ಎನ್ ಎಂ ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ಅವರು ನಿರ್ಮಿಸಿರುವ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಹಾಗೂ ಅರ್ಚನ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಈ ವಾರ (24-01-2025) ತೆರೆಕಂಡಿದೆ. ಡಬಲ್ ಇಂಜಿನ್ ಮತ್ತು ಬ್ರಹ್ಮಚಾರಿ, ಎರಡು ಕನ್ನಡ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ, ಚಂದ್ರ ಮೋಹನ್ “ಫಾರೆಸ್ಟ್” ಎನ್ನುವ ಮತ್ತೊಂದು ಕಾಮಿಡಿ ಚಿತ್ರದ ಜೊತೆಗೆ ಬಂದಿದ್ದಾರೆ. ಈ ಬಾರಿ ತೆರೆದ ಕಾಡಿನಲ್ಲಿ ಸೆಟ್ ಹಾಕಲಾಗಿದೆ. ವಿಪರೀತ -ಭಯ ಬೀಳಿಸುವ ಅಂಶಗಳು, ಲೈಂಗಿಕ ಭಾಷೆ, ಡಬಲ್ ಮೀನಿಂಗ್‌ಗಳು ಅಥವಾ ಅಸಭ್ಯ ಸಂಭಾಷಣೆ ಬದಲಾಗಿ, ಹಾಸ್ಯವು ರಿಫ್ರೆಶ್ ಮತ್ತು ಕ್ಲೀನ್ ಎನ್ನುವಂತೆ ಮೂಡಿ ಬಂದಿದೆ.
ಒಂದೆರಡು ದೃಶ್ಯಗಳು ಭಯಂಕರ ಎನಿಸಿದರೂ, ಹಾಸ್ಯವು ಪಾತ್ರಗಳ ಮೂಲಕ ನಿರ್ದೇಶಿಸಲ್ಪಟ್ಟಿರುವುದರಿಂದ ಅದು ಗಮನಕ್ಕೆ ಬರುವುದಿಲ್ಲ.
ಈ ಶುದ್ಧ ಹಾಸ್ಯದ ಆಳದಲ್ಲಿ ಮನುಷ್ಯನ ದುರಾಶೆಯ ಕುರಿತು ಸೂಕ್ಷ್ಮವಾದ ವ್ಯಾಖ್ಯಾನವಿದೆ, ಅದು ಮರಣಾನಂತರದ ಜೀವನಕ್ಕೂ ಸಾಗುತ್ತದೆ. ಆದಾಗ್ಯೂ, ಚಲನಚಿತ್ರವು ಬೋಧನೆ ಅಥವಾ ಅತಿಯಾದ ಗಂಭೀರ ಅಂಶಗಳನ್ನು ಹೇಳುವುದಿಲ್ಲ, ಇದರ ಹೊರತಾಗಿ ಸಿನಿಮಾ ತಡೆರಹಿತ ಮನರಂಜನೆ ಮತ್ತು ನಗುವನ್ನು ತರಿಸುತ್ತದೆ.
ಇದು ಸ್ನೇಹಿತರು ಕುಟುಂಬ ಜೊತೆಗೆ ಕುಳಿತು ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡಬ‌ಹುದಾದ ಚಿತ್ರ.
ಜೀವನದಲ್ಲಿ ತಮ್ಮದೇ ಆದ ಸವಾಲುಗಳೊಂದಿಗೆ ಸೆಣೆಸುತ್ತಿರುವ ಐವರ ಗ್ಯಾಂಗ್ ದಟ್ಟವಾದ ಕಾಡಿನೊಳಗೆ ನಿಧಿ ಶೋಧಕ್ಕೆ ತೊಡಗುತ್ತದೆ. ಅವರಲ್ಲಿ ಒಬ್ಬನಿಗೆ ಶ್ರವಣ ದೋಷವಿರುತ್ತದೆ. ಅವನಿಗೆ ತಾನು ಏಕಾಗಿ ಕಾಡಿಗೆ ಬಂದಿದ್ದೇನೆ ಎನ್ನುವುದೇ ಗೊತ್ತಿರುವುದಿಲ್ಲ. ಆದಾಗ್ಯೂ, ಕನಿಷ್ಠ 300 ಕಿಲೋಗ್ರಾಂಗಳಷ್ಟು ತೂಕದ ಚಿನ್ನದ ನಿಕ್ಷೇಪವನ್ನು ಕುಖ್ಯಾತ ಕಾಡುಗಳ್ಳ ಬೀರನ ಆತ್ಮ(ಅವನನ್ನು ಅದಾಗಲೇ ಪೋಲೀಸರು ಕೊಂದು ಬಿಟ್ಟಿದ್ದಾರೆ) ರಕ್ಷಿಸುತ್ತಿರುತ್ತದೆ. ಆ ಆತ್ಮವನ್ನು ಎದುರಿಸಿ ನಿಧಿ ಪಡೆಯುತ್ತಾರೆಯೆ? ಇದನ್ನು ತಿಳಿಯಲು ನೀವು ಸಿನಿಮಾ ಮಂದಿರದಲ್ಲಿ “ಪಾರೆಸ್ಟ್” ಸಿನಿಮಾ ನೋಡಬೇಕಿದೆ.
ಸಿನಿಮಾದಲ್ಲಿ ರಂಗಾಯಣ ರಘು ಅವರಿಂದ ಹಿಡಿದು ಚಿಕ್ಕಣ್ಣನವರೆಗೆ ವಿವಿಧ ರೀತಿಯ ಶೈಲಿಯ ನಟ ನಟಿಯರನ್ನು ಅಭಿನಯಕ್ಕೆ ಇಳಿಸುವ ಮೂಲಕ ನಿರ್ದೇಶಕರು ಉತ್ತಮ ಕ್ಷಮತೆ ತೋರಿಸಿದ್ದಾರೆ. ಅನಿಶ್ ಮತ್ತು ಗುರುನಂದನ್ ಅವರಿಂದ ಅಚ್ಚರಿಯ ಅಭಿನಯವನ್ನು ಕಾಣಬಹುದು. ಅದರಲ್ಲಿಯೂ ಅವರ ಇಮೇಜ್ ಗೆ ಹೊರತಾಗಿರುವ ನಟನೆಯನ್ನು ಕಚ್ಚಾ ಶೈಲಿಯ ಪಾತ್ರವನ್ನು ನಾವು ನೋಡುತ್ತೇವೆ. ಇನ್ನು ಅರ್ಚನಾ ಕೊಟ್ಟಿಗೆ ಉಳಿದೆಲ್ಲಾ ಪುರುಷ ಪಾತ್ರದವರ ಮದ್ಯೆ ಮಿಂಚಿದ್ದಾರೆ. ಈಗಾಗಲೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಹೊಂದಿಸಿ ಬರೆಯಿರಿ ಚಿತ್ರಗಳಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಈ ಸಿನಿಮಾದಲ್ಲಿ ಪರಿಣಾಮಕಾರಿ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಹಾಸ್ಯದ ಜೊತೆ ರೋಮಾಂಚಕ ಕ್ಷಣಗಳನ್ನು ತರುವ ಸೂರಜ್ ಪಾಪ್ಸ್ ಪಾತ್ರ ಚಿತ್ರಕ್ಕೆ ಮತ್ತಷ್ಟು ಬಲ ತುಂಬುತ್ತದೆ. ಚಿತ್ರದಲ್ಲಿರುವ ಎರಡು ಹಾಡುಗಳು ಸಹ ಕಥೆಗೆ ಪೂರಕವಾಗಿದೆ.
ನಿರೂಪಣೆ, ಕಥೆ, ಎಡಿಟಿಂಗ್ ಸೇರಿ ಎಲ್ಲಾ ವಿಷಯದಲ್ಲಿಯೂ ಫಾರೆಸ್ಟ್ ಉತ್ತಮವಾಗಿದೆ. ಪ್ರೇಕ್ಷಕರನ್ನು ನಗಿಸುವುದು ಮಾತ್ರವೇ ಸಿನಿಮಾದ ಮೂಲ ಗುರಿ. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಹಾಸ್ಯದ ಹೊದಿಕೆ ಸರಿದು ಕಥೆಗೆ ಬೇರೆಯದೇ ತಿರುವು ಸಿಕ್ಕುತ್ತದೆ. ಅದಕ್ಕೆ ನಿರ್ದೇಶಕರು ತಮ್ಮದೇ ಕಾರಣವನ್ನೂ ನೀಡುತ್ತಾರೆ.
ಒಟ್ಟಾರೆ ಸಿನಿಮಾ ತಡೆರಹಿತ ವಿನೋದ, ನಗು, ಕ್ಲೀನ್ ಕಾಮಿಡಿ ಮತ್ತು ಉತ್ತಮ ಪ್ರಮಾಣದ ರೋಮಾಂಚಕ ಸನ್ನಿವೇಶದೊಂದಿಗೆ ಖಚಿತವಾಗಿ ನೋಡಿ ಖುಷಿಪಡಬಹುದಾದ ಚಿತ್ರವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ