ನಮ್ಮ ತ್ವಚೆ ದಿನವಿಡೀ ಬಿಸಿಲು, ಧೂಳು, ಮಾಲಿನ್ಯ ಹೀಗೆ ಹತ್ತು ಹಲವು ಸಂಗತಿಗಳನ್ನು ಎದುರಿಸುತ್ತಿರುತ್ತದೆ. ಈ ಕಾರಣದಿಂದ ನಮ್ಮ ರೋಮರಂಧ್ರಗಳು ಮುಚ್ಚಿ ಹೋಗುತ್ತವೆ. ಹೀಗಾಗಿ ತ್ವಚೆ ಹಳದಿಯಾಗಿರುವಂತೆ ಗೋಚರಿಸುತ್ತದೆ. ಆಮ್ಲಜನಕದ ಕೊರತೆಯಿಂದ ಹೀಗಾಗುತ್ತದೆ ಎಂದು ಹೇಳಲಾಗುತ್ತದೆ.

ಇಂತಹದರಲ್ಲಿ ನಮ್ಮ ತ್ವಚೆಗೆ ಬ್ಲೀಚ್‌ನ ಅವಶ್ಯಕತೆ ಉಂಟಾಗುತ್ತದೆ. ಇದು ಚರ್ಮದ ಜೀವಕೋಶಗಳಿಗೆ ಆಮ್ಲಜನಕ ಪೂರೈಸಿ ಪೋಷಣೆ ಒದಗಿಸುತ್ತದೆ. ಬ್ಲೀಚ್‌ ಮುಖಾಂಚರ ಯಾವುದೇ ನೋವಿಲ್ಲದೆ ತ್ವಚೆಗೆ ಯಾವುದೇ ಹಾನಿ ಮಾಡದೆಯೇ ಬೇಡದ ಕೂದಲಿನಿಂದ ಮುಕ್ತಿ ದೊರಕಿಸಿಕೊಡುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ಯಾಫ್ರನ್‌, ಗೋಲ್ಡ್, ಪರ್ಲ್, ಆ್ಯಲೋವೆರಾ, ಟರ್ಮರಿಕ್‌ ಹರ್ಬಲ್, ಆಕ್ಸಿ ಮುಂತಾದ ಬೇರೆ, ಬೇರೆ ಬಗೆಯ ಬ್ಲೀಚ್‌ಗಳು ಲಭ್ಯವಿವೆ. ಅದರಿಂದಾಗಿ ಗೌರವರ್ಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಒಂದು ಹೊಸ ಇನೋವೇಶನ್‌ನೊಂದಿಗೆ ಡಾಬರ್‌ ಕಂಪನಿ ಮಾರುಕಟ್ಟೆಯಲ್ಲಿ ಅಮೋನಿಯಾ ರಹಿತ ಬ್ಲೀಚ್‌ವೊಂದನ್ನು ತೆಗೆದುಕೊಂಡು ಬಂದಿದೆ. ಅದರಿಂದಾಗಿ ಯಾವುದೇ ರೀತಿಯ ತೀಕ್ಷ್ಣ ವಾಸನೆಯಾಗಲಿ, ಕಣ್ಣಿಂದ ನೀರು ಸುರಿಯುವುದಾಗಲೀ ಆಗುವುದಿಲ್ಲ. ಅದರಲ್ಲಿ ಒಂದು ಚಮಚ ಕೂಡ ಇರುತ್ತದೆ. ಅದರ ಸಹಾಯದಿಂದ ಕ್ರೀಮ್ ಹಾಗೂ ಆ್ಯಕ್ಟಿವೇಟರ್‌ನ್ನು ಸರಿಯಾದ ಪ್ರಮಾಣದಲ್ಲಿ ಮಿಕ್ಸ್ ಮಾಡಬಹುದಾಗಿದೆ.

ಬ್ಲೀಚ್‌ ಮಾಡು ಮುನ್ನ

ಬ್ಲೀಚ್‌ ಬೇಡದ ಕೂದಲನ್ನು ನಿವಾರಿಸುವ ಕೆಲಸ ಮಾಡುತ್ತದೆ. ಆದರೆ ಪ್ರತಿಯೊಬ್ಬರ ತ್ವಚೆ ಮತ್ತು ಕೂದಲು ಬೇರೆ ಬೇರೆ ಪ್ರಕಾರದ್ದಾಗಿರುತ್ತದೆ. ಹೀಗಾಗಿ ಬ್ಲೀಚ್‌ ಮಾಡು ಮೊದಲು ಟೆಸ್ಟ್ ಮಾಡುವುದು ಅತ್ಯವಶ್ಯಕ. ಅದಕ್ಕಾಗಿ ಕ್ರೀಮ್ ಮತ್ತು ಆ್ಯಕ್ಟಿವೇಟರ್‌ನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮುಂಗೈಗೆ ಲೇಪಿಸಿ ನೋಡಿ. ಅಲ್ಲಿ ನಿಮಗೆ ಯಾವುದೇ ಪ್ರಕಾರದ ಅಲರ್ಜಿ ಇಲ್ಲ ತಾನೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಮುಖಕ್ಕೆ ಬ್ಲೀಚ್‌ ಲೇಪಿಸಿಕೊಳ್ಳುವ ಮುನ್ನ ಅದನ್ನು ಕ್ಲೆನ್ಸಿಂಗ್‌ ಮಿಲ್ಕ್ ಅಥವಾ ಮಂಜುಗಡ್ಡೆಯ ನೀರಿನಿಂದ ಸ್ವಚ್ಛಗೊಳಿಸಿ. ಏಕೆಂದರೆ ಮುಖದ ಮೇಲೆ ಜಮೆಗೊಂಡಿರುವ ಧೂಳು ಮಣ್ಣು ನಿವಾರಣೆಗೊಂಡು ಮುಖದ ಮೇಲೆ ಬ್ಲೀಚ್‌ನ ಪರಿಣಾಮ ಸ್ಪಷ್ಟವಾಗಿ ಗೋಚರಿಸಬೇಕು.

ಹೇಗೆ ಬಳಸುವುದು?

ಕ್ರೀಮ್ ಹಾಗೂ ಆ್ಯಕ್ಟಿವೇಟರ್‌ ಇವೆರಡನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಲೇಪಿಸಿದಾಗಲೇ ಅದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ವೇಳೆ ಆ್ಯಕ್ಟಿವೇಟರ್‌ ಪ್ರಮಾಣ ಜಾಸ್ತಿಯಾದರೆ ಅದು ತ್ವಚೆಗೆ ಉರಿಯನ್ನುಂಟು ಮಾಡುತ್ತದೆ. ಬ್ಲೀಚ್‌ನ್ನು ಯಾವಾಗಲೂ ಗಾಜಿನ ಬಟ್ಟಲ್ಲೀ ಮಿಕ್ಸ್ ಮಾಡಬೇಕು. ಒಂದು ವೇಳೆ ನೀವು ಸ್ಟೀಲ್ ‌ಪಾತ್ರೆಯಲ್ಲಿ ಅದರ ಮಿಶ್ರಣ ಮಾಡಿದರೆ ಅದರಿಂದ ಕೆಮಿಕಲ್ ರಿಯಾಕ್ಷನ್‌ ಆಗುವ ಸಾಧ್ಯತೆ ಇರುತ್ತದೆ.

ಬ್ಲೀಚ್‌ನ್ನು ಎಲ್ಲಕ್ಕೂ ಮುಂಚೆ ಮೂಗಿನ ಬಳಿ ಲೇಪಿಸಿ. ಏಕೆಂದರೆ ಅಲ್ಲಿಯೇ ಹೆಚ್ಚಿನ ರೋಮಗಳು ಇರುತ್ತವೆ. ಕಣ್ಣಿನ ಬಳಿಯ ಭಾಗ ಅತ್ಯಂತ ಸೂಕ್ತವಾದುದಾಗಿರುತ್ತದೆ. ಹೀಗಾಗಿ ಕಣ್ಣುಗಳನ್ನು ಬ್ಲೀಚ್‌ನಿಂದ ರಕ್ಷಿಸಿಕೊಳ್ಳಲು ಹತ್ತಿಯ ತುಂಡುಗಳನ್ನು ಗುಲಾಬಿ ಜಲದಲ್ಲಿ ಅದ್ದಿ ಕಣ್ಣುಗಳ ಮೇಲ್ಭಾಗದ ಮೇಲೆ ಇಡಿ. ತ್ವಚೆಗೆ ತಕ್ಕಂತೆ ಬ್ಲೀಚ್‌ನ ಆಯ್ಕೆ ಒಂದು ವೇಳೆ ನಿಮ್ಮ ತ್ವಚೆ ಸೆನ್ಸಿಟಿವ್ ‌ಆಗಿದ್ದಲ್ಲಿ ಲ್ಯಾಕ್ಟೋ ಬ್ಲೀಚ್‌ ನಿಮಗೆ ಸೂಕ್ತ. ಏಕೆಂದರೆ ಲ್ಯಾಕ್ಟೋ ಬ್ಲೀಚ್‌ ಬಹುಬೇಗ ಹಾರ್ಡ್‌ ಆಗುವುದಿಲ್ಲ. ಹೀಗಾಗಿ ಇದರಿಂದ ಯಾವುದೇ ಬಗೆಯ ಅಲರ್ಜಿ ಆಗುವುದಿಲ್ಲ. ಆಕ್ಸಿ ಬ್ಲೀಚ್‌ ಎಲ್ಲ ಬಗೆಯ ತ್ವಚೆಗೂ ಉತ್ತಮವಾಗಿರುತ್ತದೆ. ಒಂದು ವೇಳೆ ನಿಮ್ಮ ತ್ವಚೆ ಗೌರವರ್ಣದಿಂದ ಕೂಡಿದ್ದರೆ ಸ್ಯಾಫ್ರನ್‌ ಬ್ಲೀಚ್‌ ಮತ್ತು ತ್ವಚೆ ಡಾರ್ಕ್‌ ಆಗಿದ್ದರೆ ಪರ್ಲ್ ಬ್ಲೀಚ್‌ ಆಯ್ದುಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ