ಬಹಳ ಹೊತ್ತು ಬಿಸಿಲಿನಲ್ಲಿದ್ದರೂ, ಅದಕ್ಕೆ ಏನೂ ಹಾನಿ ಆಗದೆ, ಫ್ರೆಶ್ಆಗಿ ನಳನಳಿಸುವಂತೆ ಮಾಡಲು ಸಲಹೆಗಳನ್ನು ಅಗತ್ಯ ಅನುಸರಿಸಿ.....!

ಚಳಿಗಾಲದಲ್ಲಿ ಬೆಳಗಿನ ಹೊತ್ತು ಚುಮು ಚುಮು ಚಳಿ ಓಡಿಸಲು, ಬಿಸಿಲು ಬರುವುದನ್ನೇ ಕಾದಿದ್ದು ಹೊರಗೆ ಓಡಾಡಿ ಮೈ ಕಾಯಿಸುತ್ತೇವೆ. ಆದರೆ ಬೇಸಿಗೆ ರಂಗೇರುತ್ತಿದ್ದಂತೆ ಬಿಸಿಲಲ್ಲಿ ಓಡಾಡುವುದೇ ದುಸ್ತರವಾಗುತ್ತದೆ. ಬೆಳಗಿನ ಹೊಂಬಿಸಲಲ್ಲಿ ಸೂರ್ಯಕಾಂತಿಗೆ ಮೈ ಒಡ್ಡುವುದರಿಂದ ವಿಟಮಿನ್‌ D ಲಭಿಸುತ್ತದೆ ಎಂಬುದು ನಿಜ, ಆದರೆ ಬೇಸಿಗೆಯ ಉರಿ ಬಿಸಿಲಲ್ಲಿ ಓಡಾಡಿದಷ್ಟೂ ನಮಗೆ ಹಾನಿ ತಪ್ಪಿದ್ದಲ್ಲ.

ಅಸಲಿಗೆ ಸೂರ್ಯನ UV ಕಿರಣಗಳು ನಮ್ಮ ದೇಹಕ್ಕೆ ಹಲವಾರು ಬಾಧೆ ತರುತ್ತವೆ. ಇದರಲ್ಲೂ 2 ಬಗೆ ಇದ್ದು UV ಕಿರಣಗಳು ಚರ್ಮದ ಆಳವಾದ ಪದರಕ್ಕಿಳಿದು ಹಿಂಸೆ ಮಾಡಿದರೆ, UVA ಕಿರಣಗಳು ಚರ್ಮದ ಮೇಲ್ಪದರಕ್ಕೆ ಹಾನಿ ಮಾಡುತ್ತವೆ. ಇದರಿಂದ ಹಲವು ನಕಾರಾತ್ಮಕ ಪ್ರಭಾವಗಳಾಗುತ್ತವೆ.

ಟ್ಯಾನಿಂಗ್‌ : ಸೂರ್ಯನ ಕಿರಣಗಳ ಸಂಪರ್ಕದಿಂದ ಚರ್ಮದ ಬಣ್ಣ ದಟ್ಟ ಕಪ್ಪಾಗುತ್ತಾ ಹೋಗುತ್ತದೆ. ಆಗ ಚರ್ಮ ಕಾಂತಿಹೀನ ಆಗುತ್ತದೆ. ಒಮ್ಮೊಮ್ಮೆ ಅಲ್ಲಲ್ಲಿ ದಟ್ಟ ಪ್ಯಾಚುಗಳು ಸಹ ಕಂಡುಬರುತ್ತವೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಮೊದಲಿನಂತಾಗುವುದಿಲ್ಲ. ಮುಖದ ಹೊಳಪು ಮಂಕಾಗಿ ಎಷ್ಟು ಮೇಕಪ್‌ ಮಾಡಿದರೂ ಕಳೆ ಕೂಡದು.

ಸನ್ಬರ್ನ್‌ : ಸೂರ್ಯ ಕಿರಣದ ಸತತ ದಾಳಿಯಿಂದ ಚರ್ಮ ಅಲ್ಲಲ್ಲಿ ಒಡೆಯುತ್ತದೆ, ಹೊಪ್ಪಳ ಏಳುತ್ತದೆ. ಜೊತೆಗೆ ಚರ್ಮ ಅಲ್ಲಲ್ಲಿ ಕೆಂಪು ಕೆಂಪಾಗಿ ದದ್ದು, ಗಂಧೆಗಳಾಗಬಹುದು. ಇದರಿಂದ ತೀವ್ರ ಕೆರೆತ, ಕಡಿತ, ಉರಿ ಕಾಡುತ್ತದೆ.

ಏಜಿಂಗ್‌ : ಚರ್ಮದ ಅಡಿ ಪದರದಲ್ಲಿನ ಕೊಲೋಜೆ‌ನ್ ಎಲಾಸ್ಟಿನ್‌ ಪದರಗಳಲ್ಲಿನ ಡ್ಯಾಮೇಜ್‌ ಕಾರಣ, ಸ್ಕಿನ್‌ ಕ್ರಮೇಣ ಏಜಿಂಗ್‌ ನ ಸವೆತಕ್ಕೆ ಕಾರಣವಾಗಿ, ಮುಪ್ಪು ಹೆಚ್ಚಾದಂತೆ ಕಂಡುಬರುತ್ತದೆ. ಇದರಿಂದ ಚರ್ಮ ಜೋತುಬಿದ್ದು, ಸುಕ್ಕು, ನೆರಿಗೆ, ಫೈನ್‌ ಲೈನ್ಸ್ ಹೆಚ್ಚುತ್ತವೆ. UV UVA ಎರಡೂ ಬಗೆಯ ಸೂರ್ಯ ಕಿರಣಗಳ ದುಷ್ಪ್ರಭಾವವೇ ಇದಕ್ಕೆ ಕಾರಣ.

ಸ್ಕಿನ್ಕ್ಯಾನ್ಸರ್‌ : ಇದು ಆನುವಂಶಿಕತೆ ಇರಬಹುದು, ಆದರೆ ಇದು ಸನ್‌ ಡ್ಯಾಮೇಜ್‌ ಕಾರಣ ಹೆಚ್ಚು ಕಾಡುತ್ತದೆ ಎಂಬುದೂ ನಿಜ. ಸೂರ್ಯನ ಕಿರಣಗಳ ಈ ತೀಕ್ಷ್ಣ ಪ್ರಭಾವ, ಎಲ್ಲರ ಮೇಲೂ ಸಮಾನವಾಗಿ ಇರುವುದಿಲ್ಲ.

ಬಿಸಿಲಿಗೆ ಹೋದವರಲ್ಲಿ ಶ್ವೇತ ವರ್ಣದವರಿಗೇ ಹೆಚ್ಚಿನ ತೊಂದರೆ ಕಾಡುವುದು. ಮೈ ಪೂರ್ತಿ ಮಚ್ಚೆ ಇರುವವರಿಗೂ ಬಾಧೆ ತಪ್ಪದು. ಇಷ್ಟಲ್ಲದೆ ಯಾರಿಗೆ ಬೆಂಕಿ ಉರಿಯ ಗುರುತು, ಗಾಯ, ಮಾಸಿದ ಕಲೆ ಹೆಚ್ಚಾಗಿರುತ್ತದೋ, ಅಂಥವರಿಗೆ ಬಿಸಿಲಿನ ಓಡಾಟ ಹೆಚ್ಚು ಹಿಂಸೆ ಎನಿಸುತ್ತದೆ.

iStock_000006116977Large

UV ಕಿರಣಗಳಿಂದ ರಕ್ಷಣೆ

ನಿಮ್ಮ ಇಡೀ ದೇಹವನ್ನು ಕವರ್‌ ಮಾಡುವಂಥ ಡ್ರೆಸ್‌ ಧರಿಸಿ. ಆಗ ಈ ಕಿರಣ ನಿಮ್ಮ ಚರ್ಮಕ್ಕೆ ತಾಕದು. 50 SPF ರೇಟಿಂಗ್ ಅಥವಾ ಅದಕ್ಕೂ ಹೆಚ್ಚಿನ ಮಟ್ಟ ಇರುವಂಥ ಫ್ಯಾಬ್ರಿಕ್ಸ್ ನ ಬಟ್ಟೆಗಳನ್ನೇ ಧರಿಸಬೇಕು. ಇದಕ್ಕಾಗಿ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್‌ ಲೋಶನ್‌ ಬಳಸುವುದು ಅನಿವಾರ್ಯ. ಅದು 30 SPF (ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌) ಆಗಿದ್ದರೆ ಭಾರತೀಯ ಚರ್ಮಕ್ಕೆ ಉತ್ತಮ ರಕ್ಷಣೆ ನೀಡಬಲ್ಲದು. ಹಗಲಲ್ಲಿ ನೀವು ಹೆಚ್ಚಾಗಿ ಉರಿಬಿಸಿಲಲ್ಲೇ ಓಡಾಡ ಬೇಕಿದ್ದರೆ, 50 SPFನ ಸನ್‌ ಸ್ಕ್ರೀನ್‌ ಬಳಸಿದರೆ ಲೇಸು. ಹೀಗಾಗಿ ಹೊರಗೆ ಹೋಗುವ 15 ನಿಮಿಷಕ್ಕೆ ಮೊದಲು 30+ SPFನ ಬ್ರಾಂಡ್‌ ಸ್ಪೆಕ್ಟ್ರಂ ಹಚ್ಚಿ ಮುನ್ನಡೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ