ದಿನೇ ದಿನೇ ಹೆಚ್ಚುತ್ತಿರುವ ಉರಿ ಬಿಸಿಲಿನಿಂದಾಗಿ, ಕೈ ಬೆವರಿ ಆಗಾಗ ತಲೆ ಸವರಿಕೊಳ್ಳುವಂತಾದಾಗ, ಅದರ ಪರಿಣಾಮ ಕೂದಲಿನ ಮೇಲೆ ಖಂಡಿತಾ ಆಗುತ್ತದೆ. ರೇಷ್ಮೆಯಂತೆ ಅಂದವಾಗಿದ್ದ ಕೂದಲು, ಹ್ಯುಮಿಡಿಟಿ ತುಂಬಿರುವ ಉಷ್ಣ ಗಾಳಿಯಿಂದಾಗಿ ಅತಿ ಒರಟಾಗುತ್ತದೆ. ಉತ್ತಮ ಶ್ಯಾಂಪೂ ಬಳಸಿದರೂ ಒಂದೇ ದಿನಕ್ಕೆ ಮತ್ತೆ ಅಂಟಂಟಾಗುತ್ತದೆ. ಬೇಸಿಗೆ ಆರಂಭದ 2-3 ವಾರಗಳಲ್ಲಿ, ವಾರಕ್ಕೆ ಕನಿಷ್ಠ 3 ಸಲವಾದರೂ ಶ್ಯಾಂಪೂ ಬಳಸಲೇಬೇಕಾಗುತ್ತದೆ. ಕೆಮಿಕಲ್ಸ್ ಅತಿಯಾದ ಶ್ಯಾಂಪೂ ಬಳಕೆ ಕೂದಲನ್ನು ದುರ್ಬಲಗೊಳಿಸುತ್ತದೆ, ಅದು ಬೇಗ ಶುಷ್ಕವಾಗುತ್ತದೆ.

ನೀವು ಶ್ಯಾಂಪೂವನ್ನು ಹೇಗೆ ವಾರಕ್ಕೆ ಎಷ್ಟು ಸಲ ಬಳಸಬೇಕು ಎಂಬುದರ ಮಾಹಿತಿ ತಿಳಿದಿರಬೇಕು. ಆಗ ಮಾತ್ರ ಬೇಸಿಗೆಯ ಉರಿಬಿಸಿಲು ಅಥವಾ ಹ್ಯುಮಿಡಿಟಿಯ ವಾತಾವರಣ ಇದ್ದರೂ, ನಿಮ್ಮ ಕೂದಲು ಆರೋಗ್ಯಕರವಾಗಿ ಇರಬಲ್ಲದು.

ಮಾಲಿನ್ಯ ತರುವ ತೊಂದರೆ

ಇತ್ತೀಚಿನ ಓಡು ಯುಗದ ಜೀವನ ಶೈಲಿಯಿಂದಾಗಿ ಕೂದಲು ಉದುರುವುದು, ತುಂಡಾಗುವುದು, ಡ್ರೈನೆಸ್‌, ಸಿಕ್ಕು, ಡ್ಯಾಂಡ್ರಫ್‌, ಸೀಳು ತುದಿಯ ಕೂದಲು ಇತ್ಯಾದಿ ಮಾಮೂಲಿ ಆಗಿಹೋಗಿದೆ. ಬೇಸಿಗೆಯಲ್ಲಿ ಸ್ಕಾಲ್ಪ್ (ನೆತ್ತಿ) ಹೆಚ್ಚು ಜಿಡ್ಡಿನಂಶ ಬಿಟ್ಟುಕೊಳ್ಳುತ್ತದೆ.

ಜೊತೆಗೆ ಬೆವರು, ಪರಿಸರ ಮಾಲಿನ್ಯ, ಸ್ಕಾಲ್ಪ್ ಮೇಲಿನ ಕೊಳೆ ಇತ್ಯಾದಿ ಸೇರಿ ಕೂದಲು ಬಲು ಬೇಗ ಅಂಟಂಟಾಗುತ್ತದೆ, ಗಲೀಜಾಗಿ ಕಾಣುತ್ತದೆ. ಬೆವರಿನ ಕ್ಷಾರದಿಂದಾಗಿ ಕೂದಲಿನ ಆರೋಗ್ಯ ಹಾಳಾಗುತ್ತದೆ. ಇದರಿಂದಾಗಿ ಕೂದಲಿನ ಬುಡಭಾಗ ದುರ್ಬಲ ಆಗುತ್ತದೆ. ಹಾಗಾಗಿ ಕೂದಲು ಬೇಗ ಬೇಗ ಉದುರುತ್ತದೆ.

ಜೊತೆಗೆ ಬೇಸಿಗೆಯಲ್ಲಿ ಅಂಟಂಟು ಕೂದಲಿನ ದುರ್ವಾಸನೆ ಇತರರು ಬೇಸರ ಪಡುವಂತೆ ಆಗುತ್ತದೆ. ಅಸಲಿಗೆ ಸ್ಕಾಲ್ಪ್ ನಿಂದ ಮೂಡುವ ಬೆವರು, ಧಗೆ, ಶಾಖದಿಂದ ಬ್ಯಾಕ್ಟೀರಿಯಾ, ಫಂಗಸ್‌ ಹೆಚ್ಚುತ್ತವೆ. ಇದರಿಂದ ಕೂದಲು ವಿಚಿತ್ರ ದುರ್ಗಂಧ ಬೀರುತ್ತದೆ. ಕೂದಲಿನ ಉತ್ತಮ ಆರೈಕೆಯಿಂದ ಮಾತ್ರ ಈ ಸಮಸ್ಯೆ ದೂರಾಗಬಲ್ಲದು.

ಶ್ಯಾಂಪೂ ಬಳಕೆ ಹೀಗಿರಲಿ

ನೀವು ಶ್ಯಾಂಪೂ ಬಳಸುತ್ತೀರಿ ನಿಜ, ಆದರೆ ಅದು ಸ್ಕಾಲ್ಪ್ ನಿಂದ ಜಿಡ್ಡನ್ನು ತೆಗೆಯುವುದೇ ಇಲ್ಲ. ಆದ್ದರಿಂದ ಶ್ಯಾಂಪೂ ಬಳಸುವಾಗ ಅಸರ ಬೇಡ. ತಲೆಗೆ ಶ್ಯಾಂಪೂ ತಿಕ್ಕುವಾಗ, ವೃತ್ತಾಕಾರವಾಗಿ ಹಿಂದೆ ಮುಂದೆ ಕೈ ಆಡಿಸುವುದರಿಂದ ಕೂದಲು ಸಿಕ್ಕು ಸಿಕ್ಕಾಗುತ್ತದೆ, ದುರ್ಬಲ ಆಗುತ್ತದೆ. ಉದುರಿ, ತುಂಡರಿಸಲೂಬಹುದು. ಆದ್ದರಿಂದ ಶ್ಯಾಂಪೂ ಬಳಸುವಾಗ, ಎರಡೂ ಕೈಗಳಿಂದ ಸೈಡ್‌ ಟು ಸೈಡ್‌ ಮೋಶನ್‌ ಅನುಸರಿಸಿ.

ಇದರಿಂದ ಕೂದಲಿನ ಎಳೆಗೆ ಯಾವುದೇ ಹಾನಿ ಇಲ್ಲ. ಜೊತೆಗೆ ಸ್ಕಾಲ್ಪ್ ನ್ನು ಕೈ ಬೆರಳಿನಿಂದ ಮೆಲ್ಲಗೆ ಒತ್ತಬೇಕು, ಹೆಚ್ಚಿನ ಒತ್ತಡ ಬೇಡ. ತಲೆಗೆ ಶ್ಯಾಂಪೂ ಹಚ್ಚಿಕೊಳ್ಳುವ ಮುನ್ನ, ಅದನ್ನು ಚೆನ್ನಾಗಿ ಒದ್ದೆ ಮಾಡಿಕೊಳ್ಳಿ. ತಲೆಗೆ ನೇರ ಶ್ಯಾಂಪೂ ಹಾಕಿಕೊಳ್ಳುವ ಬದಲು, ಪುಟ್ಟ ಬಟ್ಟಲಿಗೆ ಹಾಕಿ, ತುಸು ನೀರು ಬೆರೆಸಿ, ಆ ಮಿಶ್ರಣವನ್ನು ತಲೆಗೂದಲಿಗೆ ಉಪಯೋಗಿಸಿ. ಇದರಿಂದ ಆ ಮಿಶ್ರಣ ಸುಲಭವಾಗಿ ಕೂದಲಿಗೆ ಉತ್ತಮ ಪರಿಣಾಮ ನೀಡುತ್ತದೆ, ಅದು ಕೂದಲಿಗೆ ಯಾವ ಹಾನಿಯನ್ನೂ ಮಾಡವುದು.

ಹೇರ್‌ ಟೈಪ್‌ ಗೆ ತಕ್ಕಂತೆ ಶ್ಯಾಂಪೂ ಡ್ರೈ ಸ್ಕಾಲ್ಪ್ ಹಾಗೂ ಕೂದಲಿಗಾಗಿ ನೀವು ಸದಾ ಸಲ್ಫೇಟ್‌ ಫ್ರೀ ಶ್ಯಾಂಪೂ ಮಾತ್ರ ಬಳಸಬೇಕು. ಅಸಲಿಗೆ ಸಲ್ಫೇಟ್‌ ನಿಂದ ಸ್ಕಾಲ್ಪ್ ಡ್ರೈ ಆಗುತ್ತದೆ. ಇದರ ಬದಲು ಸ್ಕಾಲ್ಪ್ ನ್ನು ಶುಚಿಗೊಳಿಸಲು ನೀವು, ಮೈಲ್ಡ್ ಯಾ ಹರ್ಬಲ್ ಶ್ಯಾಂಪೂ ಬಳಸಿಕೊಳ್ಳಿ. ಬೇಸಿಗೆಯಲ್ಲಿ ಹೇರ್‌ ಸ್ಟೈಲಿಂಗ್‌ ಪ್ರಾಡಕ್ಟ್ಸ್ ನ ಬಳಕೆ ಬೇಡ. ಡೆಡ್‌ ಸೆಲ್ಸ್, ಡ್ಯಾಂಡ್ರಫ್ ನಿಂದ ಮುಕ್ತಿ ಪಡೆಯಲು ಸದಾ ಕ್ಲಾರಿಫೈಯಿಂಗ್‌ ಶ್ಯಾಂಪೂ ಮಾತ್ರ ಬಳಸಿಕೊಳ್ಳಿ. ಸ್ಕಾಲ್ಪ್ ಬಹಳ ಹೆಚ್ಚು ಜಿಡ್ಡು ಬಿಡುತ್ತಿದ್ದರೆ, ಆಗ ಮಾತ್ರ ಸಲ್ಫೇಟ್‌ ಶ್ಯಾಂಪೂ ಬಳಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ