- ರಾಘವೇಂದ್ರ ಅಡಿಗ ಎಚ್ಚೆನ್.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 24ರಂದು ಶಿವಣ್ಣ ಸರ್ಜರಿ ಮಾಡಿಸಿಕೊಂಡಿದ್ದು, ಸರ್ಜರಿ ಆದ್ಮೇಲೆ ಹೊಸ ವರ್ಷಕ್ಕೆ ಎಲ್ಲರಿಗೂ ವಿಶ್ ಮಾಡಿದ್ದರು. ಇದೀಗ ಇನ್ನಷ್ಟು ಆ್ಯಕ್ಟೀವ್ ಆಗಿರುವ ಶಿವಣ್ಣ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ ಡಿ.22 ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ಗೆ ಆಡ್ಮಿಟ್ ಆಗಿದ್ದ ಶಿವಣ್ಣ, 14 ದಿನಗಳ ನಂತ್ರ ಸರ್ಜರಿ ಮುಗಿಸಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ಬಳಿ ಇರುವ ಖಾಸಗಿ ಹೋಟೆಲ್ನಲ್ಲಿ ಶಿವಣ್ಣ, ಫ್ಯಾಮಿಲಿ ಜೊತೆ ಉಳಿದುಕೊಂಡಿದ್ದಾರೆ. ಇನ್ನು ಎರಡು ಚೆಕಪ್ ಬಾಕಿಯಿದ್ದು, ಎರಡು ಚೆಕಪ್ ಮುಗಿಸಿಕೊಂಡು ಜ. 24 ರಾತ್ರಿ ಶಿವಣ್ಣ ಇಂಡಿಯಾಗೆ ಬರಲಿದ್ದಾರೆ. ಜ.26 ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಸದ್ಯ ಆಸ್ಪತ್ರೆಯ ಆವರಣದಲ್ಲಿ ಶಿವಣ್ಣ ಓಡಾಡುತ್ತಿದ್ದಾರೆ. ಆ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಮಗಳು ನಿವೇದಿತಾ ಸೇರಿದಂತೆ ಎಲ್ಲರೂ ಒಂದು ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಈ ಸೆಲ್ಫಿ ಫೋಟೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಶಿವಣ್ಣನ ಸೆಲ್ಫಿ ಫೋಟೋ ವೈರಲ್ ಆಗಿದದ್ದು, ಸೋಷಿಯಲ್ ಮೀಡಿಯಾದಲ್ಲಿ ಶಿವರಾಜ್ ಕುಮಾರ್ ಫ್ಯಾನ್ಸ್ ತಮ್ಮ ತಮ್ಮ ಪೇಜ್‌ಗಳಲ್ಲಿ ಈ ಫೋಟೋ ಹಂಚಿಕೊಳ್ಳುತ್ತಿದ್ದಾರೆ.