ಉರಿ ಬೇಸಿಗೆಯಲ್ಲಿ ಎಲ್ಲಕ್ಕಿಂತ ಬ್ಯೂಟಿಫುಲ್ ವಿಭಿನ್ನ ಲುಕ್ಸ್ ಪಡೆಯ ಬಯಸುತ್ತೀರಾ? ಹಾಗಾದರೆ ಸಲಹೆಗಳನ್ನು ಅಗತ್ಯ ಅನುಸರಿಸಿ.....!

ಬೇಸಿಗೆಯ ಕಾಲದಲ್ಲಿ ಎಷ್ಟೋ ವಿಷಯಗಳಲ್ಲಿ ಬದಲಾವಣೆ ಅನಿವಾರ್ಯ. ಊಟ ತಿಂಡಿ, ಡ್ರೆಸ್‌, ಹೇರ್‌ ಸ್ಟೈಲ್ ‌ಗಳಿಂದ ಹಿಡಿದು ಮೇಕಪ್‌ ಸಹ ಬಹಳ ಬದಲಾಗುತ್ತದೆ. ಬೇಸಿಗೆಯಲ್ಲಿ ಸನ್‌ ಟ್ಯಾನ್‌, ಬೆವರು, ಚರ್ಮ ಅಂಟಂಟಾಗಿ ಮೆತ್ತಿಕೊಳ್ಳುವುದು ಇತ್ಯಾದಿ ಅನೇಕ ಸಮಸ್ಯೆಗಳು ಹಿಂಸೆ ಎನಿಸುತ್ತವೆ. ಈ ಕಾರಣದಿಂದಲೇ ಬೇಸಿಗೆ ಮೇಕಪ್‌ ಎಂಬುದು ಯಾವುದೇ ಸವಾಲಿಗೂ ಕಡಿಮೆ ಇಲ್ಲ ಎನಿಸುತ್ತದೆ. ಯಾವುದೇ ಪಾರ್ಟಿ, ಬಿಸ್‌ ನೆಸ್‌ ಮೀಟ್‌ ಇದ್ದು, ಪ್ರೆಸೆಂಟೆಬಲ್ ಆಗಿ ಹೋಗಬಯಸಿದರೆ ಏನೇನೋ ಬಾಧೆ ತಪ್ಪಿದ್ದಲ್ಲ. ಬೆವರು ಒದ್ದೆಮುದ್ದೆ ಆಗುವುದರಿಂದ, ಬೇಸಿಗೆಯಲ್ಲಿ ಬಹಳ ಹೊತ್ತು ಮೇಕಪ್‌ ಉಳಿಸಿಕೊಳ್ಳುವುದು ಬಲು ಕಷ್ಟಕರವೇ ಸರಿ. ಹೀಗಾಗಿ ಬೇಸಿಗೆಯಲ್ಲಿ ಬಲು ಎಚ್ಚರಿಕೆಯಿಂದ ಕಾಸ್ಮಿಟಿಕ್ಸ್ ಆರಿಸಬೇಕು.

ಕ್ಲೆನ್ಸಿಂಗ್ಗಾಗಿ ಆಯಿಲ್ ಫ್ರೀ ಫೇಸ್ವಾಶ್

ಬೇಸಿಗೆಯಲ್ಲಿ ಬೆವರಿನ ಸಮಸ್ಯೆ ಎಲ್ಲಕ್ಕಿಂತ ಹಿರಿದು. ಇದರಿಂದಾಗಿ ಮೇಕಪ್‌ ಕೆಡುತ್ತದೆ. ಈ ತೊಂದರೆ ತಪ್ಪಿಸಲು ಆಯಿಲ್ ಫ್ರೀ ಫೇಸ್‌ ವಾಶ್‌ ಬಲು ಸಹಕಾರಿ. ಹೀಗಾಗಿ ನೀವು ವಾರಕ್ಕೆ 1-2 ಸಲ ಬೆವರು ಯಾ ಚರ್ಮದಿಂದ ಜಿಡ್ಡು ಹೋಗಲಾಡಿಸಲು, ಮುಲ್ತಾನಿ ಮಿಟ್ಟಿ, ಕಡಲೆಹಿಟ್ಟು, ನಿಂಬೆ, ಬೇವು, ಅರಿಶಿನ, ಚಂದನ, ಮಸೂರ್‌ ಬೇಳೆ ಇತ್ಯಾದಿ ಬಳಸಿಕೊಳ್ಳಿ.

ಟೋನಿಂಗ್ಗಾಗಿ ಗುಲಾಬಿ ಜಲ

ಟೋನರ್‌ ಚರ್ಮದ ಕೊಳಕು ನಿವಾರಿಸಿ, ಸ್ಕಿನ್‌ ಪೋರ್ಸ್‌ ನಲ್ಲಿ ಬಿಗಿತ ತರುವ ಕೆಲಸ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಟೋನರ್‌ ಆಗಿ ಗುಲಾಬಿಜಲ ಬಳಸಿಕೊಳ್ಳಿ. ಇದು ಚರ್ಮದ ಅತ್ಯಧಿಕ ತೈಲಾಂಶವನ್ನು ಫಾಸ್ಟ್ಲಿನಿಯಂತ್ರಿಸುತ್ತದೆ, ಚರ್ಮವನ್ನು ಮಾಯಿಶ್ಚರೈಸ್‌ ಗೊಳಿಸುತ್ತದೆ. ಬೆವರಿನ ಸಮಸ್ಯೆ, ಚರ್ಮದ ಡ್ರೈನೆಸ್‌ ಎರಡಕ್ಕೂ ಇದು ಸಹಕಾರಿ.

30SPF ಸನ್‌ ಸ್ಕ್ರೀನ್‌ ಸೂರ್ಯನ ಹಾನಿಕಾರಕ UV ಕಿರಣಗಳು ನಮ್ಮ ಚರ್ಮಕ್ಕೆ ಫೈನ್‌ ಲೈನ್ಸ್, ಅಕಾಲದ ಸುಕ್ಕುಗಳು, ಕಲೆ ಪ್ಯಾಚುಗಳು, ಸನ್‌ ಟ್ಯಾನ್‌, ಸನ್‌ ಬರ್ನ್‌ ಗಳಿಗೆ ಕಾರಣವಾಗುತ್ತವೆ. ಹೀಗಾಗಿ ಬೇಸಿಗೆಯಲ್ಲಿ ನೀವು ಅನಿವಾರ್ಯವಾಗಿ ಹೊರಗೆ ಹೋಗಬೇಕಿದ್ದರೆ, ಮನೆಯಿಂದ ಹೊರಡುವ 15 ನಿಮಿಷ ಮೊದಲೇ 30 SPFಯುಕ್ತ ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಿ. ಇದನ್ನು ಆರಿಸಿಕೊಳ್ಳುವಾಗ, ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ, ಜೆಲ್ ‌ಬೇಸ್ಡ್ ಯಾ ಆ್ಯಕ್ವಾ ಬೇಸ್ಡ್ ಲೋಶನ್‌ ಕೊಳ್ಳಲು ಮರೆಯದಿರಿ.

ವಾಟರ್ಪ್ರೂಫ್ಪ್ರೈಮರ್

ಮುಖದ ಮೇಲೆ ಮೇಕಪ್‌ ಪ್ರಾಡಕ್ಟ್ ಬಳಸುವ ಸಮಯದಲ್ಲಿ, ಎಲ್ಲಕ್ಕಿಂತ ಮೊದಲು ಪ್ರೈಮರ್‌ ನ್ನು ಬಳಸಿಕೊಳ್ಳಬೇಕು. ಇದನ್ನು ಚರ್ಮಕ್ಕೆ ತಕ್ಕಂತೆ ಕ್ರೀಂ, ಜೆಲ್ ‌ಯಾ ಸ್ಪ್ರೇ ಆಗಿ ಆರಿಸಿ ಬಳಸಿರಿ. ಯಾವುದೇ ಮೇಕಪ್‌ ಗೆ ಪ್ರೈಮರ್‌ ಬೇಸ್‌ ಆಗಿ ಕೆಲಸ ಮಾಡುತ್ತದೆ. ಇದು ಸ್ಮೂತ್‌ಫ್ಲಾಲೆಸ್‌ ಮೇಕಪ್‌ ಲುಕ್ಸ್ ಪಡೆಯಲು ಸಹಕಾರಿ. ಜೊತೆಗೆ ಇದು ಲಾಂಗ ಲಾಸ್ಟಿಂಗ್‌ ಮೇಕಪ್‌ ಗಾಗಿ ಬೇಕೇ ಬೇಕು. ಮಾಯಿಶ್ಚರೈಸರ್‌ ಹಚ್ಚಿಕೊಂಡ 5 ನಿಮಿಷಗಳ ನಂತರ ಇದನ್ನು ಸವರಬೇಕು. 5 ನಿಮಿಷಗಳ ನಂತರ ಮೇಕಪ್ ಶುರು ಮಾಡಿ. ಬೇಸಿಗೆಯಲ್ಲಿ ವಾಟರ್‌ ಪ್ರೂಫ್‌ ಮೇಕಪ್‌ ಅತ್ಯಗತ್ಯ ಹೌದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ