ಮೈಸೂರಿನ ಸಂಚಲನ ರಂಗತಂಡ ಸೆಪ್ಟೆಂಬರ್ 14 ರಂದು ಕನ್ನಡ ಹಾಸ್ಯ ನಾಟಕ “ಎರಡೆರಡ್ಲಾ ಐದು” ನಾಟಕ ಪ್ರದರ್ಶಿಸಲಿದೆ.

ಬೆಂಗಳೂರಿನ ಜೆಪಿ ನಗರದ ವ್ಯೋಮ ಆರ್ಟ್ ಥಿಯೇಟರ್ ಅಂಡ್ ಸ್ಟುಡಿಯೋನಲ್ಲಿ ಮಧ್ಯಾಹ್ನ 3:30ಕ್ಕೆ ಹಾಗೂ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನವಾಗಲಿದೆ.

ಕೇವಲ 12 ದಿನಗಳಲ್ಲಿ ಈ ನಾಟಕವನ್ನು ಕಟ್ಟಿದ ಶ್ರೇಯಸ್ಸು , ಸಂಚಲನ ತಂಡದ ರೂವಾರಿ ದೀಪಕ್ ಮೈಸೂರು ಮತ್ತು ನಿರ್ದೇಶಕರಾದ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ.

ಮೋಸ ಮಾಡದೆ, ಲಂಚವನ್ನು ತೆಗೆದುಕೊಳ್ಳದೇ ಪ್ರಾಮಾಣಿಕತೆಯಿಂದ ದುಡಿದರೆ ಒಂದಲ್ಲ ಒಂದು ದಿನ ಅದರ ಫಲ ಸಿಕ್ಕೆ ಸಿಗುತ್ತದೆ, ಕಷ್ಟಗಳು ಬಂದಾಗ ಮಾತ್ರ ಸಂಬಂಧಗಳು ಗಟ್ಟಿಯಾಗಿ ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ, ಶಾಂತಿ ಅನ್ನುವುದು ಹೊರಗಡೆ ಸಿಗುವ ವಸ್ತುವ ಲ್ಲ, ಅದು ಆಂತರಿಕ ಅನ್ನುವುದು ಈ ನಾಟಕದಿಂದ ತಿಳಿಯುತ್ತದೆ. ಪ್ರೀತಿ-ಪ್ರೇಮ ಕೇವಲ ಆಕರ್ಷಣೆಯಲ್ಲ,  ಅದು ಆತ್ಮಕ್ಕೆ ಸಂಬಂಧಪಟ್ಟದ್ದು ಎಂಬುದನ್ನು ನವಿರಾಗಿ ತಿಳಿಸುವುದೇ ನಾಟಕದ ಥೀಮ್​. ಇದೊಂದು ಮಾರ್ಮಿಕವಾದ ಮತ್ತು ಹೃದಯಸ್ಪರ್ಶಿ ಸಾಂಸಾರಿಕ ಹಾಸ್ಯ, ಮಾನವೀಯ ಮೌಲ್ಯಗಳು ಬೆರೆತಿರುವ  ಒಂದು ಸಂಪೂರ್ಣ ನಾಟಕ. ನಾಟಕ ಸವಿಯಲು ಬಯಸುವವರು https://in.bookmyshow.com/plays/drama-eraderadla-idu/ET00460455 ಇಲ್ಲಿ ಬುಕ್​ ಮಾಡಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ