ಏನಾದರೂ ಡಿಫರೆಂಟ್ಆಗಿರಲಿ : ವಾವ್‌, ಹೇರ್‌ ಡೂ ಅಂದ್ರೆ ಹೀಗಿರಬೇಕಲ್ಲವೇ? ನೀವು ಹೀಗೆ ತಯಾರಾಗಿ ಪಾರ್ಟಿಗೆ ಹೊರಟರೆ, ನಿಮ್ಮಿಂದ ಯಾರೂ ಬೇರೆ ಕಡೆಗೆ ದೃಷ್ಟಿ ತಿರುಗಿಸಲಾರರು! ಕೂದಲು ಸಹಜವೇ, ಕೃತಕವೇ ಅದನ್ನು ಯಾರು ಗಮನಿಸುತ್ತಾರೆ? ನ್ಯೂಯಾರ್ಕ್‌ ಮಹಾನಗರದ ಝೀಬ್ರಾ ಸ್ರಾಟೆಡೀಯ ಬ್ಯೂಟಿ ಔಟ್‌ ಸೈಡ್‌ಇನ್‌ ಸೈಡ್‌ ಪ್ರೋಗ್ರಾಂನಲ್ಲಿ ಮೇಕಪ್‌ ಸಹ ಒಳಗೊಂಡಿದ್ದು, ಇದರ ಒಬ್ಬ ಮಾಡೆಲ್ ‌ಹೀಗೆ ಹೊಸದೇನೋ ಕ್ರಿಯೇಟ್‌ ಮಾಡಿದಳು. ಈ ಸಲದ ನ್ಯೂ ಇಯರ್ ಪಾರ್ಟಿಗೆ ನೀವು ಹೀಗೆ ಏನಾದರೂ ಡಿಫರೆಂಟ್‌ ಮೇಕಪ್‌ ಟ್ರೈ ಮಾಡಿ!

1728468311233

ಕಲೆಯ ಮಹತ್ವ : 2 ಸಾವಿರ ವರ್ಷಗಳ ಹಿಂದೆಯೇ ರೋಮನ್‌ ನಾಟಕಕಾರರು ಎಂಥ ಹಾಸ್ಯ ನಾಟಕ ಬರೆದಿದ್ದರು ಎಂದರೆ, ಇಂದಿಗೂ ಅದು ಪಾಶ್ಚಿಮಾತ್ಯ ದೇಶಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದೆ! ಒಂದಿಷ್ಟು ವ್ಯತ್ಯಾಸ ಮಾಡಿದ ನಂತರ ಇದು ಹೊಸದರಂತೆಯೇ ಫ್ರೆಶ್‌ ಎನಿಸುತ್ತದೆ. `ಎ ಫನಿ ಥಿಂಗ್‌ ಹ್ಯಾಪೆನ್ಡ್' ಇಂಥದ್ದೇ ಒಂದು ನಾಟಕವಾಗಿದ್ದು, ವಿದೇಶಗಳಲ್ಲಿ ಇಂದಿಗೂ ಇದರ ಪ್ರದರ್ಶನ ಜನಪ್ರಿಯತೆ ಉಳಿಸಿಕೊಂಡಿದೆ. ಹ್ಞಾಂ, ಈಗ ಅಂಥ ಪ್ರಾಚೀನ ಡ್ರೆಸ್‌ ಗಳಿಲ್ಲ ಬಿಡಿ, ಏಕೆಂದರೆ ಈ ನಾಟಕ ಚರ್ಚ್‌ ಗೆ ಸೇರಿದ್ದಲ್ಲ!

rac

ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ? : ಇಸ್ರೇಲ್‌, ಹಮಾಸ್‌ ಮತ್ತು ಹಿಜ್‌ ಬುಲ್ಲಾಹ್‌ ಗಳ ನಡುವೆ ಎಂಥ ಘನಘೋರ ಯುದ್ಧ ನಡೆಯುತ್ತಿದೆ ಎಂದರೆ, ಇಡೀ ವಿಶ್ವದ ಮುಸ್ಲಿಂ/ಯೆಹೂದಿ ಸಮುದಾಯ ಹರಿದು ಹಂಚಿಹೋಗಿದೆ. ಪ್ರಾಚೀನ ಕಾಲದಿಂದ ಯೆಹೂದಿಗಳನ್ನು ದೋಷಿ ಎಂದು ಆರೋಪಿಸುತ್ತಿದ್ದ ಕ್ರೈಸ್ತರು, ಈಗಿನ ಇಸ್ರೇಲ್ ‌ನ ಮೇಲೆ ನಡೆಯುತ್ತಿರುವ ಜಬರ್ದಸ್ತಿನಿಂದ ಖುಷಿ ಕಾಣುತ್ತಿಲ್ಲ. ಅಮೆರಿಕಾ ಯೂರೋಪಿಯನ್‌ ಸರ್ಕಾರಗಳು ಇಸ್ರೇಲ್ ‌ಗೆ ಎಷ್ಟೇ ಸಪೋರ್ಟ್‌ ಮಾಡುತ್ತಿರಲಿ, ಎಲ್ಲ ಛಿದ್ರಛಿದ್ರವಾಗಿ ಹಂಚಿಹೋಗಿವೆ ಎಂಬುದು ನಿಜ. ಇಸ್ಲಾಮಾ ಫೋಬಿಯಾ ಸಹ ಕೆಟ್ಟ ರೀತಿಯಲ್ಲಿ ಎಲ್ಲೆಡೆ ಹರಡುತ್ತಿದೆ. ಸದಾ ಜೊತೆ ಜೊತೆಯಲ್ಲಿ ವಾಸಿಸುತ್ತಿದ್ದ ಮಂದಿ, ಈಗ ಪರಸ್ಪರ ಶತ್ರುಗಳಾಗಿದ್ದಾರೆ. ಕೆಲವು ಮುಸ್ಲಿಂ ಹೆಂಗಸರು ಈ ಕಂದಕ ಮುಚ್ಚಲು, ಅಮೆರಿಕಾದ ನಗರಗಳಲ್ಲಿ ಯೆಹೂದಿ ಮಂದಿ ಜೊತೆ ಸರಿಸಮನಾಗಿ ಕುಳಿತು, ಕಷ್ಟಸುಖ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ದೊಡ್ಡ ಪರಿವರ್ತನೆ ಆದೀತೇ ಎಂಬುದನ್ನು ಈಗಲೇ ಹೇಳಲಾಗದು, ಆದರೆ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?

scoop-masters-is-a-dog-waste-re

ಅಗ್ಗದ ಷೋಕಿ ಅಲ್ಲ : ಸಾಕುಪ್ರಾಣಿಗಳ ಸೇವಾರ್ಥ ಹಲವಾರು ಕಾರ್ಯಕ್ರಮ ಇದ್ದೇ ಇವೆ. ಅವುಗಳ ಕಕ್ಕಾ ತೆಗೆಯಲಿಕ್ಕೆಂದೇ ಮಂದಿ ಈಗ ಬಿಸ್‌ ನೆಸ್‌ ನಡೆಸುತ್ತಿದ್ದಾರೆ. ಅದರಲ್ಲೂ ಸ್ಕೂಪ್‌ ಮಾಸ್ಟರ್ಸ್‌ ಎಂಬ ಕಂಪನಿ ಇಡೀ ಅಮೆರಿಕಾದಲ್ಲಿ ಹರಡಿ ಹೋಗಿದೆ. ಊಬರ್‌ ಟ್ಯಾಕ್ಸಿ ಸಂಪರ್ಕಿಸುವಂತೆಯೇ, ನಿಮ್ಮ ಸಾಕುಪ್ರಾಣಿಗಳ ಈ ಗಲೀಜು ತೆಗೆಯಬೇಕೆಂದು ನೀವು ಫೋನಾಯಿಸಿದ ತಕ್ಷಣ, ನಾಯಿ ಜೊತೆ ನೀವು ಎಲ್ಲಿರುತ್ತೀರೋ ಅಲ್ಲಿಗೇ ಧಾವಿಸಿ ಬರುತ್ತಾರೆ. ಅವರು ಕೇಳಿದಷ್ಟು ಹಣ ತೆತ್ತು, ನಿಮ್ಮ ಕೆಲಸ ಹಗುರವಾಗಿಸಿಕೊಳ್ಳಿ. ಸಾಕುಪ್ರಾಣಿಗಳ ಸಹವಾಸ ಸುಮ್ಮನಲ್ಲ, ಬಲು ದುಬಾರಿ ಆಗುತ್ತಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ