ಬಾಲಿವುಡ್‌ನ ಫುಟ್‌ಬಾಲ್‌ ಫೀವರ್‌

ಬ್ರೆಝಿಲ್‌ನಲ್ಲಿ ಫುಟ್‌ಬಾಲ್‌‌ನ ಮಹಾಕುಂಭ ಮೇಳ ಎಂದೋ ಮುಗಿಯಿತು. ಆದರೆ ಬಾಲಿವುಡ್‌ನಲ್ಲಿ ಮಾತ್ರ ಅದರ ದಟ್ಟ ಪ್ರಭಾವ ಇನ್ನೂ ಹಾಗೇ ಉಳಿದಿದೆ. ಇತ್ತೀಚೆಗೆ ಅಮೀರ್‌ ಖಾನ್‌ ಮಗಳು ಚ್ಯಾರಿಟಿ ಫುಟ್‌ ಬಾಲ್ ‌ಮ್ಯಾಚ್‌ ಆಯೋಜಿಸಿದ್ದಳು. ಆಗ ಎಲ್ಲಾ ಹಿಂದಿ ತಾರೆಯರೂ ಫುಟ್‌ಬಾಲ್ ಗ್ರೌಂಡ್‌ನಲ್ಲಿದ್ದರು. ಸ್ವೀಡಿಶ್‌ ನಟಿ ಆ್ಯಲಿ ಆ್ಯರಾಮ್ ಜೊತೆ ಅಮೀರ್‌ಖಾನ್‌ ತನ್ನ ಪತ್ನಿ ಕಿರಣ್ ರಾವ್‌, ಮಗ ಆಜಾದ್‌ ಜೊತೆ ಮೈದಾನದಲ್ಲಿ ಓಡಾಡುತ್ತಿದ್ದು ಮುಖ್ಯ ಆಕರ್ಷಣೆಯಾಗಿತ್ತು. ಅಷ್ಟು ಮಾತ್ರವಲ್ಲ ಅಭಿಷೇಕ್‌ ಬಚ್ಚನ್‌, ಹೃತಿಕ್‌ ರೋಷನ್‌, ಡೀನೋ ಮಾರಿಯೋ ಮುಂತಾದ ಭಾರೀ ಘಟಾನುಘಟಿ ತಾರೆಯರೆಲ್ಲ ಈ ಚ್ಯಾರಿಟಿ ಮ್ಯಾಚ್‌ಗಾಗಿ ಸೇರಿದ್ದರು.

ಹುಮಾಳ ಸ್ಲಿಂ ಟ್ರಿಂ ಸ್ಟೈಲ್

247170-01-02

`ಗ್ಯಾಂಗ್‌ ಆಫ್‌ ವಾಸೆಪುರ್‌' ಹುಡುಗಿ ಹುಮಾ ಕುರೇಶಿ ಈಗ ತನ್ನ ಡುಂಡುಂ ದೇಹವನ್ನು ಕರಗಿಸಿ ಬಳ್ಳಿಯಂತೆ ಬಳುಕುವ ಲತಾಂಗಿಯಾಗಿದ್ದಾಳೆ. ತನ್ನ ಈ ಹೊಸ ಗೆಟಪ್‌ನ ರಹಸ್ಯವೆಂದರೆ ಆಹಾರ ತೊರೆದು ಡಯೆಟ್‌ ಮಾಡಿದ್ದಲ್ಲ ಅಂತಾಳೆ. ಅವಳು ಹೇಳುವುದೆಂದರೆ, ಅವಳ ಟ್ರೇನರ್ಸ್ ಅವಳಿಗೆ 10 ದಿನಗಳಿಗೊಮ್ಮೆ ಏನು ಬೇಕಾದರೂ ತಿನ್ನಬಹುದೆಂದು ಅವಕಾಶ ಕೊಡತ್ತಾರಂತೆ, ಆಗ ಬೇಕಾದ್ದು ತಿನ್ನುತ್ತಾಳಂತೆ. ನನಗೆ ಹಸಿದುಕೊಂಡು ಉಪವಾಸ ಇರುವುದರಲ್ಲಿ ನಂಬಿಕೆ ಇಲ್ಲ, ಆದರೆ ಪೌಷ್ಟಿಕ ಆಹಾರವನ್ನು ಸಮಪ್ರಮಾಣದಲ್ಲಿ ಸೇವಿಸುತ್ತೇನೆ ಎನ್ನುತ್ತಾಳೆ. ನಾನು ಯಾವ ರೀತಿಯ ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕೆಂದು ನನ್ನ ಟ್ರೇನರ್ಸ್ ಮಾರ್ಗದರ್ಶನ ನೀಡುತ್ತಾರೆ. ಆಗಿನಿಂದ ನಾನು ಜಂಕ್‌ ಫುಡ್‌ ತಿನ್ನುವುದನ್ನೇ ಬಿಟ್ಟಿದ್ದೇನೆ ಎನ್ನುತ್ತಾಳೆ.

Raja-Natwarlal---Emraan-Hashmi,-Humaima-Malik-Wallpaper

ಹುಮಾ ಈಗ ಸಿನಿಮಾಗಳಿಗಿಂತ ಹೆಚ್ಚಾಗಿ ನಾಟಕಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾಳೆ. ಇತ್ತೀಚೆಗೆ ಆಕೆ ಮುಂಬೈನ ಪೃಥ್ವಿ ಥಿಯೇಟರ್‌ನಲ್ಲಿ ಆ್ಯನ್ಯುಯಲ್‌ ಯೂಥ್‌ ಥಿಯೇಟರ್‌ ಫೆಸ್ಟಿವ್‌ಗಾಗಿ `ಥೆಸ್ಪೋ ಓರಿಯೆಂಟೇಷನ್‌' ಫಿಲ್ಮಂಗಾಗಿ ಅಭಿನಯಿಸಿದ್ದಳು.

ಕಿಸ್‌ ಓ.ಕೆ....ಬಿಕಿನಿ ಯಾಕೆ....?

224735-01-02

`ರಾಜಾ ನಟವರ್‌ ಲಾಲ್‌' ಹಿಂದಿ ಚಿತ್ರದಿಂದ ಬಾಲಿವುಡ್‌ಗೆ ಡೆಬ್ಯು ಪಡೆದಿರುವ ಪಾಕಿಸ್ತಾನಿ ನಟಿ ಹುಮಾಯಿಮಾ ಖಾನ್‌ಳಿಗೆ ಕಿಸ್‌ಮಾಡುವುದೇನೂ ಪ್ರಾಬ್ಲಂ ಅಲ್ಲವಂತೆ. ಆದರೆ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬಿಕಿನಿ ಧರಿಸಬೇಕು ಎಂದೇನಾದರೂ ಹೇಳಿದ್ದರೆ ಖಂಡಿತಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾಳೆ. ಇತ್ತೀಚೆಗಷ್ಟೆ ಬಿಡುಗಡೆಯಾದ `ರಾಜಾ ನಟವರ್ ಲಾಲ್‌'ನಲ್ಲಿ ಈಕೆ ನಾಯಕನೊಂದಿಗೆ ಬೇಕಾದಷ್ಟು ಲಿಪ್‌ ಲಾಕ್‌ ಸೀನ್ಸ್ ನಲ್ಲಿದ್ದಾಳೆ. ನಾನೊಬ್ಬ ಉತ್ತಮ ನಟಿ, ಹಾಗಿರುವಾಗ ಬಿಕಿನಿ ಧರಿಸಿ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಕರ್ಮವೇನು? ನನ್ನ ಚಿತ್ರಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಖಂಡಿತಾ ನಾನು ಸಹಿಸುವುದಿಲ್ಲ. ಕಿಸ್ಸಿಂಗ್‌ ಕೇವಲ ರೊಮಾನ್ಸ್ ನ ರೋಮಾಂಚನಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಎಚ್ಚರಿಕೆಯಿಂದ ಉತ್ತರಿಸಲು ಮರೆಯುವುದಿಲ್ಲ.

ಟೈಗರ್‌ ಮರಿ ಹುಲಿಯ ಪೋಷಕನೀಗ!

247218-01-02

 

ಜಾಕಿಶ್ರಾಫ್‌ ಮಗ ಟೈಗರ್‌ ಶ್ರಾಫ್‌ ಇಂಟರ್‌ ನ್ಯಾಷನಲ್ ಟೈಗರ್‌ ಡೇನಂದು ನಾಗಪುರದ `ಮಹಾರಾಜ ಬಾಘ್‌ ಮೃಗಾಲಯ'ದ 4 ತಿಂಗಳ ಮರಿಹುಲಿಯ ಪಾಲನೆ ಪೋಷಣೆಗಾಗಿ ಕಾನೂನುಬದ್ಧವಾಗಿ ಅದನ್ನು ದತ್ತು ಪಡೆದಿದ್ದಾನೆ. ಟೈಗರ್‌ ಅದರ ಹೆಸರನ್ನು `ಲೀ' ಎಂದಿರಿಸಿದ್ದಾನೆ. ಜೊತೆಗೆ ಆಗಾಗ ತನ್ನ ಶೂಟಿಂಗ್‌ ಮಧ್ಯೆ ಬಿಡುವು ಮಾಡಿಕೊಂಡು ಲೀ ಯೋಗಕ್ಷೇಮದ ಕುರಿತು ವಿಚಾರಿಸಲು ಬರುತ್ತಿರುತ್ತಾನೆ. ಟೈಗರ್‌ಗೆ ಮೊದಲಿನಿಂದಲೂ ಇಂಥ ಒಂದು ಕಾಡುಮೃಗದ ಹೊಣೆ ಹೊರಬೇಕೆಂದು ಅವುಗಳ ಬಗ್ಗೆ ಹುಚ್ಚು ಹಿಡಿಸಿಕೊಂಡಿದ್ದ. ಇಂಥ ಪ್ರಾಣಿ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಲಿ ಎಂದು ಹಾರೈಸುತ್ತಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ