ಕನ್ನಡ ಚಿತ್ರರಂಗದಿಂದ ತೆಲುಗು, ತಮಿಳು ಚಿತ್ರರಂಗಕ್ಕೆ ಹೋಗುವ ನಾಯಕಿಯರಿಗೇನು ಕಮ್ಮಿ ಇಲ್ಲ. ಸ್ಯಾಂಡಲ್ವುಡ್ನಲ್ಲಿ ಚಾನ್ಸ್ ಸಿಗದೇ ಇದ್ದಾಗ ಬೇರೆ ಭಾಷೆಯಲ್ಲಿ ಒಳ್ಳೆ ಚಾನ್ಸ್ ಸಿಕ್ರೆ ಯಾರು ತಾನೆ ಬೇಡ ಅಂತಾರೆ ಹೇಳಿ. ಟಾಲಿವುಡ್ನಲ್ಲಿ ಈಗಾಗಲೇ ನೆಲೆ ಕಂಡುಕೊಂಡಿರುವ ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸಿಕ್ಕಾಪಟ್ಟೆ ಪೀಕ್ನಲ್ಲಿದ್ದಾರೆ. ಅದೇ ರೀತಿ ನಟಿಯರಾದ ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್ ಕೂಡ ತೆಲುಗು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಕನ್ನಡದ ಮತ್ತೊಬ್ಬ ನಟಿ ಟಾಲಿವುಡ್ಗೆ ಹಾರೋಕೆ ರೆಡಿಯಾಗಿದ್ದಾರೆ. ಆ ನಟಿಯೇ ಶರಣ್ಯ ಶೆಟ್ಟಿ
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಖ್ಯಾತಿಯ ನಟಿ ಶರಣ್ಯ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿದೆ. 2025 ಹೊಸ ವರ್ಷ ಹೊಸ ಲಕ್ ತಿರುಗಿಸುತ್ತಿದೆ. ಯಾಕಂದ್ರೆ, ಸ್ಟಾರ್ ನಟರೊಬ್ಬರಿಗೆ ನಾಯಕಿಯಾಗಲು ಟಾಲಿವುಡ್‌ನತ್ತ ಶರಣ್ಯ ಮುಖ ಮಾಡಿದ್ದಾರೆ.
ಶರಣ್ಯ ಶೆಟ್ಟಿ ಈ ಚೊಚ್ಚಲ ತೆಲುಗು ಸಿನಿಮಾಗೆ ಅಲ್ಲಿನ ಸ್ಟಾರ್ ನಟರೊಬ್ಬರು ಹೀರೋ ಆಗಿ ಬಣ್ಣ ಹಚ್ಚಲಿದ್ದಾರೆ. ಅದು ಯಾರು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯ ನಟಿಯ ಬಗೆಗಿನ ಸಿನಿಮಾ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಕಿರುತೆರೆಯ ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮೂಲಕ ವಿಲನ್ ಆಗಿ ಶರಣ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕಳೆದ ವರ್ಷ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಶರಣ್ಯ ಸಕ್ಸಸ್ ಸಿಕ್ಕಿತ್ತು. ಜೊತೆಗೆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇದೀಗ ತೆಲುಗು ಚಿತ್ರರಂಗಕ್ಕೆ ಶರಣ್ಯ ಶೆಟ್ಟಿ ಎಂಟ್ರಿ ಕೊಡ್ತಿರೋದ್ರಿಂದ ಕನ್ನಡ ಸಿನಿರಸಿಕರಿಗೆ ಒಂಥರಾ ಸಂಕಟ ಶುರುವಾದಂತಾಗಿದೆ. ಕನ್ನಡದ ಸುಂದರ ನಟಿಯರೆಲ್ಲಾ ತೆಲುಗಿಗೆ ಹೋದ್ರೆ, ಕನ್ನಡಿಗರ ಗತಿ ಏನು ಅಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ತಿದ್ದಾರೆ.
ಇನ್ನು ಕೆಲವರು, ಒಳ್ಳೊಳ್ಳೆ ಗಿಳಿಮರಿಗಳನ್ನ ಬೇರೆ ರಾಜ್ಯಗಳಿಗೆ ಕಳಿಸಬೇಡಿ.. ಇಲ್ಲೇ ಒಂದೊಳ್ಳೆ ಸಿನಿಮಾ ಕೊಟ್ಟು ಇಲ್ಲೇ ಇಟ್ಕೊಳಿ ನಿರ್ದೇಶಕರೇ, ನಿರ್ಮಾಪಕರೇ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಆದ್ರೆ, ಏನೇ ಆಗ್ಲಿ ಕನ್ನಡದ ನಟಿಯರಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಇದೆ ಅನ್ನೋದು ಪದೇ ಪದೆ ಸಾಬೀತಾಗುತ್ತಿದೆ. ಹೀಗೆ ಕನ್ನಡದ ನಟಿಯರು ಬೇರೊಂದು ಭಾಷೆಯಲ್ಲಿ ಸಿನಿಮಾ ಮಾಡಿ ದೊಡ್ಡ ಸ್ಟಾರ್ ಆದಲ್ಲಿ ಅದು ಕರುನಾಡಿಗೆ ಕೀರ್ತಿ ತಂದಂತೆ.