀರು! ಇದನ್ನು ಬಹುತೇಕ ಹುಡುಗಿಯರು ಅನಗತ್ಯ ಎಂದು ನಿರ್ಲಕ್ಷಿಸಿ ಮಿಸ್‌ ಮಾಡುತ್ತಾರೆ. ನಂತರ ಇದೇಕೆ ನಮ್ಮ ಚರ್ಮ ಇಷ್ಟು ಡ್ರೈ ಆಗಿದೆ ಎಂದು ಪೇಚಾಡುತ್ತಾರೆ.

ನಿಮ್ಮ ಚರ್ಮ ಸದಾ ಹೊಳೆ ಹೊಳೆಯುತ್ತಿರಲಿ ಎಂದು ಬಯಸುವಿರಾ? ಇದಕ್ಕಾಗಿ ದಿನ ಧಾರಾಳ ನೀರು ಕುಡಿಯಿರಿ. ಎಕ್ಸ್ ಟ್ರಾ  ನ್ಯಾಚುರಲ್ ಗ್ಲೋಯಿಂಗ್‌ ಸ್ಕಿನ್‌ಗಾಗಿ ಹೆಲ್ದಿ ಫುಡ್ ಸೇವಿಸಿ. ಫೈಬರ್‌ ತುಂಬಿದ ಆಹಾರ ಸಾಮಗ್ರಿ ನಿಮ್ಮ ದೈನಂದಿನ ತಿಂಡಿ ಊಟದಲ್ಲಿರಲಿ. ಇದರಿಂದ ಜೀರ್ಣಕ್ರಿಯೆಗೆ ಯಾವುದೇ ತೊಂದರೆ ಆಗದೆ ಸುಸೂತ್ರವಾಗಿ ಆಹಾರ ವಿಲೀನಗೊಳ್ಳುತ್ತದೆ.

ಎಷ್ಟೋ ಸಲ ಮುಖದಲ್ಲಿ ಡಾರ್ಕ್‌ ಸ್ಪಾಟ್ಸ್ ಅಗತ್ಯಕ್ಕಿಂತ ಹೆಚ್ಚು ಕಂಡುಬರುತ್ತದೆ, ಇದರಿಂದ ಮೇಕಪ್‌ ಮಾಡಿಕೊಳ್ಳುವುದು ಬಲು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಡಯೆಟ್‌ನಲ್ಲಿ ಇಡಿಯಾದ ದವಸಧಾನ್ಯ, ಮೊಳಕೆಕಾಳು ಹೆಚ್ಚಾಗಿರಲಿ.

ಲುಕ್ಸ್ ನಲ್ಲಿ ಇನ್ನಷ್ಟು ಗೆಟಪ್‌ ತರಲಿಕ್ಕಾಗಿ ಮದುವೆಗೆ 3 ವಾರ ಮೊದಲೇ ನಿಮ್ಮ ಚರ್ಮ, ಕೂದಲನ್ನು ಯಾರಾದರೂ ಉತ್ತಮ ಡರ್ಮಟಾಲಜಿಸ್ಟ್ ಬಳಿ ತೋರಿಸಿಕೊಳ್ಳಿ. ಏನೇ ಸಮಸ್ಯೆ ಬಂದರೂ, ನಿಮಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಲು ಸಾಧ್ಯವಾಗುತ್ತದೆ.

ಸಮ್ಮರ್‌ ಬ್ರೈಡಲ್ ಮೇಕಪ್‌

ಕ್ಲೆನ್ಸಿಂಗ್‌ ದಿ ಫೇಸ್‌ : ಇಂಡಿಯನ್‌ ಬ್ರೈಡ್ಸ್ ಬೋಲ್ಡ್  ಬ್ರೈಟ್‌ ಕಲರ್ಸ್‌ ಬಳಸಲು ಬಯಸುತ್ತಾರೆ. ಹೀಗಿರುವಾಗ ನೀವು ದೀರ್ಘಾವಧಿಯವರೆಗೆ ನಿಮ್ಮ ಲುಕ್ಸ್ ನ್ನು ಹಾಗೇ ಉಳಿಸಿಕೊಳ್ಳ ಬಯಸಿದರೆ, ಎಲ್ಲಕ್ಕೂ ಮೊದಲು ನಿಮ್ಮ ಫೇಸ್‌ನ್ನು ಚೆನ್ನಾಗಿ ಕ್ಲೀನ್‌ ಮಾಡಿ, ಟಿಶ್ಯುವಿನಿಂದ ಡ್ರೈ ಮಾಡಿ. ಆಗ ಮುಖದಲ್ಲಿ ತುಸು ಮಾತ್ರ ಕಲ್ಮಶ, ಆಯಿಲ್‌ ಇರಬಾರದು.

ಬೇಸ್‌ ಸಿದ್ಧಪಡಿಸಿ : ಎಲ್ಲಕ್ಕೂ ಮೊದಲು ಸ್ಕಿನ್‌ ಟೋನ್‌ ಇಂಪ್ರೂವ್‌ ಮಾಡಲು ಮಾಯಿಶ್ಚರೈಸರ್‌ ಅಪ್ಲೈ ಮಾಡಿ. ಬೆರಳುಗಳ ಸಹಾಯದಿಂದ ನಿಧಾನವಾಗಿ ಮಸಾಜ್‌ ಮಾಡಿ. ಆಗ ಮಾತ್ರ ಮಾಯಿಶ್ಚರೈಸರ್‌ ಚರ್ಮದ ಒಳಹೋಗಲು ಸಾಧ್ಯ.

ಅತ್ಯಾಕರ್ಷಕ ಕಂಗಳಿಗಾಗಿ : ವೆಡ್ಡಿಂಗ್‌ ದಿನದಂದು ಬ್ರೌನ್‌ ಬ್ಲೂ ಐ ಲೈನರ್‌ ಬೆರೆಸಿ ಪ್ರಯೋಗ ಮಾಡಲು ಹೋಗಬೇಡಿ. ಬದಲಿಗೆ ಜೆಟ್‌ ಬ್ಲ್ಯಾಕ್‌ ವಾಟರ್‌ಪ್ರೂಫ್‌ ಲೈನರ್‌ ಹಚ್ಚಿರಿ. ಜೊತೆಗೆ ಐ ಲ್ಯಾಶೆಸ್‌ಗೆ ಇನ್ನಷ್ಟು ವಾಲ್ಯೂಂ ನೀಡಲು ಮಸ್ಕರಾ ಹಚ್ಚಲು ಮರೆಯಬೇಡಿ. ಏಕೆಂದರೆ ಆಗ ಇದು ಕಂಗಳಿಗೆ ಹೆಚ್ಚಿನ ಅಮೇಝಿಂಗ್‌ ಟಚ್‌ ನೀಡುತ್ತದೆ.

ಫೇಸ್‌ ಫಿಕ್ಸ್ ಅಪ್‌ : ಈಗ ಪ್ರೈಮರ್‌ ಅಪ್ಲೈ ಮಾಡಿ, ಅದನ್ನು ಚರ್ಮದಲ್ಲಿ ಚೆನ್ನಾಗಿ ವಿಲೀನಗೊಳ್ಳುವಂತೆ ಮಾಡಿ. ಇದರಿಂದ ಕನ್ಸೀಲರ್‌ ಫೌಂಡೇಶನ್‌ ಎರಡೂ ತಮ್ಮ ಜಾಗಗಳಲ್ಲಿ ಭದ್ರ ಬೇರೂರಲು ಸಹಾಯ ಸಿಗುತ್ತದೆ ಹಾಗೂ ದೀರ್ಘಾವಧಿವರೆಗೆ ಮೇಕಪ್‌ ಉಳಿದುಕೊಳ್ಳುತ್ತದೆ. ಕನ್ಸೀಲರ್‌ ಮುಖದ ಕಲೆ ಸುಕ್ಕುಗಳನ್ನು ಕವರ್‌ ಮಾಡುತ್ತದೆ. ನೀವು ನಿಮ್ಮ ಸ್ಕಿನ್‌ಟೋನ್‌ನ್ನು ಮತ್ತಷ್ಟು ಇಂಪ್ರೂವ್‌ ಮಾಡಬಯಸಿದರೆ, ಯೆಲ್ಲೋ ಯಾ ಗ್ರೀನ್‌ ಕನ್ಸೀಲರ್‌ ಬಳಸಿಕೊಳ್ಳಿ.

ಫೌಂಡೇಶನ್‌ನ್ನು ಚರ್ಮದ ಮೇಲೆ ತೀಡಿ, ಅದನ್ನು ಮೇಕಪ್‌ ಬ್ರಶ್‌ ಯಾ ಸ್ಪಾಂಜ್‌ನಿಂದ ಚೆನ್ನಾಗಿ ಮರ್ಜ್‌ ಮಾಡಿ. ನೀವು ಮ್ಯಾಟ್‌ ಫಿನಿಶಿಂಗ್‌ನ ಫೌಂಡೇಶನ್‌ ಬಳಸುವಿರಾದರೆ, ಹೆಚ್ಚು ಬೆಟರ್‌ ಆಗಿರುತ್ತದೆ. ಏಕೆಂದರೆ ಫೌಂಡೇಶನ್‌ನಿಂದ ಫೇಸ್‌ ಮೇಲೆ ಫ್ಲಾಟ್‌ ಎಫೆಕ್ಟ್ಸ್ ಬರುವುದರಿಂದ, ಫೋಟೋ ಮೇಲೆ ಪ್ರಭಾವ ಬೀರಿದಂತಾಗುತ್ತದೆ.

ಗ್ಲೋಯಿಂಗ್‌ ಲುಕ್ಸ್ ಗಾಗಿ ಚೀಕ್‌ ಬೋನ್ಸ್, ನೋಸ್‌, ಬ್ರಿಜ್‌, ಹಣೆಯ ನಡುನಡುವೆ ಮತ್ತು ಕ್ಯುಪಿಡ್‌ ಬೋನ್ ಮೇಲೆ ಹೈಲೈಟರ್‌ ಅಪ್ಲೈ ಮಾಡಿ. ಇದರ ರಿಸ್ಟ್‌ನ್ನು ಖುದ್ದು ನೀವೇ ಬಂದು ಗಮನಿಸಿ. ಜೊತೆಗೆ ಬ್ರಾಂಝರ್‌ ಬಳಸಿ ನೀವು ಫೇಸ್‌ಗೆ ಶೇಪ್‌ ನೀಡಬಹುದು.

ಲಿಪ್‌ಸ್ಟಿಕ್‌ನಿಂದ ಮಿಂಚುವ ಸೌಂದರ್ಯ : ಎಲ್ಲಿಯವರೆಗೂ ತುಟಿಗಳು ಸುರಸುಂದರವಾಗಿ ಶೋಭಿಸುವುದಿಲ್ಲವೋ, ಅಲ್ಲಿಯವರೆಗೂ ನಿಮ್ಮ ಔಟ್‌ಫಿಟ್ಸ್ಗೆ ಗ್ರೇಟ್‌ ಗೆಟಪ್‌ ಸಿಗುವುದಿಲ್ಲ.  ಹೀಗಾಗಿ ತೆಳು ತುಟಿಗಳ ಮೇಲೆ ಪಿಂಕ್‌ ಶೇಡ್‌ ಮತ್ತು ದುಂಡಗಿನ ತುಟಿಗಳಿಗೆ ಮೆರೂನ್‌ ಯಾ ಡಾರ್ಕ್‌ ಶೇಡ್‌ ಬಳಸಿರಿ.

ಗಮನವಿರಲಿ, ರೆಗ್ಯುಲರ್‌ ಪೆಡಿಕ್ಯೂರ್‌ ಮೆನಿಕ್ಯೂರ್‌ ಮಾಡಿಸಲು ಮರೆಯದಿರಿ. ಮದುವೆಗೆ 7 ವಾರ ಮುಂಚೆಯೇ, ಮೊದಲಿನಿಂದಲೇ ಫೇಶಿಯಲ್ ಸ್ಕಿನ್‌ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಲು ಆರಂಭಿಸಿ. ಆಗ ಮಾತ್ರ ನೀವು ನಿಮ್ಮ ಜೀವನದ  ಈ ವಿಶಿಷ್ಟ ಘಳಿಗೆಯಲ್ಲಿ ಎಲ್ಲರಿಗಿಂತ  ಸುರಸುಂದರ, ಅತ್ಯಾಕರ್ಷಕ ಆಗಿ ಕಾಣಲು ಸಾಧ್ಯ.

– ಪಾರ್ವತಿ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ