ಚಿತ್ರರಂಗದ ಪರಿಸರದಲ್ಲೇ ಹುಟ್ಟಿ ಬೆಳೆದು 24ರ ಹರೆಯ ಮುಟ್ಟಿದ ಯಂಗ್‌ ನಟಿ ಅನನ್ಯಾ ಪಾಂಡೆ, ತನ್ನ ಕೋಮಲತೆ, ಮಾಧುರ್ಯ, ಸೌಂದರ್ಯ, ಅಂದಚೆಂದ, ಬೆಡಗಿನ ಹಾವಭಾವಗಳಿಂದ ಇಂದಿನ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ತನ್ನದೇ ಆದ ಪ್ರತ್ಯೇಕ ಐಡೆಂಟಿಟಿ ಗಿಟ್ಟಿಸಿದ್ದಾಳೆ.

ಇವಳಿಗೆ ಪ್ರತಿಯೊಂದು ಬಗೆಯ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಛಾತಿ ಇದೆ. ಅದೇ ಇವಳನ್ನು ಬೇರೆ ನಟಿಯರಿಗಿಂತ ವಿಭಿನ್ನ ಎನಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಎವರ್‌ ಗ್ರೀನ್‌ ಆಗಿ ಮಿರಿಮಿರಿ ಮಿಂಚುತ್ತಿರುವ ಅನನ್ಯಾಳ ಅಭಿಮಾನಿಗಳ ಬಳಗಕ್ಕೇನೂ ಕೊರತೆ ಇಲ್ಲ.

ಹಿಂದಿ ಚಿತ್ರರಂಗದ 80ರ ದಶಕದ ಖ್ಯಾತ ತಾರೆಯರಾದ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆಯರ ಮಗಳಾದ ಅನನ್ಯಾ ಪಾಂಡೆ, `ಸ್ಟೂಡೆಂಟ್‌ ಆಫ್‌ ದಿ ಇಯರ್‌' ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಪಡೆದಳು. ಇದರ ಯಶಸ್ಸಿನಿಂದ ಇವಳ ಅದೃಷ್ಟದ ಬಾಗಿಲು ತೆರೆಯಿತು. ಹೀಗಾಗಿ ಇದಾದ ಮೇಲೆ ಒಂದಾದ ನಂತರ ಮತ್ತೊಂದು ಎಂಬಂತೆ ಸಾಲು ಸಾಲಾಗಿ ಅನೇಕ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಳು.

ಸಿನಿಮಾ ಮಾತ್ರವಲ್ಲದೆ ಅನನ್ಯಾ ಹಲವಾರು ಜಾಹೀರಾತುಗಳಲ್ಲೂ ಅದ್ಭುತ ಮಾಡೆಲ್ ಆಗಿ ಮಿಂಚಿದ್ದಾಳೆ. ಇದರ ಮೂಲ ಕಾರಣ, ಅವಳ ಸೌಮ್ಯ ಸ್ವಭಾವ, ಎಲ್ಲರೊಂದಿಗೆ ಬೆರೆತುಕೊಳ್ಳುವ ಗುಣ ಹಾಗೂ ಕಪಟತನವಿಲ್ಲದ ಮುಕ್ತ ವಿಚಾರಗಳ ದೃಷ್ಟಿಕೋನ ಎನ್ನಬಹುದು.

ನಟನೆಯ ಜೊತೆಯಲ್ಲೇ ಅನನ್ಯಾ `ಯೂನಿವರ್ಸಿಟಿ ಆಫ್‌ ಸೌತ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲಿಸ್‌ 'ನಲ್ಲಿ ಫ್ಯಾಷನ್ ಡಿಸೈನಿಂಗ್‌ನ ಕೋರ್ಸ್‌ ಸಹ ಕಂಪ್ಲೀಟ್‌ ಮಾಡಿಕೊಂಡಿದ್ದಾಳೆ. ಅನನ್ಯಾಳ ಫ್ಯಾಷನ್‌ ಸ್ಕಿಲ್ಸ್ ಬಲು ಉನ್ನತ ಮಟ್ಟದ್ದು. ಅದರಲ್ಲೂ ಗ್ಲಾಮರಸ್‌ ಜಗತ್ತಿನ ಬಾಲಿವುಡ್‌ ಗೆ ಸಂಬಂಧಿಸಿದಂತೆ, ಈ ನಿಟ್ಟಿನಲ್ಲಿ ಅವಳ ಕ್ರಿಯಾಶೀಲತೆ ಮೆಚ್ಚುವಂಥದ್ದು. ಹೀಗಾಗಿ ತನ್ನ ಎಲ್ಲಾ ಚಿತ್ರಗಳಲ್ಲೂ, ತನ್ನ ಪಾತ್ರಕ್ಕೆ ಒಪ್ಪುವಂಥ ಕಾಸ್ಟ್ಯೂಮ್ಸ್ ಡಿಸೈನಿಂಗ್‌ ತಾನೇ ಮಾಡಿಕೊಳ್ಳುತ್ತಾಳೆ.

ಬಾಲಿವುಡ್‌ ನಲ್ಲಿ ಈ ನಟಿಯ ನಟನೆಯನ್ನು ಹಿರಿಯ ದಿಗ್ಗಜರು, ವಿಮರ್ಶಕರೂ ಎಲ್ಲಾ ಮೆಚ್ಚಿ ತಲೆದೂಗಿದ್ದಾರೆ. ಇವಳ ನಟನೆಯ `ಗೆಹರಾಯಿಯಾನ್‌' ಬಿಡುಗಡೆಯಾಗಿ ಉತ್ತಮ ಹೆಸರು ಗಳಿಸಿದೆ. ತಾನು ಇದುವರೆಗೆ ನಡೆದು ಬಂದ ಹಾದಿಯ ಕುರಿತು ಅನನ್ಯಾ ಇಲ್ಲಿ ಮನಬಿಚ್ಚಿ ಮಾತನಾಡಿದ್ದಾಳೆ. ಅವಳೊಂದಿಗೆ ನಡೆಸಿದ ಮಾತುಕಥೆಯ ಮುಖ್ಯಾಂಶಗಳು :

ರಿಲೇಶನ್ಶಿಪ್ಬಲು ಮುಖ್ಯ

ರಿಲೇಶನ್‌ ಶಿಪ್‌ ಕುರಿತಾಗಿ ಅನನ್ಯಾ ಹೇಳುತ್ತಾಳೆ, ``ಲವ್ ಅಂದ್ರೆ ನನ್ನ ದೃಷ್ಟಿಯಲ್ಲಿ ಫ್ರೆಂಡ್‌ ಶಿಪ್‌ ನಷ್ಟೇ ಪವಿತ್ರ. ಬಲು ಮುಖ್ಯವಾದುದು. ಇದನ್ನೇ ನಾನು ನನ್ನ ಹೆತ್ತವರಿಂದ ಕಲಿತಿದ್ದೇನೆ. ಅಮ್ಮ ಅಪ್ಪನ ಬಾಂಡಿಂಗ್‌ ನೋಡಿಯೇ ನಾನು ಪ್ರೇಮ ಬಾಂಧವ್ಯದ ಆಳ ಅರಿತುಕೊಂಡೆ. 25 ವರ್ಷದ ಸಿಲ್ವರ್‌ ಜ್ಯೂಬಿಲಿ ಮದುವೆ ಆ್ಯನಿವರ್ಸರಿ ಆಚರಿಸಿಕೊಂಡು ತಮ್ಮ ಯಶಸ್ವೀ ದಾಂಪತ್ಯದಲ್ಲಿ ಮುಂದುವರಿಯುತ್ತಿರುವ ಈ ಸ್ಟಾರ್‌ ಡಮ್ ಜೋಡಿ, ನಿಜಕ್ಕೂ ಬಾಲಿವುಡ್‌ ನ ಎಷ್ಟೋ ಜೋಡಿಗಳಿಗೆ ಮಾತ್ರವಲ್ಲದೆ, ಇಂದಿನ ಸಾಮಾನ್ಯ ಯುವಜನತೆಗೂ ದಾರಿದೀಪ, ಮಾರ್ಗದರ್ಶಿ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ