ಟಾಲಿವುಡ್​​​​ನ ಮೋಸ್ಟ್​​ ಸ್ಮಾರ್ಟ್​ ನಟ ವಿಜಯ್ ದೇವರಕೊಂಡ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ ಆಫ್ 2025. ಹೌದು.. ಒಂದಷ್ಟು ಸೋಲುಗಳ ಬಳಿಕ ಎಚ್ಚೆತ್ತುಕೊಂಡಿರೋ ರೌಡಿಬಾಯ್ ವಿಜಯ್​ ದೇವರಕೊಂಡ, ಇದೀಗ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ತಯಾರಾಗ್ತಿರೋ ಚಿತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

VD12 (1)

ಒಂದು ಕಡೆ ನ್ಯಾಷನಲ್​ ಕ್ರಶ್​ ಹಾಗೂ ಪ್ಯಾನ್​​ ಇಂಡಿಯಾ ಸ್ಟಾರ್​​​​ ನಟಿ ರಶ್ಮಿಕಾ ಮಂದಣ್ಣ ಜೊತೆ ಮದ್ವೆ ಮ್ಯಾಟರ್, ಮತ್ತೊಂದು ಕಡೆ ಚೆಗುವಾರ ಸ್ಟೈಲ್​ನಲ್ಲಿರೋ ದೇವರಕೊಂಡ ಗೆಟಪ್ಸ್. ಇವೆರಡರಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ ಅರ್ಜುನ್ ರೆಡ್ಡಿ.

RANBIR KAPOOR (2)

ಅರ್ಜುನ್ ರೆಡ್ಡಿ ಸಿನಿಮಾದಿಂದ ಬಾಲಿವುಡ್ ಮಂದಿಯ ಹುಬ್ಬೇರಿಸಿದ್ದ ನಟ ವಿಜಯ್ ದೇವರಕೊಂಡ, ನ್ಯಾಷನಲ್ ಕ್ರಶ್ ರಶ್ಮಿಕಾಗೂ ಕ್ರಶ್ ಆಗಿಬಿಟ್ಟಿದ್ದರು. ತಮ್ಮದೇ ರೌಡಿ ಬ್ರ್ಯಾಂಡ್ ನಿಂದ ನ್ಯೂ ಬ್ರ್ಯಾಂಡ್ ಸ್ಟಾರ್ ಆಗಿ ರಾರಾಜಿಸಿದ್ದ ಈತ, ಯೂತ್​ನಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡರು.

VD12 (2)

2023 ಮತ್ತು 2024ರಲ್ಲಿ ಖುಷಿ ಹಾಗೂ ಫ್ಯಾಮಿಲಿ ಸ್ಟಾರ್ ಸಿನಿಮಾಗಳಿಂದ ಎಕ್ಸ್​ಪೆರಿಮೆಂಟ್ಸ್ ಮಾಡಿದ್ರು. ಅದಕ್ಕೂ ಮುನ್ನ ಲೈಗರ್ ಸಿನಿಮಾ ಮಾಡಿದ್ರು. ಎಲ್ಲವೂ ಪ್ರಯೋಗಗಳಾಗಿಯೇ ಉಳಿದವೇ ಹೊರತು, ಪ್ರೇಕ್ಷಕರಿಗೆ ಮಾತ್ರ ರುಚಿಸಲಿಲ್ಲ. ಇದೀಗ ಮತ್ತೆ ಗೆಲುವಿನ ಲಯಕ್ಕೆ ಮರಳಲು ಇನ್ನಿಲ್ಲದೆ ಸರ್ಕಸ್ ಮಾಡ್ತಿದ್ದಾರೆ. ವಿಜಯ್​ ದೇವರಕೊಂಡ ಮಾಡ್ತಿರೋ ಆ ಸರ್ಕಸ್​​ನ ಒಂದು ಭಾಗವೇ ಇನ್ನೂ ಹೆಸರಿಡದ ವಿಜಯ್ ದೇವರಕೊಂಡ 12ನೇ ಸಿನಿಮಾ VD12ಗೆ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಎಂಟ್ರಿ.

VD12 (3)

ಅರೇ.. ದೇವರಕೊಂಡ ಚಿತ್ರದಲ್ಲಿ ಅನಿಮಲ್ ಫೇಮ್ ರಣ್ಬೀರ್ ನಟಿಸಿದ್ದಾರಾ ಅಂತ ಹುಬ್ಬೇರಿಸಬೇಡಿ. ಮೊನ್ನೆಯಷ್ಟೇ VD-12 ಚಿತ್ರದ ಟೀಸರ್ ಒಂದಕ್ಕೆ ಮುಂಬೈನಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ಬಾಲಿವುಡ್ ನಟ ರಣ್ಬೀರ್ ಕಪೂರ್. ಇದ್ರಿಂದ VD12 ಚಿತ್ರಕ್ಕೆ ಆನೆಬಲ ಬಂದಂತಾಗಿದೆ. ಅಂದಹಾಗೆ ರಣ್ಬೀರ್ ಈ ಕೆಲಸ ಮಾಡಲು ಒಪ್ಪೋಕೆ ಕಾರಣ ಒನ್ ಅಂಡ್ ಓನ್ಲಿ ರಶ್ಮಿಕಾ ಮಂದಣ್ಣ. ಅನಿಮಲ್ ಚಿತ್ರದಲ್ಲಿ ರಣ್ಬೀರ್ ಜೊತೆ ಬಣ್ಣ ಹಚ್ಚಿದ್ದ ರಶ್ಮಿಕಾ ಭಾವಿ ಪತಿ ವಿಜಯ್ ದೇವರಕೊಂಡ ಸಿನಿಮಾ ಇದಾಗಿದ್ದು, ಅದಕ್ಕೆ ವಾಯ್ಸ್ ನೀಡಿದ್ದಾರಂತೆ ರಣ್ಬೀರ್.

ಅಂದಹಾಗೆ VD12 ಚಿತ್ರದ ಟೀಸರ್ ಝಲಕ್ ಇದೇ ಫೆಬ್ರವರಿ 12ಕ್ಕೆ ಲಾಂಚ್ ಆಗ್ತಿದ್ದು, ಆ ಟೀಸರ್ ನ ಹಿನ್ನೆಲೆ ಧ್ವನಿ ರಣ್ಬೀರ್ ಕಪೂರ್ ರದ್ದೇ ಆಗಿರಲಿದೆ ಅಂತಿದೆ ಚಿತ್ರತಂಡ. ಅದೇನೇ ಇರಲಿ, ವಿಜಯ್ ದೇವರಕೊಂಡಗೆ ರಶ್ಮಿಕಾ ಮೂಲಕ ಅಂದದ ಜೊತೆ ಅದೃಷ್ಟ ಕೂಡ ಬಂದಂತಾಗ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ