– ರಾಘವೇಂದ್ರ ಅಡಿಗ ಎಚ್ಚೆನ್.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟಹಬ್ಬದ ಸಂಭ್ರಮ. ಧ್ರುವ ಸರ್ಜಾ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿಯೇ ಅಭಿಮಾನಿಗಳು ಬೆಂಗಳೂರಿನ ಕೆ.ಆರ್.ರಸ್ತೆಯ ಧ್ರುವ ಸರ್ಜಾ ಮನೆ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳು ಧ್ರುವ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾತ್ರಿಯೇ ಧ್ರುವ ಸರ್ಜಾ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷ ಅಂದರೇ, ಅಭಿಮಾನಿಗಳಿಗೆ ಸಪ್ರ್ರೈಸ್ ಗಿಫ್ಟ್ ಸಿಗಲಿದೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯ ಅಭಿಯಾನವನ್ನು ನಟ ಧ್ರುವ ಸರ್ಜಾ ಆರಂಭಿಸಿದ್ದಾರೆ. ಅಭಿಮಾನಿಗಳು ಹಾಗೂ ಬೇರೆ ಬೇರೆಯವರು ನೀಡಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ , ವಿದ್ಯಾರ್ಥಿಗಳಿಗೆ ದಾನವಾಗಿ ನೀಡಲು ನಿರ್ಧರಿಸಿದ್ದಾರೆ.
ಇನ್ನೂ ಹುಟ್ಟುಹಬ್ಬದ ವೇಳೆ ಮಾಧ್ಯಮಗಳ ಜೊತೆ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ. “ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ. ನಾನು ನನ್ನ ಕೆಲಸದ ಕಡೆಗೆ ಗಮನ ಕೊಡ್ತೀನಿ. ಕೆ.ಡಿ ಸಿನಿಮಾದ ಕೆಲಸ ಎಲ್ಲಾ ಮುಗಿಸಿದ್ದೀನಿ. ರಿಲೀಸ್ ವಿಚಾರ ಪ್ರೊಡಕ್ಷನ್ ಹೌಸ್, ನಿರ್ದೇಶರು ತಿಳಿಸಬೇಕು. ಸುದೀಪ್ ಜೊತೆಗೆ ಕೆಲಸ ಮಾಡಿ ಖುಷಿ ಕೊಟ್ಟಿದೆ. ಅವರು ನಮ್ಮ ಸೀನಿಯರ್. ಅವರ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಮುಂದೆ ದುನಿಯಾ ಸೂರಿ ಜೊತೆ ಸಿನಿಮಾ ಮಾಡ್ತಿದ್ದೀನಿ. ಕೆಲಸಗಳು ನಡೀತಿದೆ. ಎಲ್ಲವೂ ಅಧಿಕೃತ ಆದ ನಂತರ ಮಾಹಿತಿ ನೀಡ್ತೀನಿ ಎಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದಾರೆ.
ಧ್ರುವ ಹುಟ್ಟುಹಬ್ಬಕ್ಕೆ ನಿರ್ಮಾಪಕ ಉಮಾಪತಿಗೌಡ ಹೊಸ ಸಿನಿಮಾ ಘೋಷಣೆ
ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಆಗಮಿಸಿದ ನಿರ್ಮಾಪಕ ಉಮಾಪತಿ ಗೌಡ ಧ್ರುವ ಸರ್ಜಾಗೆ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಬಳಿಕ ಮಾತನಾಡಿದ ಅವರು. ಧ್ರುವ ಸರ್ಜಾ ಅವರು ನಾಯಕರಾಗಿ ತಮ್ಮ ಬ್ಯಾನರ್ ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕುಣಿದಾಡಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ ಈ ಹಿಂದೆ ಸುದೀಪ್ ಹಾಗೂ ದರ್ಶನ್ ಅವರಿಗೆ ಸಿನಿಮಾ ಮಾಡಿರುವ ನಿರ್ಮಾಪಕರು. ಇದೀಗ ಧ್ರುವ ಸರ್ಜಾ ಅವರ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಧ್ರುವ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ಪಯಣ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಳಿಕ ಉಮಾಪತಿಗೌಡ ಅವರ ಚಿತ್ರದಲ್ಲಿ ನಟಿಸುವ ಪ್ಲ್ಯಾನ್ ಕೂಡಾ ನಡೆಯುತ್ತಿದೆ.