ಕರೀನಾ ಕೇಳಿದಳು 12 ಕೋಟಿ!

ಕರೀನಾಳ ಫ್ಯಾನ್‌ ಫಾಲೋಯರ್ಸ್‌ಗೆ ಏನೂ ಕೊರತೆ ಇಲ್ಲ. ಆದರೆ ಅವಳು ತನ್ನ ಮುಂದಿನ ಚಿತ್ರಕ್ಕಾಗಿ 12 ಕೋಟಿ ಡಿಮ್ಯಾಂಡ್‌ಮುಂದಿಟ್ಟಾಗ, ಅವಳನ್ನು ಟೀಕಿಸುವ ಟ್ರೋಲಿಗರ ದಂಡೆ ಬೆಳೆಯಿತು. ಇಂದಿನ ಆಧುನಿಕ ಯುಗದಲ್ಲಿ `ದೇವಿ ಸೀತಾ' ಎಂಬ ಪೌರಾಣಿಕ ಚಿತ್ರಕ್ಕೆ ಅವಳಿಗೆ ಸೀತೆಯ ಪಾತ್ರ ದೊರೆತಾಗ, ಹೀಗೆ ಸಂಭಾವನೆ ಕೇಳಿದಳಂತೆ. `ನನ್ನ ಸಂಭಾವನೆ ಇಷ್ಟು ಅಂತ ಹೇಳಿದ್ದೇನೆ, ಒಪ್ಪುವುದು ಬಿಡುವುದು ನಿರ್ಮಾಪಕರಿಗೆ ಬಿಟ್ಟಿದ್ದು,' ಎಂದು ಖಡಾಖಂಡಿತವಾಗಿ ಉತ್ತರಿಸಿದ್ದಾಳೆ. ಇದೀಗ ಬಂದ ಸುದ್ದಿ  ಆ ಪಾತ್ರ ಈಗ ಕಂಗನಾಳ ಪಾಲಾಗಿದೆಯಂತೆ!

ವಿಶಿಷ್ಟ ನಟಿಗೆ ಸಂದ ವಿಶೇಷ ಗೌರವ

Khas-Bandi-Ko-Khas-Jagah

`ಆರ್ಮ್ಯಾಕ್ಸ್ ಸ್ಟಾರ್ಸ್‌ ಇಂಡಿಯಾ ಲವ್ಸ್' ಸಂಸ್ಥೆಯ ಸೂಚನೆ ಪ್ರಕಾರ ನಟಿ ಕಿಯಾರಾ ಆಡ್ವಾಣಿ ವಿಶೇಷ 4ನೇ ಸ್ಥಾನ ಗಳಿಸಿದ ನಟಿ ಎನಿಸಿದ್ದಾಳೆ. ಈ ಆಯ್ಕೆಯ ಪ್ರಕಾರ ಭಾರತದ ಅತಿ ಜನಪ್ರಿಯ ಹಾಗೂ ಅಚ್ಚುಮೆಚ್ಚಿನ ನಟಿಯರಲ್ಲಿ ಇವಳೂ ಒಬ್ಬಳೆನಿಸಿದ್ದಾಳೆ. ಈ ಪಟ್ಟಿಯಲ್ಲಿ ಇವಳೊಂದಿಗೆ ಆಲಿಯಾಭಟ್‌, ದೀಪಿಕಾ ಪಡುಕೋಣೆ, ಕತ್ರೀನಾರ ಹೆಸರೂ ಸೇರಿವೆ. `ಕಬೀರ್‌ಸಿಂಗ್‌' ಚಿತ್ರದಿಂದ ಕಿಯಾರಾ ಸಾಕಷ್ಟು ಮನ್ನಣೆ ಗಳಿಸಿದಳು, ಇದಾದ ಮೇಲೆ ಇವಳಿಗೆ ಹಲವು ಭಾರಿ ಚಿತ್ರಗಳಲ್ಲಿ ಅವಕಾಶ ಸಿಕ್ಕಿತು.

`ಛೋರಿ' ಚಿತ್ರದ ಪೋಸ್ಟರ್‌ ರಿಲೀಸ್‌

Chorri-Poster-Release

ಹಾರರ್‌ ಚಿತ್ರ ಪ್ರೇಮಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌! ಅಮೆರನ್‌ ಪ್ರೈಮ್ ತನ್ನ ಮುಂದಿನ OTT ಚಿತ್ರವಾಗಿ `ಛೋರಿ' ದೆವ್ವದ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರ ಒಂದು ಝಲಕ್‌ ವೀಕ್ಷಕರನ್ನು ದಂಗುಬಡಿಸಿದೆ! ವಿಶಾಲ್ ‌ಪರಿಯಾ ನಿರ್ದೇಶಿತ ಈ ಚಿತ್ರ ಬೆಚ್ಚಿ ಬೀಳಿಸುತ್ತದೆ. ಈ ಚಿತ್ರ ಮುಂದಿನ ದೀಪಾವಳಿ ಹೊತ್ತಿಗೆ ರಿಲೀಸ್‌ ಆಗುತ್ತೆ ಎಂದು ಭರವಸೆ ನೀಡುತ್ತಾರೆ ನಿರ್ಮಾಪಕರು. ಈ ಚಿತ್ರದ ಝಲಕ್‌ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಥಿಯೇಟರಿನಲ್ಲಿ ಈ ದೆವ್ವ ಕಂಡು ಯಾವಾಗ ಬೆಚ್ಚಿ ಬೀಳುವುದೋ ಎಂದು ಕಾಯುತ್ತಿದ್ದಾರಂತೆ!

ಅಶ್ಲೀಲ ವೆಬ್‌ ಸೀರೀಸ್‌

Ashlil-Web-Series

ಇದರ ಹೆಸರು ಕೇಳುತ್ತಲೇ ಪ್ರೇಕ್ಷಕರಿಗೆ ಮಜಾ ಎನಿಸುತ್ತದೆ, ಆದರೆ ಈ ಮಹಾಶಯನ ವಿಷಯವೇ ಬೇರೆ. ಈತನಿಗೆ ಈ ಸೀರೀಸ್ ನಲ್ಲಿ ಪಾತ್ರ ವಹಿಸುವ ಒಂದು ಅವಕಾಶ ಸಿಕ್ಕಿತು, ಆದರೆ ಆತ ಸಾರಾಸಗಟಾಗಿ ಅದನ್ನು ತಿರಸ್ಕರಿಸುವುದೇ? ಹೌದು, ನಾವಿಲ್ಲಿ ಹೇಳುತ್ತಿರುವುದು ಮಹಾಭಾರತದ ಭೀಷ್ಮ ಪಿತಾಮಹ, ಮುಖೇಶ್‌ ಖನ್ನಾ ಕುರಿತು. OTT ಸೀರೀಸ್‌ ನಲ್ಲಿ ಈತನಿಗೆ ಇಂಥ ಅವಕಾಶ ದೊರೆತಾಗ, ಕಿರುತೆರೆಯಲ್ಲಿ ಭೀಷ್ಮನಂಥ ಆದರ್ಶ ಪಾತ್ರ ವಹಿಸಿ, ಇದೀಗ ಇಂಥ ಕೆಳಮಟ್ಟದ ಪಾತ್ರ ವಹಿಸಿಯೇ ಎಂದು ನಿರಾಕರಿಸಿದನಂತೆ. ಯಾವ ಪಾತ್ರ ಆದರೇನು.... ಕೊರೋನಾ ಕಾಲದಲ್ಲಿ ಆದಾಯ ಕಳೆದುಕೊಳ್ಳಬಾರದು ಎನ್ನುತ್ತಿದ್ದಾರೆ ಬಾಲಿವುಡ್‌ ಮಂದಿ. ಇದನ್ನು ಈತ ತನ್ನ `ಮುಖೇಶ್‌ ಖನ್ನಾ ಶೋ'ನಲ್ಲಿ ಹೇಳಿಕೊಂಡಿದ್ದಾನೆ, ಜೊತೆಗೆ ಕರಣ್‌ ವೀರ್‌ ಲೋಹ್ರಾ ಕೂಡಾ ಇರುತ್ತಾನೆ.

ಅಜಯ್‌ ದೇವ‌ಗನ್‌ನ ಮೆಗಾ ಪ್ರಾಜೆಕ್ಟ್

Ajay-Devgan-Ka-Megaproject

ಅಜಯ್‌ಎಂಥ ಉತ್ತಮ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ, ಈತನ ಫ್ಯಾನ್‌ ಫಾಲೋಯರ್ಸ್‌ಗೆ ಏನೂ ಕಡಿಮೆ ಇಲ್ಲ. ಈ ಕೊರೋನಾ ಕಾಲದಲ್ಲೂ ಈತ ಬಿಝಿ ಆಗಿರುವುದೇ ಈತನ ಜನಪ್ರಿಯತೆಗೆ ಸಾಕ್ಷಿ, ಅಂಥ ಮೆಗಾ ಪ್ರಾಜೆಕ್ಟ್ ಗೆ ಕೈಹಾಕಿದ್ದಾನೆ. ಹೌದು, ಈತ ಇದೀಗ 400 ಕೋಟಿಗೂ ಅಧಿಕ ಭಾರಿ ಭರ್ಜರಿ ಬಜೆಟ್‌ನ ಚಿತ್ರ ತಯಾರಿಸುತ್ತಿದ್ದಾನೆ. ಇದು ಈತನ ಬಹುದಿನಗಳ ಕನಸಂತೆ! ಹಲವು ವರ್ಷಗಳಿಂದ ಈ ವಿಷಯದ ರೂಪು ರೇಷೆ ನಡೆಯುತ್ತಿತ್ತು, ಇದೀಗ ಚಿತ್ರಕಥೆಯಾಗಿ ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಿದೆಯಂತೆ. ಈ ಚಿತ್ರ 100% ಎಮೋಷನ್‌(ಬಾಹುಬಲಿ ತರಹ) ಆಧಾರಿತವಂತೆ.... ಆಲ್ ದಿ ಬೆಸ್ಟ್ ಅಜಯ್!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ