ಶುಷ್ಕ, ಒರಟಾದ, ಕೈಕಾಲುಗಳು ಸಹ ಈ ಚಿಕಿತ್ಸೆಯಿಂದ ಕಳೆಗೊಂಡು ಮೃದುವಾಗಿ ಹೊಳೆಯುತ್ತಿರಲು ಚಳಿಗಾಲವನ್ನು ಇತರ ಋತುಗಳಿಗಿಂತ ಎಷ್ಟೋ ಉತ್ತಮ ಮಟ್ಟದ್ದು ಎಂದು ನಂಬಲಾಗಿದೆ. ಆದರೆ ಈ ಋತುವಿನಲ್ಲಿ ಚರ್ಮ ಬಹಳ ಡ್ರೈ ಹಾಗೂ ಒರಟೊರಟಾಗುತ್ತದೆ. ಇದರಿಂದಾಗಿ ಅದು ನಿರ್ಜೀವವಾಗಿ ತೋರುತ್ತದೆ. ಈ ಋತುವಿನಲ್ಲಿ ಚರ್ಮಕ್ಕೆ ಆರ್ದ್ರತೆ ಅಂದರೆ ಮಾಯಿಶ್ಚರೈಸಿಂಗ್‌ನ ವಿಶೇಷ ಅಗತ್ಯವಿದೆ. ಚಳಿಗಾಲದಲ್ಲಿ ಸಾಮಾನ್ಯಾಗಿ ಆರ್ದ್ರತೆಯ ಕೊರತೆಯ ಕಾರಣ ತುಟಿಗಳು ಒಡೆಯುತ್ತವೆ. ಕೈ ಕಾಲುಗಳ ಚರ್ಮದಲ್ಲಿ ಬಿಳಿಯ ಒಡಕು ಕಾಣಿಸುತ್ತದೆ. ಹಿಮ್ಮಡಿಗಳು ಸಹ ಬೇಗನೆ ಒಡೆಯುತ್ತವೆ. ಒಮ್ಮೊಮ್ಮೆ ಅದರಿಂದ ರಕ್ತ ಸಹ ತೊಟ್ಟಿಕ್ಕುತ್ತದೆ. ಅದರಿಂದ ನೋವು ಹೆಚ್ಚುತ್ತದೆ, ಕೆಲವರಿಗಂತೂ ಪಾದ ಊರಲಿಕ್ಕೂ ಆಗುವುದಿಲ್ಲ. ಹೀಗಾಗಿ ಈ ಋತುವಿನಲ್ಲಿ ಚರ್ಮದ ಸಂರಕ್ಷಣೆ, ಆರೈಕೆ ಬಲು ಮುಖ್ಯ. ಹೀಗಾದಾಗ ಸಾಧಾರಣ ಮೆನಿಕ್ಯೂರ್‌ ಪೆಡಿಕ್ಯೂರ್‌ನಿಂದ ಯಾವುದೇ ಲಾಭವಿಲ್ಲ. ಬದಲಿಗೆ ವಿಶೇಷ ಬಗೆಯ ಮೆನಿಕ್ಯೂರ್‌ ಪೆಡಿಕ್ಯೂರ್‌ನ ಅಗತ್ಯವಿದೆ. ಹೀಗಾಗಿ ನೀವು ಕ್ಯಾಂಡಲ್ ಮೆನಿಕ್ಯೂರ್‌ ಪೆಡಿಕ್ಯೂರ್‌ ಥೆರಪಿ ಬಳಸಬೇಕಾಗುತ್ತದೆ. ಇದರ ಬಳಕೆಯಿಂದ ಚರ್ಮ ಮೃದು, ಕೋಮಲವಾಗಿ, ಹೊಳೆ ಹೊಳೆಯುತ್ತದೆ. ಕ್ಯಾಂಡಲ್ ಮೆನಿಕ್ಯೂರ್‌ ಪೆಡಿಕ್ಯೂರ್‌ ಈ ಚಿಕಿತ್ಸೆಯಲ್ಲಿ ಕೆಲವು ವಿಶಿಷ್ಟ ಬಗೆಯ ಕ್ಯಾಂಡಲ್ ಬಳಸುತ್ತಾರೆ. ಅವನ್ನು ಕರಗಿಸಿ ಚರ್ಮದ ಅಗತ್ಯ ಭಾಗಗಳ ಮೇಲೆ ಬೀಳುವಂತೆ ಮಾಡಲಾಗುತ್ತದೆ. ಹೀಗಾಗಿ ಮೆನಿಕ್ಯೂರ್‌ ಪೆಡಿಕ್ಯೂರ್‌ನಲ್ಲಿ ಇದು ವಿಶಿಷ್ಟ ವಿಧಾನವಾಗಿದೆ.

ಇದನ್ನು ಬಳಸುವುದು ಹೇಗೆ?

ಕ್ಯಾಂಡಲ್ ಥೆರಪಿಯ ಮೂಲಕ ಮೆನಿಕ್ಯೂರ್‌ ಪೆಡಿಕ್ಯೂರ್‌ನ ಆರಂಭವನ್ನು ಸಾಧಾರಣ ವಿಧಾನದಲ್ಲೇ ಮಾಡಲಾಗುತ್ತದೆ. ಎಲ್ಲಕ್ಕೂ ಮೊದಲು ಉಗುರನ್ನು ಕತ್ತರಿಸಿ ಫೈಲ್ ಮಾಡಿಕೊಳ್ಳುವುದು, ಶೇಪಿಂಗ್‌, ಕ್ಯುಟಿಕಲ್ಸ್ ಮೇಲೆ ಕ್ರೀಂ ಹಚ್ಚಿ ಇವನ್ನು ಶುಚಿಗೊಳಿಸಿ ರೆಡಿ ಮಾಡಬೇಕು. ಇದಾದ ನಂತರ ಸ್ಪೆಷಲ್ ಕ್ಯಾಂಡಲ್ಸ್ ಅನ್ನು ಕರಗಿಸಿ, ರೆಡಿ ಇರುವ ವ್ಯಾಕ್ಸ್ನ್ನು ಸ್ಕ್ರಬ್‌ ರೂಪದಲ್ಲಿ ಬಳಸಲಾಗುತ್ತದೆ. ಇದರಿಂದ ಡೆಡ್‌ ಸ್ಕಿನ್‌ ತೊಲಗುತ್ತದೆ. ನಂತರ ಹಾಟ್‌ ಟಿ‌ ರ್ಯಾಪ್‌ನಿಂದ ಚರ್ಮವನ್ನು ಶುಚಿಗೊಳಿಸಬಹುದು. ಇದಾದ ಮೇಲೆ ಕ್ರೀಂ ತಯಾರಿಸಲು ಮತ್ತೆ ಕ್ಯಾಂಡಲ್ ಅನ್ನು ಕರಗಿಸಲಾಗುತ್ತದೆ. ಈ ವ್ಯಾಕ್ಸ್ನಿಂದ ತಯಾರಾದ ಕ್ರೀಂನ ಬಳಕೆ ಉತ್ತಮ ರೀತಿಯಲ್ಲಿ ಮಾಯಿಶ್ಚರೈಸ್‌ ಮಾಡಲು ಬಳಸಲಾಗುತ್ತದೆ. ಇದಾದ ಮೇಲೆ ಸ್ಕಿನ್‌ ಬ್ರೈಟ್‌ನಿಂಗ್‌ ಪ್ಯಾಕ್‌ನ ಬಳಕೆಯನ್ನು ಕೈಗಳು, ಕಾಲುಗಳ ಶುಷ್ಕ ಚರ್ಮಕ್ಕೆ ಮಾಡಲಾಗುತ್ತದೆ. ಕ್ಯಾಂಡಲ್ ಥೆರಪಿಯ ಬಳಕೆ ಕೈಕಾಲುಗಳಿಗೆ ಹೆಚ್ಚಿನ ಆರ್ದ್ರತೆ ಒದಗಿಸುತ್ತದೆ. ಇದರ ಜೊತೆಗೆ ಧಾರಾಳವಾಗಿ ನೀರು ಕುಡಿಯಬೇಕು, ತಾಜಾ ಹಸಿ ತರಕಾರಿಗಳನ್ನು ಸಲಾಡ್‌ ಆಗಿ, ಹಣ್ಣುಗಳನ್ನು ಸೇವಿಸುತ್ತಾ, ನೀರು ಮಜ್ಜಿಗೆ, ಎಳನೀರು ಮುಂತಾದ ಲಿಕ್ವಿಡ್‌ ಡಯೆಟ್‌ಗೆ ಪ್ರಾಧಾನ್ಯತೆ ಕೊಡಿ.

- ಜಿ. ಮೀರಾ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ