- ರಾಘವೇಂದ್ರ ಅಡಿಗ ಎಚ್ಚೆನ್.
ಅಮೂಲ್ಯ ಮೂವಿ ಮೇಕರ್ಸ್ ಮೂಲಕ ಕೆ .ಎಸ್. ನಾಗರಾಜ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ, ಡಾ.ರವಿಶೆಟ್ಟಿ ಬೈಂದೂರ್ ಅರ್ಪಿಸುವ, ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕಥಾಹಂದರ ಒಳಗೊಂಡ ತಮಟ ಲಚ್ಚಿ ಸಿನಿಮಾದ ಸ್ಕ್ರಿಪ್ ಪೂಜೆ ಸಮಾರಂಭ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಚಲನಚಿತ್ರ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು. ಕರಾವಳಿ ಕನ್ನಡಿಗ ಡಾ. ರವಿಶೆಟ್ಟಿ ಬೈಂದೂರ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು, ನಂತರ ಮಾತನಾಡಿದ ರವಿಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶವಾಗುವುದಲ್ಲದೆ, ಇಂದಿನ ಪೀಳಿಯ

ಜನರಲ್ಲಿ ಪರಿಸರ ಪ್ರೇಮದ ಬಗ್ಗೆ ಕಾಳಜಿ ಕಣ್ಮರೆಯಾಗುತ್ತಿದೆ.
ಕೆಲವು ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿವೆ. ಹಿಂದಿನ ಜನರ ಕಷ್ಟಗಳು, ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಜಾತಿ ವೈಷ್ಯಗಳು. ಹೀಗ ಎಲ್ಲಾ ವಿಷಯಗಳನ್ನು ಚಲನಚಿತ್ರ ರೂಪದಲ್ಲಿ ತೋರಿಸಲು ಹಿರಿಯ ಕಲಾವಿದ ಕೆ ಎಸ್. ನಾಗರಾಜ್ ಅವರು ಸಿದ್ದರಾಗಿರುವುದು ಖುಷಿಯಾಗಿದೆ. ತಮಟೆ ಲಚ್ಚಿ ಸಿನಿಮಾ ಯಾವುದೇ ವಿಘ್ನವಿಲ್ಲದೆ ನಿರ್ಮಾಣವಾಗಿ, ಜನರ ಮನ ಸೆಳೆಯಲಿ ಎಂದು ಶುಭ ಹಾರೈಸಿದರು.

ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ನಿರ್ದೇಶಕ, ನಿರ್ಮಾಪಕರೂ ಆದ ಕೆ ಎಸ್. ನಾಗರಾಜ್ ಮಾತನಾಡಿ ತಮಟೆ ಲಚ್ಚಿ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರಲಿದ್ದು, ನಮ್ಮ ತಂಡ ಈ ಬಾರಿ ಹೊಸತನದ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಹಳೆಯ ಮತ್ತು ಹೊಸ ನಟ ನಟಿಯರು ,ಪೋಷಕ ನಟರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಸುರೇಂದ್ರ ಶೆಟ್ಟಿ, ಹೋಟೆಲ್ ವಿಭಾಗದ ರಾಜ್ಯಾಧ್ಯಕ್ಷ ಶೈಲೇಶ್ ಪೂಜಾರಿ ಕೋಟ, ಚಾಲಕರ ವಿಭಾಗದ ರಾಜ್ಯಾಧ್ಯಕ್ಷ ಮಣಿಕಂಠ ಹಾಗೂ ಇತರರು ಹಾಜರಿದ್ದರು.
ಸಯ್ಯದ್ ಅಲಿ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಅರುಣ್ ರಾಮರಾಜ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಸ್ವಾತಿ, ಕೆ.ಎಸ್. ನಾಗರಾಜ್, ಶಿವಕುಮಾರ್ ಆರಾಧ್ಯ, ಸುನಿತ ಸಿಂಗ್, ಪುಷ್ಪ ನಾಗರಾಜ್, ಮಮತ, ಮಾ.ಧನುಷ್ ಕುಮಾರ್,ಬೇಬಿ ಅಮೂಲ್ಯ ಹಾಗೂ ಇತರರು ಅಭಿನಯಿಸಿದ್ದಾರೆ.





