• ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ‘ಜಂಬೂ ಸರ್ಕಸ್’
ನಿರ್ಮಾಣ: ‘ಮಹತಿ ಕಂಬೈನ್ಸ್’ ಹೆಚ್.ಸಿ. ಸುರೇಶ್
ನಿರ್ದೇಶನ: ಎಂ.ಡಿ. ಶ್ರೀಧರ್
ತಾರಾಂಗಣ: ಪ್ರವೀಣ್ ತೇಜ್, ಅಂಜಲಿ ಎಸ್. ಅನೀಶ್, ಅಚ್ಚುತ್ ಕುಮಾರ್, ಲಕ್ಷ್ಮೀ ಸಿದ್ದಯ್ಯ, ಸ್ವಾತಿ, ಅವಿನಾಶ್, ರವಿಶಂಕರ್ ಗೌಡ ಮೊದಲಾದವರು
ರೇಟಿಂಗ್:

ಹಿಟ್ ಸಿನಿಮಾಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈಗ್ ‘ಜಂಬೂ ಸರ್ಕಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕಥೆ ಮತ್ತು ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಮತ್ತು ಅಂಜಲಿ ಎಸ್. ಅನೀಶ್ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಕಳೆದ 3 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹೆಚ್.ಸಿ. ಸುರೇಶ್ ಅವರು ‘ಮಹತಿ ಕಂಬೈನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಕೂಡ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಈಗ ಈ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ.
ಚಿತ್ರದ ಕಥೆ ಸ್ನೇಹ ಹಾಗೂ ಪ್ರೀತಿಯ ನಡುವೆ ಸುತ್ತುತ್ತದೆ. ಆತ್ಮೀಯ ಗೆಳೆಯರಿಬ್ಬರು ತುಂಬಾ ಚೆನ್ನಾಗಿ ಬದುಕುತ್ತಾರೆ. ಆದರೆ ಅವರ ಹೆಂಡತಿಯರು ಜಡೆ ಜಗಳು ಶುರು ಮಾಡುತ್ತಾರೆ. ಹಾಗಾದರೆ ಅವರ ಮಕ್ಕಳ ಭವಿಷ್ಯ ಏನಾಗಲಿದೆ? ಅವರು ಕೂಡ ಜಗಳದಲ್ಲೇ ದಿನ ಕಳೆಯುತ್ತಾರೆ. ಆಮೇಲೆ ಅವರಿಬ್ಬರ ನಡುವೆ ಪ್ರೀತಿ ಸಿಗುರುತ್ತದೆ. ಈ ಜರ್ನಿಯಲ್ಲಿ ಆಗುವ ಫನ್ನಿ ಸಂಗತಿಗಳೇ ಚಿತ್ರದ ಪ್ರಮುಖ ಹೈಲೈಟ್ಸ್.. ಈ ನವ ಜೋಡಿಗಳು ಕಡೆಗೂ ಒಂದಾಗುತ್ತಾರಾ? ಜಡೆ ಜಗಳ ಎಲ್ಲಿಗೆ ಕೊನೆಗಾಣುತ್ತದೆ ತಿಳಿಯಲು ನೀವೊಮ್ಮೆ ಚಿತ್ರಮಂದಿರದಲ್ಲಿ  ‘ಜಂಬೂ ಸರ್ಕಸ್’ ನೋಡಿ ಬನ್ನಿ..
ಚಿತ್ರಕಥೆ ಹಾಸ್ಯ ಜೊತೆಗೆ ಕೆಲವೊಂದೆಡೆ ಕೌಟುಂಬಿಕ ಅಂಶಗಳನ್ನು ಹೊಂದಿದ್ದರೂ ಸಹ ನಿರ್ದೇಶಕರು ಈ ದಿನಗಳಿಗೆ ತಕ್ಕಂತೆ ಅಪ್ಡೇಟ್ ಆಗುವ ಅಗತ್ಯವಿತ್ತು ಎನಿಸುತ್ತದೆ.  ರಘು ನಿಡುವಳ್ಳಿ ಸಂಭಾಷಣೆ  ಚಿತ್ರದ ಹೈಲೈಟ್ ಆಗಿದ್ದರೂ ಹಾಸ್ಯ ಎಲ್ಲಾ ಕಡೆಗಳಲ್ಲಿ ಪ್ರೇಕ್ಷಕರನ್ನು ನಗಿಸುವುದಿಲ್ಲ. ಚಿತ್ರಕಥೆ ಕಡೆಗೆ ನಿರ್ದೇಶಕರು ಮತ್ತಷ್ಟು ಗಮನ ಹರಿಸಬೇಕಿತ್ತು.
ಈ ಸಿನಿಮಾದಲ್ಲಿ ಅಂಜಲಿ ಅನೀಶ್ ಅವರು ಬಜಾರಿ ಹುಡುಗಿಯ ಪಾತ್ರ ಮಾಡಿದ್ದಾರೆ.  ಪ್ರವೀಣ್ ತೇಜ್ ನಾಯಕನಾಗಿ ಭರವಸೆ ಹುಟ್ಟಿಸುತ್ತಾರೆ.  ಉಳಿದಂತೆ ಅಚ್ಚುತ್ ಕುಮಾರ್, ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅವಿನಾಶ್, ರವಿಶಂಕರ್ ಗೌಡ ಅವರುಗಳು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಾಸುಕಿ ವೈಭವ್ ಹಿನ್ನೆಲೆ ಸಂಗೀತ ಸೊಗಸಾಗಿದೆ ಆದರೆ ಹಾಡುಗಳು ಅದೇನೂ ಗಮನ ಸೆಳೆಯುವುದಿಲ್ಲ. ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ ಮೆಚ್ಚುವಂತಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ