ಸ್ಯಾಂಡಲ್​ವುಡ್ ಸುಲ್ತಾನ ನಟ ದರ್ಶನ್ ತೂಗುದೀಪ ಈ ಬಾರಿ ಭರ್ಜರಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಈ ಬಾರಿ ಪತ್ನಿ, ಮಗನ ಜೊತೆ ತಮ್ಮ ಫಾರ್ಮ್​ ಹೌಸ್​ನಲ್ಲಿ ಸಂಕ್ರಮಣವನ್ನು ಸಂಭ್ರಮಿಸಿದ್ದು ವಿಶೇಷ.

DARSHAN SANKRANTHI (1)

ಕೋರ್ಟ್ ಅನುಮತಿ ಮೇರೆಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್​ಗೆ ಹೋಗಿದ್ದ ದರ್ಶನ್ ಸಂಕ್ರಾಂತಿ ದಿನ ಅಮ್ಮನ ಆಶೀರ್ವಾದ ಪಡೆದರು. ಬಳಿಕ ತಾವು ಸಾಕಿರುವ ಹಸುಗಳಿಗೆ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲ, ತಮ್ಮ ನೆಚ್ಚಿನ ಕುದುರೆಗಳಿಗೆ ಹೂಮಾಲೆ ಹಾಕಿ ಅಲಂಕಾರ ಮಾಡಿದರು. ಬಳಿಕ ಪತ್ನಿ ಜೊತೆಗೆ ಫಾರ್ಮ್ಹೌಸ್ನಲ್ಲಿ ಸುತ್ತಾಡಿ ನೈವೇದ್ಯ ಮಾಡಿ ಸಾಕುಪ್ರಾಣಿಗಳಿಗೆ ಪ್ರಸಾದ ತಿನಿಸಿದರು.

DARSHAN SANKRANTHI (4)

ಸಾಮಾನ್ಯವಾಗಿ ಸಾಕುಪ್ರಾಣಿಗಳೆಂದರೆ ಪಂಚಪ್ರಾಣ ಇಟ್ಟುಕೊಂಡಿರುವ ನಟ ದರ್ಶನ್ ನಿತ್ಯ ಹಸುಗಳ ಸೇವೆಯಲ್ಲಿ ತೊಡಗಿರುತ್ತಾರೆ. ಸಂಕ್ರಾಂತಿ ದಿನವಂತೂ ಇಡೀ ದಿನ ಫಾರ್ಮ್ ಹೌಸ್​ನಲ್ಲೇ ಇದ್ದದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು. ಈ ಸಡಗರದಲ್ಲಿ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಇದ್ದದ್ದು ಅಭಿಮಾನಿಗಳಂತೂ ಡಬ್ಕಿ ಡಬಲ್ ಸಂತಸ ತಂದಂತಾಗಿದೆ. ಅಷ್ಟೇ ಅಲ್ಲ, ಸಹೋದರ ದಿನಕರ್ ತೂಗುದೀಪ ಕೂಡ ಭಾಗಿಯಾಗಿದ್ದು ಮತ್ತಷ್ಟು ಖುಷಿ ಕೊಟ್ಟಿತ್ತು.

DARSHAN SANKRANTHI (2)

ಇಷ್ಟೂ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ದರ್ಶನ್ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಜೊತೆಗೆ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಅಣ್ಣ ಅತ್ತಿಗೆ ಖುಷಿಯಾಗಿರಲಿ ಅಂತಾ ಹಾರೈಸುತ್ತಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ