- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಫುಲ್ ಮೀಲ್ಸ್
ನಿರ್ದೇಶನ: ವಿನಾಯಕ ಎನ್
ನಿರ್ಮಾಪಕ: ಲಿಖಿತ್ ಶೆಟ್ಟಿ
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ, ತೇಜಸ್ವಿನಿ, ರಂಗಾಯಣ ರಘು, ವಿಜಯ್ ಚಂಡೂರ್, ರಾಜೇಶ್ ನಟರಂಗ, ಹೊನ್ನವಳ್ಳಿ ಕೃಷ್ಣ ಮೊದಲಾದವರು

ರೇಟಿಂಗ್: 3.5/5
 ಫ್ಯಾಮಿಲಿ ಪ್ಯಾಕ್, ಸಂಕಷ್ಟಕರ ಗಣಪತಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ  ಲಿಖಿತ್ ಶೆಟ್ಟಿ, ನಿರ್ಮಾಪಕ ಹಾಗೂ ನಾಯಕನಾಗಿ ‘ಅಭಿನಯಿಸುವುದರೊಡನೆ ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮಾ, ರಂಗಾಯಣ ರಘು ನಟನೆಯ 'ಫುಲ್ ಮೀಲ್ಸ್' ಸಿನಿಮಾ ಇಂದಿನಿಂದ (ನವೆಂಬರ್ 21) ರಾಜ್ಯಾದ್ಯಂತ ತೆರೆಗೆ ಬಂದಿದೆ...  ರೊಮ್ಯಾಂಟಿಕ್, ಕಾಮಿಡಿ ಜಾನರ್ ಸಿನಿಮಾ 'ಫುಲ್ ಮೀಲ್ಸ್'  ಚಿತ್ರವನ್ನು ಎನ್. ವಿನಾಯಕ್ ನಿರ್ದೇಶಿಸಿದ್ದು ಲಿಖಿತ್ ಶೆಟ್ಟಿ ವೆಡ್ಡಿಂಗ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಥೆಯೇ ಫೋಟೋಗ್ರಾಫಿ ಸುತ್ತ ಸುತ್ತುವ ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರವಿದು. ಸಂಗೀತ ನಿರ್ದೇಶಕ ಗುರುಕಿರಣ್, ಛಾಯಾಗ್ರಾಹಕ ಮನೋಹರ್ ಜೋಶಿ, ಸಂಕಲನ ದೀಪು ಎಸ್. ಕುಮಾರ್ ಚಿತ್ರತಂಡದಲ್ಲಿದ್ದಾರೆ. ಹಾಗಾದರೆ ಚಿತ್ರ ಹೇಗಿದೆ ತಿಳಿಯಲು ಮುಂದೆ ಓದಿ..
ಫೊಟೋಗ್ರಾಫಿ ಅಂದರೆ ಆತನಿಗೆ ಪ್ರಾಣ. ಆದರೆ ಅದನ್ನೇ ವೃತ್ತಿಯಾಗಿಸಿ ಯಶಸ್ಸು ಪಡೆಯಲು ಸೋತಿರುತ್ತಾನೆ. ಇಂಥ ವ್ಯಕ್ತಿಗೆ ಪ್ರಿ ವೆಡ್ಡಿಂಗ್ ಶೂಟ್ ಆಫರ್ ಒಂದು ಸಿಗುತ್ತದೆ. ಆದರೆ ಶೂಟಿಂಗ್ ಗೆ ಹೋದಾಗ ನಿಶ್ಚಿತಾರ್ಥ(ಎಂಗೇಜ್ ಮೆಂಟ್) ಆಗಿದ್ದ ಹುಡುಗಿಯೇ ಫೋಟೋಗ್ರಾಫರ್ ಜತೆಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಆ ಹುಡುಗಿಯ ಜೊತೆಯಾಗಿದ್ದ ಸ್ನೇಹಿತೆ ತಾನೂ ಸಹ ಅದೇ ಫೋಟೋಗ್ರಾಫರ್ ನನ್ನು ಪ್ರೀತಿಸುತ್ತಿದ್ದಾಳೆ. ಹಾಗಾದರೆ ಆ ಹುಡುಗ ಯಾರನ್ನು ಪ್ರೀತಿಸುತ್ತಾನೆ? ಕೊನೆಯಲ್ಲಿ ಯಾರ ಕೊರಳಿಗೆ ತಾಳಿ‌ಕಟ್ಟುತ್ತಾನೆ? ಫೋಟೋಗ್ರಾಫರ್ ಯುವಕನ ಭವಿಷ್ಯ ಹೇಗಿರಲಿದೆ ನೋಡಲು ನೀವು ಚಿತ್ರಮಂದಿರದಲ್ಲಿ  ಫುಲ್ ಮೀಲ್ಸ್ ಸವಿಯಬೇಕು.
ಮೊದಲಾರ್ಧದಲ್ಲಿ ತುಂಬಾ ಸಾಮಾನ್ಯ ವಾಗಿ ಬರುವ ಒಬ್ಬ ಹೀರೋ - ಇಬ್ಬರು ನಾಯಕಿಯರ ಕಥೆ  ಎನಿಸುವ  'ಫುಲ್ ಮೀಲ್ಸ್' ಮಧ್ಯಂತರಕ್ಕೆ ಮುಂಚೆಯೇ ಕಥೆ ಬೇರೆಯದೇ ಸ್ವರೂಪವನ್ನು ಪಡೆಯುತ್ತದೆ.  ಹಾಸ್ಯ, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ಎಲ್ಲ ಬಗೆಯ ಸ್ಯಾಂಪಲ್ಲುಗಳಿದೆ..
ವಿನಾಯಕ್ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ...  ನಾಯಕ ನಟ ಲಿಖಿತ್ ಶೆಟ್ಟಿ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡು ತಮ್ಮ ನುರಿತ ಅಭಿನಯವನ್ನು ಚೆನ್ನಾಗಿ ಕಾಣಿಸಿದ್ದಾರೆ. ಯಾವುದೇ ನಾಯಕ ನಟನನ್ನು ಸಹ ಮೀರಿಸುವಂತಹ ಅಭಿನಯವನ್ನು ನೀಡಿದ್ದಾರೆ  ವಿಜಯ್ ಚಂಡೂರ್ ಸಹ ಕಥೆಯ ವೇಗಕ್ಕೆ ಚಾಲಕನಾಗಿ ತಮ್ಮ ಅಭಿನಯವನ್ನು ನೀಡಿದ್ದಾರೆ. ಇಬ್ಬರೂ ನಾಯಕಿಯರು ಕೂಡ ತಮ್ಮ ಸೌಂದರ್ಯ ಮತ್ತು ಸಹಜ ಅಭಿನಯದಿಂದ ಮುಂದಿನ ಭರವಸೆಯ ನಾಯಕಿಯಾಗಿ ಅಭಿನಯಿಸಿದ್ದಾರೆ.
“ ನಿನ್ನ ಉದ್ದೇಶ ನೀಯತ್ತಾಗಿದ್ರೆ , ನಿನಗೆ ಸರಿಸಮಯಕ್ಕೆ ಆ ಪ್ರಕೃತಿಯೆ ಸಹಕಾರ ನೀಡುತ್ತೆ “ , “ ಅಡ್ಡಕ್ಕೆ ಬರಕ್ಕೆ ಅಡ್ರಸ್ ಗೊತ್ತಿದ್ರೆ ಸಾಕು , ಅಣ್ಣ ಯಾರು ಗೊತ್ತಿರಬೇಕಾಗಿಲ್ಲ “ ಈ ರೀತಿಯ ಅದೆಷ್ಟೋ ಚೆಂದದ , ಮನಸಲ್ಲಿ ಉಳಿಯುವ ಸಂಭಾಷಣೆಯೇ ಚಿತ್ರದ ಜೀವಾಳ. ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ ಎಲ್ಲವೂ ಸಿಂಪಲ್ ಮತ್ತು ಪರ್ಫೆಕ್ಟ್ ಆಗಿದೆ.  ಗುರುಕಿರಣ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಮತ್ತು ಹಿನ್ನೆಲೆ ಸಂಗೀತ ಅದ್ಭುತ!! ಛಾಯಾಗ್ರಹಣ ಸಹ ಅತ್ಯಂತ ಚೆನ್ನಾಗಿದ್ದು ವಿವಿಧ ಲೊಕೇಷನ್ ಗಳನ್ನು ಸುಂದರವಾಗಿ ತೋರಿಸಿದ್ದಾರೆ.. ಯಾವುದೇ ಮುಜುಗರವಿಲ್ಲದೆ ಎಂಜಾಯ್ ಮಾಡಬಹುದಾದ ಕಾಮಿಡಿ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಎನ್ನುವುದಕ್ಕೆ ಅಡ್ಡಿ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ