ಸಾರಾ ನೀಡಿದ ಥೀಮ್ ಪಾರ್ಟಿ

ನಾವು ಹೇಳುತ್ತಿರುವುದು ಸಾರಾ ಅಲಿ ಖಾನ್‌ ಕುರಿತು. ಅವಳು ತನ್ನ 26ನೇ ಬರ್ತ್‌ ಡೇ ಅಂದು ಅದ್ಧೂರಿ ಪಾರ್ಟಿ ಏರ್ಪಡಿಸಿದ್ದಳು. ಇಂಥ ಆಡಂಬರ ಯಾಕಿರಬಾರದು? ತನ್ನ ಅಷ್ಟು ಸಣ್ಣ ವಯಸ್ಸಿನಲ್ಲೇ ಅವಳು ಘಟಾನುಘಟಿ ಸೆಲೆಬ್ರಿಟೀಸ್‌ ಜೊತೆ ನಟಿಸಿದ್ದಾಳೆ. ಹೀಗಾಗಿ ಇವಳ ಅಣ್ಣ ಇಬ್ರಾಹಿಂ ಅಲಿಖಾನ್‌ ಬೀಗುತ್ತಿದ್ದಾನೆ. ಅವನು ತಂಗಿಯ ಪ್ರಿಯವಾದ ಪಿಂಕ್‌ ಕಲರ್‌ನ್ನೇ ಪಾರ್ಟಿ ಥೀಮ್ ಆಗಿಸಿದ್ದ.

ಸನಿಯ ಬಂಗಲೆಯ ಬೊಂಬಾಟ್‌ ವೈಭವ

sunny1

ಸನಿ ಡಿಯೋಲ್‌, ತನ್ನ ಭಾರಿ ಭರ್ಜರಿ ಫೈಟಿಂಗ್‌ ಸಾಹಸಗಳಿಂದ ಬಾಲಿವುಡ್‌ ನಲ್ಲಿ ಇಂದಿಗೂ ಚರ್ಚೆಯಲ್ಲಿರುವ ನಟ. ಅವನ ಸೂಪರ್‌ ಹಿಟ್‌ ಡೈಲಾಗ್‌ ಗಳು ಇಂದಿಗೂ ಅಭಿಮಾನಿಗಳ ನಾಲಿಗೆ ತುದಿಯಲ್ಲಿವೆ. ಆತ ಇತ್ತೀಚೆಗೆ ಬೆಳ್ಳಿ ಪರದೆಯಲ್ಲಿ ಮಿಂಚದಿದ್ದರೂ, ಅಭಿಮಾನಿಗಳ ಅಭಿಮಾನಕ್ಕೇನೂ ಕೊರತೆ ಇಲ್ಲ. ಈತನ ಪ್ರತಿ ಮಾತನ್ನೂ ಆಲಿಸಲು ಫ್ಯಾನ್ಸ್ ಕಾದಿರುತ್ತಾರೆ. ಬನ್ನಿ, ಈತನ ಮುಂಬೈನ ಜುಹೂ ಬೀಚ್‌ ನಲ್ಲಿರುವ ಭರ್ಜರಿ ಬಂಗಲೆಯ ಬಗ್ಗೆ ತಿಳಿಯೋಣ. ಅವನ ಇಡೀ ಬಂಗಲೆ ಗಾಜಿನಿಂದ ಆವೃತವಾಗಿದೆ, ಸೂರ್ಯ ಕಿರಣ ಅದರ ಮೇಲೆ ಬೀಳುತ್ತಿದ್ದಂತೆ ಜಾಗಿಂಗ್‌ ಗೆ ರೆಡಿಯಾಗುತ್ತಾನೆ. ಹೊರ ಅಂಗಳದಲ್ಲಿ ಭವ್ಯ ಗಾರ್ಡನ್‌, ಭಾರಿ ಸ್ವಿಮಿಂಗ್‌ ಪೂಲ್‌, ಜಿಮ್, ಹೋಂ ಥಿಯೇಟರ್‌ ಸಹ ಉಂಟು! 40-50 ಜನ ಒಟ್ಟೊಟ್ಟಿಗೆ ಇಲ್ಲಿ ಪಾರ್ಟಿ ಮಾಡಬಹುದು.

ಆಮೀರನಿಗೂ ಚಿಂತೆಯೇ?

aamir1

ಕೊರೋನಾ ಕಾಟದಿಂದಾಗಿ ಸಿನಿಮಾ ಥಿಯೇಟರ್‌ ಹಾಳುಬಿದ್ದಿವೆ. ಈ ಕಾರಣ ನಿರ್ಮಾಪಕರು OTT ಮೂಲಕ ಚಿತ್ರ ರಿಲೀಸ್ ಮಾಡದೆ ಬೇರೆ ದಾರಿ ಇಲ್ಲ. ಹೀಗಾಗಿ ಈ ವಿಷಯbನ್ನೇ ದೊಡ್ಡದಾಗಿಸಿ ಪ್ರೆಸ್‌ ಮೀಟ್‌ ಮಾಡಿದ ಆಮೀರ್‌ ತನ್ನ ಚಿಂತೆ ಹಂಚಿಕೊಂಡ. ಈ ಸ್ಥಿತಿಯನ್ನು ಸುಧಾರಿಸಲು ನಾವೆಲ್ಲ ಒಟ್ಟಿಗೆ ದುಡಿಯಬೇಕು ಎಂದ. ಎಲ್ಲೆಲ್ಲೂ ಸಿನಿಮಾ ಫ್ಲಾಪ್‌ ಆಗುತ್ತಿರುವಾಗ ಸ್ಟಾರ್ಸ್‌ ಆದರೂ ನಮಗೇನು ಚಿಂತೆ ಕಾಡದೇ ಎನ್ನುತ್ತಾನೆ.

ವಿದ್ಯಾ ಬಾಲನ್‌ ತಳೆದ ನಿಲುವು

vidhya1

ಬೆಹೆನ್‌ ಜೀ ಟೈಪಿಗೆ ಒಗ್ಗಿಹೋಗಿರುವ ವಿದ್ಯಾ, ಯಾರಾದರೂ ತನ್ನ ಬಗ್ಗೆ ಹಾಗೆ ವ್ಯಂಗ್ಯವಾಗಿ ಕುಟುಕಿದರೆ ತಲೆ ಕೆಡಿಸಿಕೊಳ್ಳದೇ, ತಾನು ಹೇಗಿದ್ದೇನೋ ಅದೇ ಸರಿ ಎನ್ನುತ್ತಾಳೆ. ಮೀಡಿಯಾ ಫೋಟೋಗಳಲ್ಲೂ ಗಂಗಮ್ಮ ಗೌರಮ್ಮನಾಗಿಯೇ ನಿಲ್ಲುತ್ತಾಳೆ. ನೋ ಗಿಲ್ಟ್ ಫೀಲಿಂಗ್‌. ಆಕೆ ಒಂದು ಸಂದರ್ಶನದಲ್ಲಿ ಅವಾಸ್ತವಿಕ ಸೌಂದರ್ಯದ ವಿರುದ್ಧ ಸಿಡಿದು ಮಾತಾಡಿದಳು. ಮೀಡಿಯಾಗೆ ಪೋಸ್‌ ನೀಡಬೇಕೆಂದು, ‌FBಗಾಗಿ ಬಿಚ್ಚಮ್ಮನ ಪೋಸ್‌ ನೀಡುವ ದುರ್ಗತಿ ತನಗಿಲ್ಲ, ನಾನು ದಪ್ಪಗಿದ್ದರೆ ಇರಲಿ, ನನ್ನ ನಟನೆ ನೋಡಿ ಎನ್ನುತ್ತಾಳೆ.

ಸರಿಯಾಗಿ ಸಿಕ್ಕಿಬಿದ್ದ ಶರ್ಲಿನ್‌ ಚೋಪ್ರಾ

sherlin1

ತಾನಾಗಿ ಮಾಡಿಕೊಂಡ ಹಗರಣದಿಂದಾಗಿ ಶಿಲ್ಪಾ ಶೆಟ್ಟಿಯ ಪತಿ ಜೇಲಿನ ಅತಿಥಿಯಾಗಿದ್ದರೆ, ಅದನ್ನು ಖಂಡಿಸಿ ಹಲವಾರು ಮಾಡೆಲ್‌, ನಟಿಯರು ಆತನ ಪರವಾಗಿ ಮಾತನಾಡುತ್ತಿದ್ದಾರೆ. ಅವರಲ್ಲಿ ಪ್ರಮುಖಳು ನಟಿ ಶರ್ಲಿನ್‌ ಚೋಪ್ರಾ. ಆಕೆ ತಾನಾಗಿ ಮುಂದೆ ಬಂದು ಪೊಲೀಸರಿಗೆ ಆತನ ಪರ ಹೇಳಿಕೆ ಕೊಟ್ಟಿದ್ದಲ್ಲದೆ, ‌FBನಲ್ಲಿ ರಾಜ್‌ ಕುಂದ್ರಾ ಜೊತೆಗಿನ ತನ್ನ ಫೋಟೋ ಹಂಚಿಕೊಂಡಾಗ, ಎಲ್ಲರ ಮುಂದೆ ಛೀ ಥೂ ಎಂದು ಉಗಿಸಿಕೊಂಡಳು. ಏಕೆಂದರೆ ‌FB ‌ಯೂಸರ್ಸ್‌, ಇದರಲ್ಲಿ ಈಕೆ ಬೇಕೆಂದೇ ಪಬ್ಲಿಸಿಟಿ ಸ್ಟಂಟ್‌ ಗಾಗಿ ತನ್ನ ಗ್ಲಾಮರಸ್‌ ಫೋಟೋ ಎಡಿಟ್‌ ಮಾಡಿ ಹಾಕಿಕೊಂಡಿದ್ದಾಳೆಯೇ ಹೊರತು ಆತನ ಕಾಳಜಿಗಾಗಿ ಅಲ್ಲ ಎಂದು ಸತತ ಟ್ರೋಲ್ ‌ಮಾಡುತ್ತಿದ್ದಾರೆ. ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳಬೇಕೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ