-ಶರತ್ ಚಂದ್ರ

'ಆನ್ ಲಾಕ್ ರಾಘವ 'ಚಿತ್ರ ನಿರ್ಮಾಣ ಅನಿವಾರ್ಯ ಕಾರಣಗಳಿಂದ ವಿಳಂಬವಾದರೂ ಫೆಬ್ರವರಿ 7 ನೇ ತಾರೀಕಿಗೆ ಬಿಡುಗಡೆಯಾಗಲು ಸಿದ್ದವಾಗಿದೆ. ನಿರ್ಮಾಣ ಹಂತದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಕೂಡ ಟ್ರೈಲರ್ ನೋಡಿದಾಗ ಫೈನಲ್ ಪ್ರಾಡಕ್ಟ್ ಚೆನ್ನಾಗಿ ಬಂದಿದೆ ಅಂತ ಟ್ರೈಲರ್ ನೋಡಿದವರು ಹೇಳುತ್ತಿದ್ದಾರೆ.

1000400404
ಕೆಲವು ವರ್ಷಗಳ ಹಿಂದೆ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್, ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಒಪ್ಪಿಕೊಂಡು ಬಂದು ಟ್ರೈಲರ್ ಲಾಂಚ್ ಮಾಡಿದ್ದಾರೆ.

1000400406

ಶಿವಮೊಗ್ಗ ಮೂಲದ ನಿರ್ಮಾಪಕರಾದ ಮಂಜುನಾಥ್ ಈ ಹಿಂದೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶಸಿರುವ 'ಉದ್ಘರ್ಷ' ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ತಮ್ಮ ಪುತ್ರ ಮಿಲಿಂದ್ ನನ್ನು ಈ ಚಿತ್ರದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ನಿರ್ಮಾಪಕ ಮಂಜುನಾಥ್, ಗಿರೀಶ್ ಅವರ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಮಿಲಿಂದ್ ಟ್ರೈಲರ್ ನೋಡಿದಾಗ ಸಿನಿಮಾಗೋಸ್ಕರ ಸಾಕಷ್ಟು ತಯಾರಿ ಮಾಡಿರುವುದು ಕಂಡು ಬರುತ್ತಿದೆ.

1000400400

ಮಿಲಿಂದ್ ಜೊತೆ ನಾಯಕಿಯಾಗಿ , ಈಗಾಗಲೇ ಒಂದೆರಡು ಮಲಯಾಳಂ ಚಿತ್ರಗಳು ಹಾಗೂ ಕನ್ನಡದ 'ಲವ್ ಮಾಕ್ಟೇಲ್ 2' 'ಚೆಫ್ ಚಿದಂಬರ' ಗಳಲ್ಲಿ ನಟಿಸಿರುವ ರಚೆಲ್ ಡೇವಿಡ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಿಲಿಂದ್ ಜೊತೆಗೆ ಮುದ್ದಾಗಿ ಕಾಣುವ ರಚೆಲ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಚೆಲ್ ನಟಿಸಿರುವ 'ಭುವನಂ ಗಗನಂ' ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಭೂಮಿ ಶೆಟ್ಟಿ, ಅವಿನಾಶ್ ,ಸಾಧು ಕೋಕಿಲ, ಶೋಭರಾಜ್ ,ಧರ್ಮಣ್ಣ ಕಡೂರ್ ಹೀಗೆ ದೊಡ್ಡ ತಾರಾಬಳಗ ವೇ ಈ ಚಿತ್ರದಲ್ಲಿದೆ. ಅದರಲ್ಲೂ ಸಾಧು ಕೋಕಿಲ ವಿಶೇಷ ಪಾತ್ರ ಮಾಡಿದ್ದು ಚಿತ್ರದುದ್ದಕ್ಕೂ ತಮ್ಮ ಕಾಮಿಡಿ ಮೂಲಕ ರಂಜಿಸಲಿದ್ದಾರೆ.
ಅನೂಪ್ ಸೀಳನ್ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿದ್ದು ದೀಪಕ್ ಮಧುವನಹಳ್ಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ