ಬಿಗ್​ ಬಾಸ್ ಸೀಸನ್​​ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟರಾಜ್ ಬಿಗ್​​ ಬಾಸ್​ ಟ್ರೋಫಿಎತ್ತಿ ಹಿಡಿದಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ತೆರೆ ಬಿದ್ದಿದೆ.

ಬಿಗ್​ ಬಾಸ್ ಅಂದರೆ ವ್ಯಕ್ತಿತ್ವದ ಆಟ. ಈ ಆಟದಲ್ಲಿ 25 ಸ್ಪರ್ಧಿಗಳು ಎಂಟ್ರಿ ನೀಡಿದ್ದರು. ಆಟ, ವ್ಯಕ್ತಿತ್ವ ಮತ್ತು ಭಾವನೆ ತುಂಬಿದ್ದ ಬಿಗ್ ಮನೆಯು ಯುದ್ಧ ಭೂಮಿಯಾಗಿ ಅನಾವರಣಗೊಂಡಿತ್ತು. ಯಾರು ಗೆಲ್ಲಬೇಕು ಎಂಬುದನ್ನು ನಿರ್ಧರಿಸಿರುವ ವೀಕ್ಷಕರು ಗಿಲ್ಲಿ ಕೈಗೆ ಟ್ರೋಫಿ ನೀಡಿದ್ದಾರೆ.ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ‘ಬಿಗ್​ ಬಾಸ್ ವಿನ್ನರ್’ ಎಂದು ಘೋಷಿಸಿದ್ದಾರೆ. ರಾಜ್ಯದ ಮೂಲೆಮೂಲೆಗಳಲ್ಲಿರುವ ಗಿಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಗಿಲ್ಲಿ ಎಂದೇ ಖ್ಯಾತಿ ಪಡೆದ ಅವರ ನಿಜ ಹೆಸರು ನಟರಾಜ್‌. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಗಿಲ್ಲಿ ನಟ ತಮ್ಮ 10ನೇ ತರಗತಿ ಪೂರ್ಣಗೊಳಿಸಿದ ನಂತರ 2 ವರ್ಷಗಳ ಐಟಿಐ ಕೋರ್ಸ್‌ ಮಾಡಿದರು. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿಯಲ್ಲಿ ಬಳಸಿ ಜನಪ್ರಿಯರಾಗಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಬಳಿಕ ವಿವಿಧ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಗಿಲ್ಲಿಗೆ, ಬಿಗ್​ ಬಾಸ್ ಹೊಸ ಮೈಲಿಗಲ್ಲನ್ನೇ ತಂದುಕೊಟ್ಟಿದೆ.ಈ ಬಾರಿಯ ಬಿಗ್ ಬಾಸ್ 12 ಸೀಸನ್​ನಲ್ಲಿ ಆರು ಸ್ಪರ್ಧಿಗಳು ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್ ಗೌಡ, ಮ್ಯೂಟಂಟ್ ರಘು ಹಾಗೂ ಕಾವ್ಯ ಶೈವ ಅವರು ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಅವರಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದು, ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಗಿಲ್ಲಿ ಕೈ ಸೇರಿದೆ. ಮಾರುತಿ ಸುಜುಕಿಯ ವಿಕ್ಟೊರಿಸ್​ ಕಾರು ಉಡುಗೊರೆಯಾಗಿ ಬಂದಿದೆ. ಮೊದಲ ರನ್ನರ್​ಅಪ್​ ಆಗಿ ರಕ್ಷಿತಾ ಶೆಟ್ಟಿ, ಎರಡನೇ ರನ್ನರ್​ ಅಪ್ ಆಗಿ ಅಶ್ವಿನಿ ಗೌಡ ಆಯ್ಕೆಯಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ