- ರಾಘವೇಂದ್ರ ಅಡಿಗ ಎಚ್ಚೆನ್.

ಶ್ರೀ ರೇಣುಕಾ ಎಲ್ಲಮ್ಮದೇವಿ ಕಂಬೈನ್ಸ್ ಅಡಿಯಲ್ಲಿ ಮಿಸ್ಟರ್.ಕಲ್ಯಾಣ್ ಕುಮಾರ್ ಎಂಬ ಶೀರ್ಷಿಕೆ ಯನ್ನು ಇಟ್ಟುಕೊಂಡು ಹೊಸ ಸಿನಿಮಾ ವೊಂದು ಮೂಡಿಬರುತ್ತಿದ್ದು, ಈ ಚಿತ್ರದ ಶೀರ್ಷಿಕೆ ಅನಾವರಣವನ್ನು ಕನ್ನಡದ ಖ್ಯಾತ ಐದು ಸಂಗೀತ ನಿರ್ದೇಶಕರು ಮಾಡಿದ್ದಾರೆ... ಚಿತ್ರಕ್ಕೆ ಎಂ. ನರಸಿಂಹ ಬಾಬು ಮತ್ತು ಜಗದೀಶ್ ಎಂ ರವರು ಬಂಡವಾಳ ಹೂಡಲಿದ್ದಾರೆ.

1001723370

ಹಾಗೂ 12-13 ವರ್ಷಗಳ ಕಾಲ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ , ಕೋ ಡೈರೆಕ್ಟರ್, ಕಂಠದಾನ ಕಲಾವಿದ ಮತ್ತು ಬರಹಾಗರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ವೈ ಎನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ...  ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದ ಹರಿ ಪ್ರಸಾದ್ ಈ ಸಿನಿಮಾದ ನಾಯಕ ಅಂದರೇ ಮಿಸ್ಟರ್. ಕಲ್ಯಾಣ್ ಕುಮಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ... ಚಿತ್ರಕ್ಕೆ ಅಭಿನಂದನ್ ದೇಶ್‌ಪ್ರಿಯ ಸಂಭಾಷಣೆ ಮತ್ತು ಉಜ್ವಲ್ ಚಂದ್ರ ರವರ ಸಂಕಲನವಿರಲಿದೆ...

1001723368

ಚಿತ್ರತಂಡ ಸಂಗೀತ ನಿರ್ದೇಶಕರಾದ, ಅರ್ಜುನ್ ಜನ್ಯ, ಶ್ರೀಧರ್ ವಿ ಸಂಭ್ರಮ್, ವಿ ಮನೋಹರ್, ಅನೂಪ್ ಸೀಳಿನ್ ಮತ್ತು ವಿ ನಾಗೇಂದ್ರ ಪ್ರಸಾದ್ ರವರಿಗೆ ಧನ್ಯವಾದ ತಿಳಿಸಿದ್ದಾರೆ... ಚಿತ್ರದ ಸಂಗೀತದಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಲು ಹೊರಟಿದ್ದೇವೆ ಹಾಗಾಗಿ ಐದು ಜನ ಸಂಗೀತ ನಿರ್ದೇಶಕರಿಂದ ಈ ಚಿತ್ರದ ಟೈಟಲ್ ರಿಲೀಸ್ ಮಾಡಿಸಿದ್ದೇವೆ ಎಂಬುದು ನಿರ್ದೇಶಕರ ಮಾತು...

1001723369

ಚಿತ್ರತಂಡ ಈಗಷ್ಟೇ ಸ್ಕ್ರಿಪ್ಟ್ ಪೂಜೆಯನ್ನು ಮುಗಿಸಿಕೊಂಡು ಮುಂದಿನ ಕೆಲಸಗಳತ್ತ ಸಾಗುತ್ತಿದೆ...ಇತರ ತಂತ್ರಜ್ಞರು ಮತ್ತು ಕಲಾವಿದರನ್ನು ಇನ್ನೂ ಅಂತಿಮಗೊಳಿಸಬೇಕಿದೆ.... ಮುಂದಿನ ತಿಂಗಳು ಕಡೆಯ ವಾರದಲ್ಲಿ ಮುಹೂರ್ತ ಮಾಡಿಕೊಂಡು ಶೂಟಿಂಗ್ ಹೊರಡುವ ಆಲೋಚನೆಯಲ್ಲಿದೆ ಈ ಚಿತ್ರ ತಂಡ... ಒಟ್ಟಾರೆ 'ಸಮಸ್ತ ಸಿಂಗಲ್ ಗಳ ಆಶೀರ್ವಾದದೊಂದಿಗೆ' ಮಿಸ್ಟರ್.ಕಲ್ಯಾಣ್ ಕುಮಾರ್ ಚಿತ್ರ ತಯಾರಾಗುತ್ತಿದೆ ಎಂಬುದು ಚಿತ್ರತಂಡದಿಂದ ಪೋಸ್ಟರ್ ಮೂಲಕ ತಿಳಿದು ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ