– ರಾಘವೇಂದ್ರ ಅಡಿಗ ಎಚ್ಚೆನ್.

ಬೆಳಗಾವಿಯ ಸಂತೋಷ್ ಹೆಗಡೆ ಅವರ ನಿರ್ಮಾಣದ ಅನಂತಪಯಣ ಚಿತ್ರದ ನನ್ನ ಕಂಬಳಿ ಹಾಡನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಕೊಳಿ ಅವರು ಬಿಡುಗಡೆ ಮಾಡಿದರು.
ಗಡಿನಾಡು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹಾಡಿಗೆ ಚಾಲನೆ ನೀಡಿದ ಸಚಿವರು ಕುರಿಗಾಹಿಗಳ ಜೀವನದ ಬದುಕು, ಬವಣೆಯ ಕಥೆ ಇಟ್ಟುಕೊಂಡು ನಮ್ಮ ಜಿಲ್ಲೆಯವರೇ ಆದ ನಿರ್ಮಾಪಕ ಸಂತೋಷ್ ಹೆಗಡೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಶ್ರೀಕಾಕ ಅವರು ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ. ಇಂಥ ಚಿತ್ರಗಳನ್ನು ಥೇಟರಿಗೆ ಹೋಗಿ ನೋಡುವ ಮೂಲಕ ಬೆಂಬಲಿಸಿ, ಪ್ರೋತ್ಸಾಹಿಸಿ, ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೇದಾಗಲಿ ಎಂದು ಶುಭ ಹಾರೈಸಿದರು.

1001961808

ನಿರ್ಮಾಪಕ ಸಂತೋಷ್ ಹೆಗಡೆ ಮಾತನಾಡುತ್ತ  ಸಂಚಾರಿ ಕುರಿಗಾಹಿಗಳ ಬದುಕು, ಬವಣೆ ಅವರ ಪರಂಪರೆ, ಹೋರಾಟ, ಅನುಭವಿಸಿದಂಥ ನೋವು, ಹಂತ ಹಂತದಲ್ಲೂ  ಎಲ್ಲರೀತಿಯ ಸವಾಲುಗಳನ್ನು ಎದುರಿಸುತ್ತ ಬಂದಿದ್ದಾರೆ. ಸದ್ಯ ಅವರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳೇನು, ಇತ್ತೀಚಿನ ದಿನಗಳಲ್ಲಿ ಏನೆಲ್ಲ ತೊಂದರೆ ಎದುರಿಸಿದರು ಇದನ್ನೆಲ್ಲ ಇಟ್ಟುಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ. ಈ ಹಾಡಿನಿಂದಲೇ ಚಿತ್ರದ ಪ್ರಚಾರ ಶುರು ಮಾಡುತ್ತಿದ್ದೇವೆ ಎಂದರು.

1001961817

ನಿರ್ದೇಶಕ ಶ್ರೀಕಾಕ ಮಾತನಾಡುತ್ತ ಅನಂತಪಯಣ ಎಂದರೆ ಊರಿಂದ ಊರಿಗೆ ಹೋಗುವ ಕುರಿಗಾಹಿಗಳ ಜರ್ನಿ ಕಥೆ, ನಿರ್ದೇಶನದ ಜತೆ‌ ನಾನೇ ನಾಯಕನಾಗಿ ನಟಿಸಿದ್ದೇನೆ. ಚಿತ್ರದಲ್ಲಿ  6 ಹಾಡಗಳು, 3 ಸಾಹಸ ದೃಶ್ಯಗಳಿವೆ, ಜಸ್ಕರಣ್ ಸಿಂಗ್ ಕೈಲಾಶ್ ಖೇರ್, ಪೃಥ್ವಿಭಟ್ ಹಾಡಿದ್ದಾರೆ.ಇದೇ ತಿಂಗಳ 27 ಕ್ಕೆ ಚಿತ್ರ ರಿಲೀಸ್ ಮಾಡುತ್ತಿದ್ದೇವೆ ಎಂದರು.
ನಾಯಕಿ ನಿವಿಷ್ಕಾ ಪಾಟೀಲ್ ಮಾತನಾಡುತ್ತ
ಇದು ನನ್ನ 4ನೇ ಚಿತ್ರ. ನಾನು ಕೂಡ  ಬೆಳಗಾವಿಯವಳು. ನನ್ನ ಹುಟ್ಟೂರಲ್ಲೇ ನನ್ನ ಚಿತ್ರದ ಆಡಿಯೋ ರಿಲೀಸಾಗ್ತಿರೋದಕ್ಕೆ ಖುಷಿಯಾಗ್ತಿದೆ. ಒಬ್ಬ ಹುಡುಗಿ ಹೇಗೆ ಕುರುಬರ ಫ್ಯಾಮಿಲಿಗೆ ಜತೆಯಾಗ್ತಾಳೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದರು.

1001961827

ಈ ಚಿತ್ರಕ್ಕೆ ಶ್ರೀಕಾಕ‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಲ ರಾಜವಾಡಿ, ಮಂಜುನಾಥ್ ಹೆಗ್ಡೆ, ಎಂ.ಕೆ.ಮಠದ್, ಲಕ್ಷ್ಮಿ ಸಿದ್ದಯ್ಯ, ಪ್ರಶಾಂತ್ ಸಿದ್ದಿ ಉಳಿದ ಪಾತ್ರಗಳಲ್ಲಿದ್ದಾರೆ. ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಹಾಗೂ ಎಸ್.ಕೆ.ಫಿಲಂ ಫ್ಯಾಕ್ಟರಿ ಅರ್ಪಿಸುವ ಅನಂತ ಪಯಣ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ *ಶ್ರೀ ಕಾಕ* ಅವರೇ ಸಿನಿಮಾದ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೃತ್ಯಕಲಾವಿದ, ಸಹ ನಿರ್ದೇಶಕನಾಗಿ ಕೆಲಸ  ಮಾಡಿರುವ ಶ್ರೀಕಾಕ ಅನಂತ ಪಯಣ ಚಿತ್ರದ ಮೂಲಕ ನಾಯಕ, ನಿರ್ದೇಶಕರಾಗಿದ್ದಾರೆ.
ಈ ಚಿತ್ರವನ್ನು ಶ್ರೀ ಅಶೋಕ್ ಫಿಲಂಸ್ ಹಾಗೂ
ಎಸ್.ಕೆ. ಫಿಲಂ ಫ್ಯಾಕ್ಟರಿ ಮೂಲಕ
ಸಂತೋಷ್ ಅಶೋಕ್ ಹೆಗ್ಡೆ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಆಕಾಶ್ ಪರ್ವ ಅವರ ಸಂಗೀತ ಸಂಯೋಜನೆ, ವಿನೋದ್ ಭಾರತಿ ಅವರ ಛಾಯಾಗ್ರಹಣ, ದೀಪುಗೌಡ ಅವರ ಸಂಕಲನ  ಈ ಚಿತ್ರಕ್ಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ