- ರಾಘವೇಂದ್ರ ಅಡಿಗ ಎಚ್ಚೆನ್.

ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್​ನ ನಟ, ನಟಿಯರು ಬಿಗ್ ಶಾಕ್​ಗೆ ಒಳಗಾಗಿದ್ದಾರೆ.
ಬಾಲಿವುಡ್‌ ನಟಿ​ ಶೆಫಾಲಿ ಜರಿವಾಲಾ (42) ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ನಗರದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆದರೆ ಆದಾಗಲೇ ನಟಿಯ ಉಸಿರು ನಿಂತು ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

images (1)

ಎದೆ ನೋವು ಕಾಣಿಸಿದ ತಕ್ಷಣ ಶೆಫಾಲಿ ಜರಿವಾಲಾ ಅವರನ್ನು ಪತಿ ಪರಾಗ್ ತ್ಯಾಗಿ ಹಾಗೂ ಮೂವರು ವ್ಯಕ್ತಿಗಳು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೂ ನಟಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆಸ್ಪತ್ರೆಯಿಂದ ಹೊರ ಬರುವಾಗ ಪರಾಗ್ ತ್ಯಾಗಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡದೇ ಹಾಗೇ ಹೋದರೂ ಎನ್ನಲಾಗಿದೆ.

images (2)

2011ರಲ್ಲಿ ರಿಲೀಸ್ ಆದ ಕನ್ನಡದ ಖ್ಯಾತ ನಟ ಪುನೀತ್ ರಾಜ್​ಕುಮಾರ್ ಅಭಿನಯದಯ ‘ಹುಡುಗರು’ ಸಿನಿಮಾದಲ್ಲಿ ಅವರು ‘ಪಂಕಜಾ..’ ಹಾಡಿಗೆ ಮಸ್ತ್ ಆಗಿ ಸ್ಟೆಪ್ ಹಾಕಿದ್ದರು. ಇದೀಗ ಶೆಫಾಲಿ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳು ಮತ್ತು ಆಪ್ತರು ಆಘಾತಕ್ಕೊಳಗಾಗಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಅವರ ಜೊತೆ ನಟಿಸಿದ ಪುನೀತ್ ರಾಜ್​ಕುಮಾರ್​ ಹಾಗೂ ಅವರ ಜೊತೆ ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿ ಗೆದ್ದ ಸಿದ್ದಾರ್ಥ್ ಶುಕ್ಲಾ ಕೂಡ ಹೃದಯಾಘಾತದಿಂದಲೇ ನಿಧನ ಹೊಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ