ಮದುವೆಯ ದಿನ ಪ್ರತಿಯೊಬ್ಬ ಹುಡುಗಿಗೂ ಒಂದು ವಿಶೇಷ ದಿನವೇ ಆಗಿಬಿಟ್ಟಿರುತ್ತದೆ. ಆ ದಿನದಂದು ತಾನು ಅತ್ಯಂತ ಸುಂದರವಾಗಿ ಕಾಣಬೇಕೆಂಬುದು ಅವಳ ಕನಸಾಗಿರುತ್ತದೆ. ಸೌಂದರ್ಯ ಎನ್ನುವುದು ಪ್ರತಿಯೊಬ್ಬರಿಗೂ ಒಂದೇ ದಿನ ದೊರಕುವುದಿಲ್ಲ. ಅದಕ್ಕಾಗಿ ಏನೇನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಪೌಷ್ಟಿಕ ಉಪಾಹಾರ ಅತ್ಯವಶ್ಯ
ನೀವು ಮುಂಜಾನೆ ಎದ್ದಾಗ ನಿಮ್ಮ ಗ್ಲೂಕೋಸ್ ಹಾಗೂ ರಕ್ತದೊತ್ತಡದ ಮಟ್ಟ ಅತ್ಯಂತ ಕೆಳಮಟ್ಟದಲ್ಲಿರುತ್ತದೆ. ಗ್ಲೂಕೋಸ್ ನಿಮ್ಮ ಮೆದುಳು ಹಾಗೂ ಕೇಂದ್ರ ನರಮಂಡಲಕ್ಕೆ ಶಕ್ತಿ ಸ್ಛೂರ್ತಿಯ ಮುಖ್ಯ ಮೂಲವಾಗಿದೆ.
ಪೌಷ್ಟಿಕ ಉಪಾಹಾರ ಗ್ಲೂಕೋಸ್‌ನ ಕೊರತೆ ನೀಗಿಸಿ ನಿಮಗೆ ಹೊಸ ಶಕ್ತಿ ಸ್ಛೂರ್ತಿ ಕೊಡುತ್ತದೆ. ಯಾರು ತಮ್ಮ ತೂಕ ಇಳಿಸುವ ಬಗ್ಗೆ ಯೋಚಿಸುತ್ತಿರುತ್ತಾರೋ, ಅವರು ಮುಂಜಾನೆ ಉಪಾಹಾರ ತೊರೆಯುವುದರಿಂದ ತಾವು ಅಷ್ಟು ಕ್ಯಾಲೋರಿ ಉಳಿಸುತ್ತಿದ್ದೇವೆ ಎಂದು ಯೋಚಿಸುತ್ತಾರೆ.
ತಜ್ಞರ ಪ್ರಕಾರ, ಪೌಷ್ಟಿಕ ಆಹಾರ ಸೇವನೆಯಿಂದ ನಿಮ್ಮ ಚಯಾಪಚಯ ಕ್ರಿಯೆ ಸಮರ್ಪಕವಾಗಿ ನಡೆಯುತ್ತಿರುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಚಯಾಪಚಯ ಕ್ರಿಯೆಯನ್ನು ತೀವ್ರಗೊಳಿಸುವುದು. ಅಂದರೆ ನಮ್ಮ ದೇಹದಲ್ಲಿ ಈ ಪ್ರಕ್ರಿಯೆ ನಡೆಯುತ್ತಾ ಇರಬೇಕು. ಪೌಷ್ಟಿಕ ಉಪಾಹಾರ ಯಾವುದೆಂದರೆ, ಅದು ಇಡೀ ದಿನದ ಮೂರನೇ ಒಂದರಷ್ಟು ಕ್ಯಾಲೋರಿಯನ್ನು ನಿಮಗೆ ಒದಗಿಸುವಂತಿರಬೇಕು.
ಯಾರು ಉಪಾಹಾರ ಸೇವನೆ ಮಾಡುವುದಿಲ್ಲವೋ ಅವರು ತಮ್ಮ ದಿನಚರಿಯಲ್ಲಿ ಉಪಾಹಾರ ಸೇರ್ಪಡೆ ಮಾಡುವ ಕೆಲವು ಸುಲಭ ವಿಧಾನಗಳು ಈ ರೀತಿಯಾಗಿವೆ :
ಒಂದು ಕಪ್ ಟೀ ಅಥವಾ ಒಂದು ಗ್ಲಾಸ್ ಜ್ಯೂಸ್‌ನೊಂದಿಗೆ ಹೋಲ್ ವೀಟ್ ಟೋಸ್ಟ್ ನ ಉಪಾಹಾರದಿಂದ ನಿಮ್ಮ ದಿನ ಆರಂಭಿಸಿ. ಕೆಲವು ದಿನಗಳ ಬಳಿಕ 1 ಹಣ್ಣನ್ನು ಕೂಡ ಅದರಲ್ಲಿ ಸೇರ್ಪಡೆ ಮಾಡಿ.
ಆ ಬಳಿಕ ಉಪಾಹಾರಕ್ಕಾಗಿ ಕೇವಲ 1 ಹಣ್ಣನ್ನು ಆಯ್ಕೆ ಮಾಡಿಕೊಳ್ಳಿ. ಅದು ತಾಜಾ ಆಗಿರಬೇಕಾದುದು ಅತ್ಯವಶ್ಯ. ಅದು ನಿಮಗೆ ನಾರಿನಂಶ, ನೈಸರ್ಗಿಕ ಶರ್ಕರ ಮತ್ತು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ನೀಡುತ್ತದೆ. ಸೇಬು ನಿಮ್ಮ ಆಯ್ಕೆಯ ಅತ್ಯಂತ ಸೂಕ್ತ ಹಣ್ಣು. ಇದರ ಹೊರತಾಗಿ ನೀವು ಕಿತ್ತಳೆ, ದ್ರಾಕ್ಷಿ, ಮಾವು, ಕಲ್ಲಂಗಡಿ ಅಥವಾ ನೇರಳೆ ಹಣ್ಣುಗಳನ್ನು ಸೇವಿಸಬಹುದು.
ಬೇರೆ ತೆರನಾದ ಕೆಲವು ಉಪಾಹಾರಗಳಿಂದಲೂ ನಿಮ್ಮ ದೈನಂದಿನ ಚಟುವಟಿಕೆ ಆರಂಭಿಸಬಹುದು. ಅವನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು ಇಲ್ಲಿ ರಾತ್ರಿಯೇ ಅದಕ್ಕಾಗಿ ಸಿದ್ಧತೆ ಮಾಡಿ ಇಟ್ಟುಕೊಳ್ಳಬಹುದು.
ಸಲಾಡ್ : ಲೆಟ್ಯೂಸ್‌ನ ಎಲೆಗಳು, ಪಾಲಕ್‌ನ ಸೊಪ್ಪು, ಅಖ್ರೋಟು, ಸೇಬಿನ ತುಂಡು ಮತ್ತು ಮೊಟ್ಟೆ ಇವನ್ನು ರಾತ್ರಿಯೇ ಒಂದು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಹಾಕಿಡಿ. ಮುಂಜಾನೆ ಇದರಲ್ಲಿ ಸ್ವಲ್ಪ ಆಲಿಲ್ ಆಯಿಲ್, ವಿನಿಗರ್ ಮಿಶ್ರಣ ಮಾಡಿಕೊಂಡು ಸೇವಿಸಿ. ಸಸ್ಯಾಹಾರಿಗಳು ಮೊಟ್ಟೆಯೊಂದನ್ನು ಬಿಟ್ಟು ಉಳಿದದ್ದನ್ನು ಸೇವಿಸಬಹುದು.
ಹಾರ್ಡ್ ಬಾಯಿಲ್ಡ್ ಮೊಟ್ಟೆ ಹಣ್ಣಿನ ಜೊತೆ : ರಾತ್ರಿ 2 ಮೊಟ್ಟೆಗಳನ್ನು ಬೇಯಿಸಿಕೊಂಡು ಅವನ್ನು ಫ್ರಿಜ್‌ನಲ್ಲಿ ಇಡಿ. ಮುಂಜಾನೆ ಮೊಟ್ಟೆಯ ಕವಚ ತೆಗೆದು ಹಳದಿ ಭಾಗವನ್ನು ಬೇರ್ಪಡಿಸಿ. ಯಾರಿಗೆ ಕೊಲೆಸ್ಟ್ರಾಲ್‌ನ ಹೆಚ್ಚಿನ ಸಮಸ್ಯೆ ಇದೆಯೋ ಅವರು ಹಳದಿ ಭಾಗವನ್ನು ಸೇವಿಸಬಾರದು. ಮೊಟ್ಟೆಯನ್ನು ಉಪ್ಪು ಹಾಗೂ ಮೆಣಸಿನ ಜೊತೆಗೆ ಸೇವಿಸಿ. ಬಳಿಕ ಒಂದು ಸೇಬು ತಿನ್ನಿ.