- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನ ಕಥೆಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿ ‘ಗೌರಿಪುತ್ರ’ವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ  7 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ  ತನ್ನ ತಾಯಿಗೆ ತಪ್ಪಿ ಹೋದ ತವರನ್ನು ಕೊಡಿಸುವುದಕ್ಕೆ ಹೋರಾಡುವ ಮಗನ ಕಥೆಯನ್ನು ಹೇಳುತ್ತದೆ. ಕುಟುಂಬದ ಸಂಬಂಧಗಳು, ಪ್ರೀತಿ, ಭಾವನೆಗಳು ಮತ್ತು ಅನಿರೀಕ್ಷಿತ ತಿರುವುಗಳೊಂದಿಗೆ ಸಾಗುವ ಈ ಕಥೆ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ.

1001991805

ಅಮ್ಮನನ್ನು ಅತಿಯಾಗಿ ಪ್ರೀತಿಸೋ ಕಾರ್ತಿಕ್ ಗೆ (ರಿತ್ವಿಕ್) ತನ್ನ ತಾಯಿ ಗೌರಿ (ಅನು ಪ್ರಭಾಕರ್) ಅಂದರೆ ಬಲು ಇಷ್ಟ. ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ತುಂಬು ಕುಟುಂಬದಲ್ಲಿ ಬೆಳೆದಿರುವ ಕಾರ್ತಿಕ್‌ಗೆ ತನ್ನ ತಾಯಿಯೇ ಪ್ರಪಂಚ. ಎಲ್ಲಾ ಐಶ್ವರ್ಯ, ಆಸ್ತಿ, ಅಂತಸ್ತು, ದೊಡ್ಡ ಕುಟುಂಬ ಹಾಗೂ ಹಲವು ಕಂಪನಿಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಗೌರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆದರೆ, ಇಷ್ಟೆಲ್ಲಾ ಇದ್ದರೂ ಆಕೆಯ ಮನಸ್ಸಿನಲ್ಲಿ ಸದಾ ಕಾಡುವ ಕೊರತೆಯೊಂದಿದೆ. ಅದುವೇ ತನ್ನ ತವರು ಮನೆ, ಅಣ್ಣನ ಪ್ರೀತಿ ಮತ್ತು ಒಡನಾಟ. ಮದುವೆಯಾಗಿ ವರ್ಷಗಳೇ ಕಳೆದರೂ ತವರಿನಿಂದ ದೂರವಾದ ನೋವು ಆಕೆಯ ಮನಸ್ಸಿನಲ್ಲಿದೆ. ಹೆಣ್ಣೊಬ್ಬಳಿಗೆ ಜೀವನದಲ್ಲಿ ಎಲ್ಲವೂ ಇದ್ದರೂ, ತನ್ನ ತವರು ಮನೆ ಮತ್ತು ಅಲ್ಲಿನ ಸಂಬಂಧಗಳ ಪ್ರೀತಿ ಇಲ್ಲದಿದ್ದಾಗ ಆಗುವ ಭಾವನಾತ್ಮಕ ತೊಳಲಾಟವನ್ನು ಈ ಕಥೆ ತೆರೆದಿಡುತ್ತದೆ.

1001991795

ತಾಯಿಯ ಈ ಅಂತರಾಳದ ನೋವನ್ನು ಅರಿತು, ಆಕೆಗೆ ಮತ್ತೆ ತವರಿನ ಪ್ರೀತಿ ಮತ್ತು ಸಂಬಂಧಗಳನ್ನು ಮರಳಿ ಕೊಡಿಸಬೇಕೆಂಬ ಹಂಬಲದಿಂದ ಮಗ ಕಾರ್ತಿಕ್ ಹೊರಡುತ್ತಾನೆ. ಆದರೆ, ಅಮ್ಮನಿಗೆ ತವರನ್ನು ಕೊಡಿಸುವ ಈ ಪ್ರಯಾಣದಲ್ಲಿ 'ಮದುವೆ' ಎಂಬ ಅನಿರೀಕ್ಷಿತ ಕವಲುದಾರಿ ಕಾರ್ತಿಕ್‌ನ ಬದುಕಿಗೆ ಅಡ್ಡಿಯಾಗುತ್ತದೆ. ಈ ಅಡ್ಡಿಗಳನ್ನು ಆತ ಹೇಗೆ ಎದುರಿಸುತ್ತಾನೆ? ತನ್ನ ತಾಯಿಯ ಬಹುದಿನಗಳ ಆಸೆಯನ್ನು ಈಡೇರಿಸಿ ಆಕೆಗೆ ತವರಿನ ಪ್ರೀತಿಯನ್ನು ಮರಳಿ ಕೊಡಿಸಲು ಸಾಧ್ಯವಾಗುತ್ತದೆಯೇ? ಎಂಬುದೇ 'ಗೌರಿಪುತ್ರ' ಧಾರಾವಾಹಿಯ ಕಥಾಸಾರ.

1001991798

ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ಕಲಾವಿದರ ದೊಡ್ಡ ತಾರಾಗಣವೇ ಒಂದಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನು ಪ್ರಭಾಕರ್, ರಿತ್ವಿಕ್ ಮತ್ತು ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ಕಿರುತೆರೆಯ ಹಲವು ಖ್ಯಾತ ಮುಖಗಳು, ರಂಗಭೂಮಿ ಕಲಾವಿದರು ಹಾಗೂ ಚಿತ್ರರಂಗದ ಪ್ರತಿಭಾವಂತ ನಟರು ಒಟ್ಟಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆಯಲ್ಲಿ ಹಲವು ಸೂಪರ್‌ಹಿಟ್ ಹಾಗೂ ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ನೀಡಿರುವ ರಾಮ್‌ಜಿ ಅವರು ಈ ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅನುಭವಿ ಕಲಾವಿದರ ಸಮಾಗಮ ಮತ್ತು ವಿಭಿನ್ನ ಕಥಾಹಂದರದೊಂದಿಗೆ ‘ಗೌರಿಪುತ್ರ’ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ