ಮೈಸೂರಿನ ಹುಡುಗಿ ಅಂದಾಕ್ಷಣ ಪ್ರತಿಭೆ ಇರಬೇಕು. ಕನ್ನಡ ಶುದ್ಧವಾಗಿ ಮಾತಾಡಬಲ್ಲವರು ಎನ್ನುವ ನಂಬಿಕೆ ಎಲ್ಲರಲ್ಲೂ ಇರೋದು ಸರ್ವೇಸಾಮಾನ್ಯ. ಇಂಥವೊಂದು ಲೇಬಲ್ ಹೊತ್ತು ಬಂದಿರುವ ಹೊಸ ಪ್ರತಿಭೆ ಅಮೃತಾ ಅಯ್ಯಂಗಾರ್‌. ಮೈಸೂರಿನಲ್ಲೇ ವಿದ್ಯಾಭ್ಯಾಸ, ಮನೆ, ಬೆಳೆದದ್ದು. ರಂಗಭೂಮಿ ನಂಟು ಇದ್ದರೂ ಯಾವತ್ತೂ ನಟಿಸಲಿಲ್ಲವಂತೆ. ಸೈಕಾಲಜಿ ಓದಿರೋದು. ಅದರಲ್ಲೂ ಕ್ರಿಮಿನಾಲಜಿ. ಸಾಕಷ್ಟು ಆಸಕ್ತಿ ವಹಿಸಿ ಎಲ್ಲವನ್ನೂ ತಿಳಿದುಕೊಂಡಿರುವ ಅಮೃತಾ, ಕೈಯಲ್ಲೀಗ ಸಾಕಷ್ಟು ಚಿತ್ರಗಳಿವೆ. ಇದೆಲ್ಲ ಹೇಗೆ ಸಾಧ್ಯವಾಯ್ತು? ಎಲ್ಲವನ್ನೂ ಅಮೃತಾಳೆ ಹೇಳುತ್ತಾಳೆ.

ನಿಜ ಹೇಳಬೇಕೆಂದರೆ ನನಗೆ ಸಿನಿಮಾ ನಟಿಯಾಗಬೇಕೆಂಬ ಕಲ್ಪನೆಯೂ ಇರಲಿಲ್ಲ. ಹೀಗೆ ಒಬ್ಬರು ಅಪ್ರೋಚ್‌ ಮಾಡಿದ್ದರು. ಒಂದು ಸಿನಿಮಾ ಮಾಡಿ ನೋಡೋಣ ಅಂತ ಹಾಬಿಯಾಗಿ ತೆಗೆದುಕೊಂಡೆ. ಅದಾದ ನಂತರ ಸಿನಿಮಾ ವೃತ್ತಿಯನ್ನು ಈಗ ಗಂಭೀರವಾಗಿ ತೆಗೆದುಕೊಳ್ಳುವಷ್ಟು ಚಿತ್ರಗಳು ನನ್ನ ಪಾಲಿಗೆ ಬಂದುಬಿಟ್ಟಿತು.

`ಸಿಂಹ ಹಾಕಿದ ಹೆಜ್ಜೆ' ನನ್ನ ಮೊದಲ ಚಿತ್ರ. ಅದಾದ ಮೇಲೆ `ಅನುಷ್ಕಾ' ಬಂತು. ಎಜುಕೇಶನ್‌ ಬ್ಯಾಕ್‌ಗ್ರೌಂಡ್‌ ಇದ್ದುದರಿಂದ ಸಿನಿಮಾ ವೃತ್ತಿಯನ್ನು ನಂಬಿಕೊಂಡು ನಾನ್ಯಾವತ್ತೂ ಅವಕಾಶ ಕೇಳಿಕೊಂಡು ಹೋದವಳಲ್ಲ. ನನ್ನಲ್ಲಿ ಹೆಚ್ಚು ಮಾರ್ಪಾಡು ಮೂಡಿಸಿದ್ದು ಸೂರಿಯವರ `ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ನಟಿಸುವಾಗ, ಸಿನಿಮಾ ಮೇಕಿಂಗ್‌ ಬಗ್ಗೆ ತುಂಬಾನೆ ಒಲವು ಮೂಡಿತು. ಸೂರಿಯವರ ನಿರ್ದೇಶನದಲ್ಲಿ  ನಟಿಸುವುದೇ ಅಪರೂಪದ ಅನುಭವ. ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ. ಕಲಾವಿದರಿಗೆ ತುಂಬಾ ಫ್ರೀಡಂ ಕೊಡುತ್ತಾರೆ. ಒಂದು ಸೀನ್‌ ಬಗ್ಗೆ ಚರ್ಚಿಸಲು, ಯೋಚಿಸಲು ಸ್ಪೇಸ್‌ ಕೊಡುತ್ತಾರೆ. ಡೈಲಾಗ್‌ ಹೇಳುವುದರಿಂದ ಹಿಡಿದು ನಟನೆಯವರೆಗೂ ಪಕ್ಕಾ ಆಗಿರಬೇಕು. ಸೂರಿಯವರ ಕೈ ಕೆಳಗೆ ಕೆಲಸ ಮಾಡಿದರೆ ಸಾಕು ಇನ್‌ಸ್ಟಿಟ್ಯೂಟ್‌ಗೆ ಹೋಗಿ ಬಂದಷ್ಟೆ ಪಾಠ ಕಲಿಯಬಹುದು.

ಧನಂಜಯ ಜೋಡಿಯಾಗಿ ನಟಿಸುತ್ತಿದ್ದೇನೆ. ಅವರು ಕೂಡಾ ಅಷ್ಟೆ, ತುಂಬಾ ಕೂಲಾಗಿ ಹೇಳಿಕೊಡುತ್ತಾರೆ. ನಾನು ಕ್ರಿಮಿನಾಲಜಿ ಓದಿರುವುದರಿಂದ ಸೂರಿಯವರ ಜೊತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತೇನೆ. ಒಂದು ಸೀನ್‌ ಬಗ್ಗೆ ಡಿಸ್ಕಸ್‌ ಮಾಡುವಾಗ ಸೂರಿಯವರು ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ನೀನೇ ಕಂಪೋಸ್‌ ಮಾಡು ಅಂದಿದ್ದರು. ನನ್ನ ಶೂಟಿಂಗ್‌ ಇಲ್ಲದಿದ್ದಾಗಲೂ ಸಹ ನಾನು ಸೆಟ್ಟಿಗೆ ಹೋಗಿ ಅವರು ಕೆಲಸ ಮಾಡುವುದನ್ನು ನೋಡುತ್ತಿದ್ದೆ. ಏಕೆಂದರೆ ನನಗೂ ಡೈರೆಕ್ಷನ್‌ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇದೆ. ನನಗೆ ಮೊದಲಿನಿಂದಲೂ ರಿಯಲಿಸ್ಟಿಕ್‌ ಸಿನಿಮಾಗಳೇ ಹೆಚ್ಚು ಇಷ್ಟ. ಸಿನಿಮಾದಲ್ಲಿ ಕಥೆ, ಡ್ರಾಮಾ ಅಷ್ಟು ಹಿಡಿಸುವುದಿಲ್ಲ.

ಹಾಗಾದರೆ ನಿನ್ನ ನೇಚರ್‌ ತುಂಬಾನೇ ಡಿಫರೆಂಟ್‌ ಅನ್ಸುತ್ತೆ.....?

ಹೌದು..... ನಂಗೆ ಸುಮ್ಮ ಸುಮ್ಮನೆ ಡ್ರಾಮಾ ಮಾಡೋದು, ಸಿನಿಮಾಗಳಲ್ಲಿ ಕೃತಕ ಅಭಿನಯ ಇದೆಲ್ಲ ಹಿಡಿಸೋದಿಲ್ಲ. ಮೇಲ್ನೋಟಕ್ಕೆ ಸೈಲೆಂಟ್‌ ಆಗಿ ಕಂಡರೂ, ನನ್ನ ತಂಟೆಗೆ ಬಂದರೆ ನಾನು ನಾನಾಗಿರೋದಿಲ್ಲ. ಹಾಗಾಗಿ ನನಗೆ ಮಂಜುಳಾ ತುಂಬಾ ಇಷ್ಟವಾಗುತ್ತಾರೆ. `ಸಂಪತ್ತಿಗೆ ಸವಾಲ್‌' ಚಿತ್ರದಲ್ಲಿನ ಅವರ ಪಾತ್ರದಂತೆ ನಾನು ಸ್ವಲ್ಪ ಹಾಗೆಯೇ ಇರೋದು (ನಗು).

ಇನ್ನೂ ಯಾವ ಚಿತ್ರಗಳಿವೆ?

ಈಗಷ್ಟೇ ಚಿರಂಜೀವಿ ಸರ್ಜಾ ಜೊತೆ ಒಂದು ಚಿತ್ರ ಮಾಡುತ್ತಿದ್ದೇನೆ. ಇನ್ನು ಹೆಸರಿಟ್ಟಿಲ್ಲ. ಮೂರು ದಿನ ಶೂಟಿಂಗ್‌ ಮುಗಿಸಿ ಈಗಷ್ಟೇ ಬಂದದ್ದು. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ನನ್ನ ಪಾತ್ರ ಕೂಡಾ ಇಂಟ್ರೆಸ್ಟಿಂಗ್‌ ಆಗಿದೆ. ಮದರಂಗಿ ಕೃಷ್ಣರವರ ಜೊತೆ `ಲವ್ ಮಾಕ್ಟೇಲ್' ಚಿತ್ರದಲ್ಲೂ ನಟಿಸಿದ್ದೇನೆ. ಮಿಲನ ನಾಗರಾಜ್‌ ನಾನು ಇಬ್ಬರೂ ಇದ್ದೀವಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ