ಇಂದಿಗೆ 30 ವರ್ಷವಾಯಿತು ಗಾನಯೋಗಿ ಪಂಚಾಕ್ಷರಿ ಗವಾಯಿ ಕನ್ನಡ ಚಿತ್ರ ಬಿಡುಗಡೆಯಾಗಿ. ಅಪೂರ್ವ ಚಿತ್ರವೆಂದು ಇಡೀ ನಾಡೇ ಸಂಭ್ರಮಿಸಿತು. ಇಂದಿಗೂ ಈ ಚಿತ್ರದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೆ ಗುಣು ಗುತ್ತಿವೆ. ಕರ್ನಾಟಕದ ಎಲ್ಲಾ ದೇವಾಲಯಗಳಲ್ಲಿ ಮಠಮಾನ್ಯದಲ್ಲಿ *ನೀಡು ಶಿವ ನೀಡದಿರು ಶಿವ* ಹಾಡು ಇಂದಿಗೂ ಜನಪ್ರಿಯವಾಗಿದೆ.

ಪ್ರಥಮ ಬಾರಿಗೆ ಕನ್ನಡದಲ್ಲಿ ಎಸ್ ಪಿ ಬಾಲಸುಬ್ರಮಣ್ಯ ಅವರಿಗೆ ಹಾಗೂ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕ ಹಂಸಲೇಖರವರೆಗೆ ರಾಷ್ಟ್ರಪ್ರಶಸ್ತಿ ತಂದಿದೆ. ನನ್ನ ನಿರ್ದೇಶನದ ಅಳಿಲುಸೇವೆಗೆ ರಾಜ್ಯ ಪ್ರಶಸ್ತಿಯೂ ಬಂತು. ಈ ಚಿತ್ರದ ಯಶಸ್ಸಿಗೆ ಹಂಸಲೇಖ ಅವರ ಸಂಗೀತ ಕನ್ನಡನಾಡೆ ಎಂದೂ ಮರೆಯದ ಸಂಗೀತ ಸೇವೆಯಾಗಿದೆ. ಈ ಸಮಯದಲ್ಲಿ ನಿರ್ಮಾಪಕಿ *ಪದ್ಮಶ್ರೀ ಚಿಂದೊಡಿ ಲೀಲಾ* ರವರಿಗೂ , ನಟಿಸಿದ ಕಲಾವಿದರು, ತಂತ್ರಜ್ಞರಿಗೂ ಆಭಾರಿಯಾಗಿದ್ದೇನೆ. ಈ 30 ವರ್ಷದ ಸವಿ ನೆನಪಿಗಾಗಿ ಕನ್ನಡ ನಾಡಿನ ಕಣ್ಮಣಿಗಳಾದ ಎಸ್ಪಿಬಿ ಅವರಿಗೂ , ಹಂಸಲೇಖರವರೆಗೂ ನೆನಪುಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಕನ್ನಡ ನಾಡಿನ ಎಲ್ಲಾ ಪ್ರೇಕ್ಷಕರಿಗೂ ವಂದಿಸುತ್ತೇನೆ….

ನಿರ್ದೇಶಕ

ಚಿಂದೋಡಿ ಬಂಗಾರೇಶ್.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ