ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ‘SHE RISES’ ಕಾರ್ಯಕ್ರಮಕ್ಕೆ ಚಾಲನೆ
*ಬೆಂಗಳೂರು, ಅಕ್ಟೋಬರ್ 29, 2026:
ಸ್ತನ ಕ್ಯಾನ್ಸರ್ ಮಹಿಳೆಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಚಿಕಿತ್ಸೆಯ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳು, ಆತ್ಮವಿಶ್ವಾಸದ ಕೊರತೆ ಮತ್ತು ಭವಿಷ್ಯದ ಬಗ್ಗೆ ಆತಂಕ ಸೇರಿದಂತೆ ಹಲವು ಸವಾಲುಗಳನ್ನು ಮಹಿಳೆಯರು ಎದುರಿಸುತ್ತಾರೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಸ್ತನ ಕ್ಯಾನ್ಸರ್ ಜಾಗೃತಿ ವಾರದ ಅಂಗವಾಗಿ ಕ್ಯಾನ್ಸರ್ನಿಂದ ಗುಣಮುಖರಾದ ಮಹಿಳೆಯರು ಮತ್ತು ವೈದ್ಯಕೀಯ ತಜ್ಞರ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತು.
ಈ ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್ನಿಂದ ಗುಣಮುಖರಾದ ಮಹಿಳೆಯರು ತಮ್ಮ ಚಿಕಿತ್ಸೆಯ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ, ಕ್ಯಾನ್ಸರ್ನಿಂದ ಬಳಲುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬಲು ಮತ್ತು ಬೆಂಬಲ ನೀಡಲು ಗುಣಮುಖರಾದ ಮಹಿಳೆಯರಿಗೆ ತರಬೇತಿ ನೀಡುವ 'SHE RISES' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕ ಡಾ. ಮನೀಶ್ ರೈ ಮತ್ತು ಆಸ್ಪತ್ರೆಯ ನಿರ್ದೇಶಕಿ ಶ್ರೀಮತಿ ನಯನಾ ಪೈ ಮಾತನಾಡಿದರು.
ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ಆರೈಕೆಯ ಜೊತೆಗೆ ರೋಗಿಗಳಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ಮತ್ತು ಕುಟುಂಬದ ಬೆಂಬಲವೂ ಮುಖ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು 'She Hears', 'She Chooses', 'She Prevails' ಮತ್ತು 'She Navigates' ಎಂಬ ನಾಲ್ಕು ವಿಭಾಗಗಳಲ್ಲಿ ಗೋಷ್ಠಿ ಆಯೋಜಿಸಲಾಗಿತ್ತು. ಈ ನಾಲ್ಕು ವಿಭಾಗಗಳಲ್ಲಿ ಸ್ತನ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ವಿಕಿರಣ ಚಿಕಿತ್ಸೆ, ಚೇತರಿಕೆ ಮತ್ತು ಚಿಕಿತ್ಸೆಯ ನಂತರದ ಜೀವನದ ಕುರಿತು ವೈದ್ಯರು ಹಾಗೂ ಗುಣಮುಖರಾದವರು ಚರ್ಚಿಸಿದರು.

*ಆರಂಭಿಕ ಪತ್ತೆ ಮತ್ತು ಆಧುನಿಕ ಶಸ್ತ್ರಚಿಕಿತ್ಸೆ*
'She Hears' ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ವಂಶವಾಹಿ ಪರೀಕ್ಷೆ ಮತ್ತು ದುಗ್ಧರಸ ಗ್ರಂಥಿಗಳ ಪರೀಕ್ಷೆಯ ಬಗ್ಗೆ ವಿವರಿಸಿದರು.
2023ರಲ್ಲಿ BRCA ( ಸ್ತನ ಕ್ಯಾನ್ಸರ್ ಜೀನ್ ) ಜೀನ್ ಬದಲಾವಣೆಯಿಂದ ಉಂಟಾಗುವ ಸ್ತನ ಕ್ಯಾನ್ಸರ್ ಪತ್ತೆಯಾದ 46 ವರ್ಷದ ಶ್ರೀಮತಿ ಸುಮನ್ ಮಾಲೂ ಅವರು ಕಿಮೊಥೆರಪಿ, ಎರಡೂ ಸ್ತನಗಳ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಒಳಗಾದರು. ಇವರಿಗೆ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರು - ಡಾ. ಶಬ್ಬೆರ್ ಜವೇರಿ ಮತ್ತು ವೈದ್ಯಕೀಯ ಆಂಕೊಲಾಜಿ, ಇಮ್ಯುನೊಥೆರಪಿ ಮತ್ತು ನಿಖರ (Precision Medicine ) ಥೆರಪಿಯ ಪ್ರಧಾನ ಸಲಹೆಗಾರ್ತಿ - ಡಾ. ಪೂನಂ ಪಾಟೀಲ್ ಅವರು ಚಿಕಿತ್ಸೆ ನೀಡಿದರು.
ಅದೇ ರೀತಿ, ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಪತ್ತೆಯಾಗಿ ನಂತರ BRCA ಜೀನ್ ಬದಲಾವಣೆ ಇರುವುದು ತಿಳಿದುಬಂದ 63 ವರ್ಷದ ಶ್ರೀಮತಿ ಹೆಲೆನ್ ನೊರೊನ್ಹಾ ಅವರು ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗೆ ಒಳಗಾದರು. ಇವರಿಗೆ, ಶಸ್ತ್ರಚಿಕಿತ್ಸಾ ಮತ್ತು ರೊಬೊಟಿಕ್ ಸರ್ಜರಿ ತಜ್ಞ ಡಾ. ಹೇಮಂತ್ ಜಿ.ಎನ್. ಅವರು ಚಿಕಿತ್ಸೆ ನೀಡಿದರು.





