ಸಾಮಾನ್ಯವಾಗಿ ಹುಡುಗಿಯರನ್ನು ಚುಡಾಯಿಸಿಕೊಂಡು ಓಡಾಡುವ ಹುಡುಗರನ್ನು

ಫ್ಲರ್ಟ್ ಎನ್ನುತ್ತಾರೆ. ಇದೀಗ ಇದೇ ಹೆಸರಿನಲ್ಲಿ ಚಲನಚಿತ್ರವೊಂದು ನಿರ್ಮಾಣವಾಗಿದೆ. ಕಿಚ್ಚ ಸುದೀಪ್ ಗರಡಿಯ ಹುಡುಗ, ಸಿಸಿಎಲ್ ಸಹಪಾಠಿಯೂ ಆದ  ಚಂದನ್ ಕುಮಾರ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ  ಹಾಡೊಂದಕ್ಕೆ ಸುದೀಪ್ ಅವರೇ ದನಿಯಾಗಿದ್ದಾರೆ. ಈ ಫ್ರೆಂಡ್ ಶಿಪ್ ಆಂಥೆಮ್ ನ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಜೆ ನೆರವೇರಿತು.

1000618319

ಫ್ಲರ್ಟ್ ಚಿತ್ರದಲ್ಲಿ ನಟಿಸುವ ಜತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಚಂದನ್ ಕುಮಾರ್ ಅವರೇ ಹೊತ್ತಿದ್ದಾರೆ. ಅಲ್ಲದೆ  ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿ ಚಂದನ್ ಅವರ ಪತ್ನಿ ಕವಿತಾಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ಇದಕ್ಕೆ ವಿವರಣೆಯನ್ನೂ ಚಂದನ್ ನೀಡಿದ್ದಾರೆ.

1000618325

ವಿಶೇಷವಾಗಿ  ಸುದೀಪ್ ಅವರ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಾಡಿನ ಬಿಡುಗಡೆ ಸಂದರ್ಭದಲ್ಲಿ‌ ‌ಸುದೀಪ್‌ ಅವರು ಚಂದನ್ ಗೆ ವಿಡಿಯೋ ಮೂಲಕ ಶುಭ ಹಾರೈಸಿದರು

1000618368

ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಚಂದನ್ ಮಾತನಾಡುತ್ತ ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಥರದ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಒಳಗೊಂಡಿದೆ.

ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ ಎಂದು ಮಾತು ಆರಂಭಿಸಿದ ಚಂದನ್, ಎಲ್ಲರ ಡವ್ ನಲ್ಲೂ ಒಂದೊಂದು ಲವ್ ಇದೆ ಎನ್ನುತ್ತಾರೆ. ಈ ಚಿತ್ರದಲ್ಲಿ  ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ಇಡೀ ಚಿತ್ರ ಎಲ್ಲೂ ಬೋರಾಗದಂತೆ ಫಾಸ್ಟ್ ಆಗಿ ಸಾಗುತ್ತದೆ.   ಈಗ ರಿಲಿಸಾಗಿರುವ ಫ್ರೆಂಡ್ ಶಿಪ್ ಆಂಥೆಮ್ ಸಾಂಗನ್ನು ಸುದೀಪ್ ಹಾಡಿದ್ದಾರೆ ಎಂದು ಹೇಳಿದರು.

ಹಿರಿಯ ನಟಿ ಶೃತಿ, ಸಾಧು ಕೋಕಿಲ ಅವರೂ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಿರಿ ನನ್ನ ಸ್ನೇಹಿತನಾಗಿ ನಟಿಸಿದ್ದಾರೆ. ಇಬ್ಬರು ನಾಯಕಿಯರಾಗಿ ಅಕ್ಷತಾ ಬೋಪಣ್ಣ  ಹಾಗೂ ನಿಮಿಕಾ ರತ್ನಾಕರ್ ನಟಿಸಿದ್ದಾರೆ ಎಂದು ವಿವರಿಸಿದರು.

ನಟ ಸಾಧು ಕೋಕಿಲ ಮಾತನಾಡುತ್ತ ನಾನು ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಕೈಕೊಡೋದೇ ಜಾಸ್ತಿ. ಆದರೆ ಈತ ಸಬ್ಜೆಕ್ಟ್ ಮಾಡಿಕೊಂಡಿರುವ ರೀತಿ ನನಗೆ ತುಂಬಾ ಇಷ್ಟವಾಯಿತು.

ನಿರ್ದೇಶಕನೇ ನಿರ್ಮಾಪಕನಾದಾಗ ಜವಾಬ್ದಾರಿ ಜಾಸ್ತಿ ಇರುತ್ತದೆ. ಒಂದೊಳ್ಳೇ ಥಾಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನದೂ ಸಹ ನಾನು ಈವರೆಗೆ ಮಾಡಿರದಂಥ ರೋಲ್,ಅವರ ನಿರ್ದೇಶನದ ಶೈಲಿ ಇಷ್ಟವಾಯಿತು. ನಾನಿಷ್ಟೊತ್ತು ಮಾತಾಡ್ತಿದ್ದೇನೆಂದರೆ ಅದಕ್ಕೆ ಕಾರಣ ಚಂದನ್ ಎಂದು ನಾಯಕ, ನಿರ್ದೇಶಕನನ್ನು  ಹಾಡಿ ಹೊಗಳಿದರು.

ನಾಯಕಿಯರಾದ ನಿಮಿಕಾ ರತ್ನಾಕರ್ ಅಕ್ಷತಾ ಬೋಪಣ್ಣ ಮಾತನಾಡುತ್ತ ಈ ಚಿತ್ರದ  ಕಥೆ, ನಿರೂಪಣೆಯೇ ವಿಭಿನ್ನವಾಗಿದೆ. ಇಂಥ ಒಂದು ಚಿತ್ರದ ಭಾಗವಾಗಿರುವುದಕ್ಕೆ ನಮಗೆ ತುಂಬಾ ಖುಷಿಯಾಯ್ತು  ಎಂದು ಹೇಳಿಕೊಂಡರು.

ನಂತರ ಸ್ನೇಹಿತನ‌ ಪಾತ್ರ ಮಾಡಿರೋ ಗಿರಿ, ಮೂಗು ಸುರೇಶ್, ತಂತಮ್ಮ ಕ್ಯಾರೆಕ್ಟರ್ ಬಗ್ಗೆ ಮಾತಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ