- ರಾಘವೇಂದ್ರ ಅಡಿಗ ಎಚ್ಚೆನ್.
ಇರೋದೊಂದು ಜೀವನ.. ದೊಡ್ಮನೆ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹೇಳಿದ್ದ ಡೈಲಾಗ್ ನ್ನೇ ಟೈಟಲ್ ಆಗಿ ಇಟ್ಟೊಂಡು, ವಿನೂತನ ಪ್ರೇಮಕಥಾಹಂದರದ ಆ್ಯಕ್ಷನ್ ಡ್ರಾಮಾವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ.
ಸಲಗ ಚಿತ್ರದಿಂದ ಕೆಂಡನಾಗಿ ಖ್ಯಾತಿನಪಡೆದು,ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಮೂಲಕ ನಾಯಕನಟನಾಗಿ ಬಡ್ತಿ ಪಡೆದ ಶ್ರೇಷ್ಠ, ಇರೋದೊಂದು ಜೀವನ ಚಿತ್ರಕ್ಕೆ ನಾಯಕ. ಶ್ರೇಷ್ಠನಿಗೆ ನಾಯಕಿಯಾಗಿ ನಂದು ರಾಜ್ ಅಭಿನಯಿಸುತ್ತಿದ್ದಾರೆ. ಉದಯ್ ಜಾಗ್ವಾರ್ ಅನ್ನೋ ಉತ್ತರ ಕರ್ನಾಟಕ ಪ್ರತಿಭೆ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ.
ಇರೋದೊಂದು ಜೀವನಕ್ಕೆ ನವೀನ್ ಶಂಕರ್ ಕ್ಲ್ಯಾಪ್
ಉತ್ತರ ಕರ್ನಾಟಕ ಭಾಗದ ಹೀರೋ ಅಂತ್ಲೇ ಗುರುತಿಸಿಕೊಂಡಿರೋ ನವೀನ್ ಶಂಕರ್ ಅದೇ ಉತ್ತರ ಭಾಗದ ಗೆಳೆಯ ಶ್ರೇಷ್ಠನ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
ಇರೋದೊಂದು ಜೀವನ ಚಿತ್ರದ ಮುಹೂರ್ತ ಬಂಡೇ ಮಾರಮ್ಮ ದೇವಸ್ಥಾನದಲ್ಲಿ ನೇರವೇರ್ತು.
ಇರೋದೊಂದು ಜೀವನ ಚಿತ್ರವನ್ನ ಎಸ್ ಕುಮಾರ್ ನಿರ್ದೇಶಿಸುತ್ತಿದ್ದು, ಅಜನೀಶ್ ಲೋಕನಾಥ್ ಶಿಷ್ಯ ನವೀನ್ ವಾಸುದೇವ್ ಸಂಗೀತ ಸಂಯೋಜಿಸ್ತಿದ್ದಾರೆ.ಧನು ಛಾಯಾಗ್ರಣಹ ಮಾಡುತ್ತಿದ್ಧಾರೆ. ಎಲ್ ನಾಗಭೂಷಣ್ ಈ ಚಿತ್ರವನ್ನ ನಿರ್ಮಿಸ್ತಿದ್ದಾರೆ.
ಮುಹೂರ್ತದೊಂದಿಗೆ ಚಿತ್ರೀಕರಣ ಆರಂಭಿಸಿರೋ ಚಿತ್ರತಂಡ ಎರಡೇ ಹಂತದಲ್ಲಿ ಚಿತ್ರೀಕರಣ ಮುಗಿಸಿ ಹೊಸವರ್ಷದ ಹೊತ್ತಿಗೆ ತೆರೆಗೆ ಬರೋ ಸನ್ನಾಹದಲ್ಲಿದೆ.