ಬಾಲಿವುಡ್ನ ನಂಬರ್ ಒನ್ ನಟಿ ದೀಪಿಕಾ ಪಡುಕೋಣೆ ಕಲ್ಕಿ ಸಿನಿಮಾ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ಮಗುವಾದ ಬಳಿಕ ದೀಪಿಕಾ ಮೊನ್ನೆಯಷ್ಟೇ ‘ಫೈಟರ್’ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಎರಡನೇ ಬಾರಿ. ಈ ಕಾರ್ಯಕ್ರಮದಲ್ಲಿ ದೀಪಿಕಾ ನೋಡಿದ ಜನ ಮಗುವಾದ ಬಳಿಕವೂ ನಟಿ ದೀಪಿಕಾ ಪಡುಕೋಣೆ ಫಿಟ್ ಆಗಿರೋದು ಹೇಗೆ ಅಂತಾ ಅಚ್ಚರಿಪಟ್ಟಿದ್ದಾರೆ.
ಅಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಮತ್ತೆ ಸಿನಿಮಾ ಮಾಡೋದಿಲ್ವಾ ಅಂತಾನೂ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಒಂದು ವೇಳೆ ವಾಪಸ್ ಸಿನಿಮಾದಲ್ಲಿ ನಟಿಸಿದ್ರೆ ಅದು ಯಾವ ಸಿನಿಮಾ..? ಯಾವಾಗ ಅಂತಾನೂ ಕೇಳುತ್ತಿದ್ದಾರೆ.
ಈಗ ಹೊಸ ವಿಷಯ ಏನಪ್ಪಾ ಅಂದ್ರೆ ನಟಿ ದೀಪಿಕಾ ಪಡುಕೋಣೆ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಆದ್ರೆ, ಸದ್ಯಕ್ಕಂತೂ ಅಲ್ಲವೇ ಅಲ್ಲ. ಇನ್ನು ಕನಿಷ್ಠ ಪಕ್ಷ ಏಳು ತಿಂಗಳು ಬೇಕಾಗುತ್ತೆ. ಯಾಕಂದ್ರೆ, ಕಳೆದ ಸೆಪ್ಟೆಂಬರ್ನಲ್ಲಷ್ಟೇ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿರುವ ದೀಪಿಕಾ ಪಡುಕೋಣೆ, ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷವಾದ್ರೂ ಆಗಲೇಬೇಕು.
ಬಳಿಕವಷ್ಟೇ ನಾನು ಹೊರಗೆ ಹೋಗಲು ಸಾಧ್ಯ ಅಂತಾ ಅಂದುಕೊಂಡಿದ್ದಾರೆ. ಹಾಗಾಗಿ ಇನ್ನು ಏಳು ತಿಂಗಳು ಅರ್ಥಾತ್ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಶೂಟಿಂಗ್ಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರೆ. ‘ಕಲ್ಕಿ 2898 AD’ ಸಿನಿಮಾದ ಎರಡನೇ ಭಾಗದ ಮೂಲಕ ಕಂಬ್ಯಾಕ್ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಸೆಪ್ಟೆಂಬರ್ನಲ್ಲಿ ಶುರುವಾಗಲಿದೆ.
ಅನೇಕ ಬಾಲಿವುಡ್ ನಟಿಯರು ಹೆರಿಗೆಯಾದ ಕೆಲವು ತಿಂಗಳೊಳಗೆ ಮತ್ತೆ ಫಿಟ್ ಆಗಿ ಕಾಣಲು ಪ್ರಾರಂಭಿಸುತ್ತಾರೆ. ಆದ್ರೆ, ದೀಪಿಕಾ ಪಡುಕೋಣೆ ವಿಷಯದಲ್ಲಿ ಇದು ಕೊಂಚ ವಿಭಿನ್ನವಾಗಿದೆ. ಗರ್ಭಾವಸ್ಥೆಯಲ್ಲಿಯೂ ದೀಪಿಕಾ ತೂಕ ಹೆಚ್ಚಾಗಲಿಲ್ಲ ಮತ್ತು ತಾಯಿಯಾದ ನಂತರವೂ ತನ್ನ ಫಿಟ್ನೆಸ್ ಅನ್ನು ಕಾಯ್ದುಕೊಂಡರು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ಅವರ ಸಮತೋಲಿತ ಆಹಾರ ಮತ್ತು ಸರಿಯಾದ ವ್ಯಾಯಾಮ ದಿನಚರಿ.
ಹೆರಿಗೆಗೆ ಕೆಲವು ತಿಂಗಳುಗಳ ಮೊದಲು, ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ್ದರು. ನಟಿ ಸದಾ ಸಮತೋಲಿತ ಆಹಾರಕ್ರಮಕ್ಕೆ ಹೆಚ್ಚು ಒತ್ತು ಕೊಡುತ್ತಾರಂತೆ. ತನ್ನ ದೇಹದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿಯೊಂದು ಆಹಾರವನ್ನ ಸೇವಿಸುವುದಾಗಿ ಹೇಳಿದ್ದಾರೆ. ನಿತ್ಯ ವ್ಯಾಯಾಮ, ಯೋಗ, ಧ್ಯಾನದ ಮೂಲಕ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
‘ಐಶ್ವರ್ಯಾ’ ಅನ್ನೋ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ ಈಗ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಶಾರುಖ್ ಖಾನ್ ಪಾಲಿನ ಲಕ್ಕಿ ಹೀರೋಯಿನ್ ನಟಿ ದೀಪಿಕಾ ಪಡುಕೋಣೆ ಅಭಿನಯದ 3 ಚಿತ್ರಗಳು 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿವೆ.
ದೀಪಿಕಾ ಪಡುಕೋಣೆ ಅದ್ಭುತ ನಟಿಯಾಗಿದ್ದು, ಯಾವುದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುವಂತಹ ಸಾಮರ್ಥ್ಯ ಹೊಂದಿದ್ದು, ಎಲ್ಲರ ಫೇವರೇಟ್ ಹೀರೋಯಿನ್ ಆಗಿ ಖ್ಯಾತಿ ಪಡೆದಿದ್ದಾರೆ.