ಎಂದೂ ಸೋಲು ಒಪ್ಪಬಾರದು

ಸುಶಾಂತ್‌ ಸಿಂಗನ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾಳ ಹೆಸರು ಬಂದಿದ್ದೇ ತಡ, ಅವಳ ಜೀವನ ತಟಸ್ಥ ಆಗಿಹೋಗಿದೆ. ಇಂಡಸ್ಟ್ರಿಯ ಬಹುತೇಕರು ಅವಳನ್ನೇ ದೋಷಿ ಎನ್ನತೊಡಗಿದರು, ಆದರೆ ರಿಯಾ ಮಾತ್ರ ತಾನು ಸೋಲು ಒಪ್ಪಿಕೊಳ್ಳುವವಳಲ್ಲ ಎಂದು ನಿರೂಪಿಸಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಅವಳು ಹಿಂಟ್‌ ನೀಡುತ್ತಲೇ ಇರುತ್ತಾಳೆ. ಇತ್ತೀಚೆಗೆ FB‌ನಲ್ಲಿ ಅbಳೊಂದು ಫೋಟೋ ಪೋಸ್ಟ್ ಮಾಡಿಕೊಂಡಳು. ಅದರಲ್ಲಿ ಅವಳೊಂದು ಟೋಪಿ ಹಾಕಿಕೊಂಡಿದ್ದಾಳೆ. ಅದರಲ್ಲಿ ಆಂಗ್ಲ ಅಕ್ಷರಗಳಲ್ಲಿ ಸ್ಪಷ್ಟವಾಗಿ `ಎಂದೂ ಸೋಲು ಒಪ್ಪುವುದಿಲ್ಲ!' ಎಂದಿದೆ. ಅಂದಹಾಗೆ ರಿಯಾ ಇತ್ತೀಚೆಗೆ ಶೂಟಿಂಗ್‌ ಶುರುವಾಗಿರುವ `ಚೆಹರೆ' ಚಿತ್ರದ ಭಾಗವಾಗಿದ್ದಾಳೆ. ಇಲ್ಲಿ ಅವಳು ಅಮಿತಾಭ್‌ರ ಮಗಳಾಗಿದ್ದಾಳೆ. ಆಲ್ ದಿ ಬೆಸ್ಟ್ ರಿಯಾ!

ಬುಸುಗುಟ್ಟುಲು ಬರುತ್ತಿದ್ದಾಳೆ ನಾಗಿನ್

ಶ್ರದ್ಧಾ ಕಪೂರ್‌ಳನ್ನು ಇತ್ತೀಚೆಗೆ ಸುದ್ದಿಗಾರರು ನಿರ್ದೇಶಕ ನಿಖ್‌ರ ಆಫೀಸಿನೆದುರು ಫೋಟೋದಲ್ಲಿ ಸೆರೆಹಿಡಿದರು. ನಂತರ ತಿಳಿದ ವಿಷಯ, ಅವಳು ಅಲ್ಲಿ ತನ್ನ ಮುಂದಿನ `ನಾಗಿನ್‌' ಚಿತ್ರ (ಶ್ರೀದೇವಿ ಆರಂಭಿಸಿದ ಈ ನಾಗಿಣಿಯ ಸರಣಿ ಸಕಲ ಭಾಷೆಗಳಲ್ಲೂ, ಧಾರಾವಾಹಿಗಳಲ್ಲೂ ಬರುತ್ತಲೇ ಇದೆ)ಕ್ಕಾಗಿ ಎಂದು ತಿಳಿಯಿತು. ಕೊರೋನಾ ಮಹಾಮಾರಿಯಿಂದಾಗಿ, ಈ ತಾರೆಯರ ಸ್ಥಿತಿ ತ್ರಿಶಂಕುವಾಗಿದೆ. ಯಾವ ಚಿತ್ರ ಎಲ್ಲಿ, ಯಾವಾಗ ನಿಂತು ಹೋಗುತ್ತೋ, ಬೇರಾರೂ ಆ ಜಾಗಕ್ಕೆ ಬಂದುಬಿಡುತ್ತಾರೋ ಒಂದು ಗೊತ್ತಾಗೋಲ್ಲ. ಹೀಗಾಗಿ ತಾರೆಯರು ಕಂಡ ಕಂಡ ನಿರ್ದೇಶಕ ನಿರ್ಮಾಪಕರ ಬಳಿ ಧಾವಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ.... ಗೇಣು ಬಟ್ಟೆಗಾಗಿ....!

ಬೈಬಲ್ ವಿವಾದದಲ್ಲಿ ಸಿಕ್ಕಿಬಿದ್ದ ಬೇಬೋ

karina-1

ಸೂಪರ್‌ ಸ್ಟಾರ್‌ ಕರೀನಾಳ ಮರಿ ಸೂಪರ್‌ ಸ್ಟಾರ್‌ ಮಕ್ಕಳಂತೂ ಹುಟ್ಟತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸತೊಡಗಿದ್ದಾರೆ. ಇದೀಗ ಕರೀನಾ ತನ್ನ 2-2 ಬಾರಿಯ ಪ್ರೆಗ್ನೆನ್ಸಿ ಕುರಿತು, ಗರ್ಭವತಿಯರಿಗೆ ನಾನಾ ಸಲಹೆ ನೀಡುವ ಪುಸ್ತಕ ರಚಿಸಿ, ಸುಮ್ಮನಿರಲಾಗದೆ ಅದರ ಹೆಸರನ್ನು `ಕರೀನಾ ಕಪೂರ್‌ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್' ಎಂದಿರಿಸುವುದೇ? ಇಲ್ಲಿ ಗರ್ಭಿಣಿಯರು ಕಟ್ಟುನಿಟ್ಟಾಗಿ ಪ್ರೆಗ್ನೆನ್ಸಿಯಲ್ಲಿ ಅನುಸರಿಸಬೇಕಾದ ಸಲಹೆಗಳನ್ನೇ `ಬೈಬಲ್' ಎಂದಿರುವುದಾಗಿ ಅವಳು ಒತ್ತಿ ಹೇಳಿದರೂ ಪುಸ್ತಕ ರಿಲೀಸ್‌ ಆದ ತಕ್ಷಣ, ಕಾನ್ಪುರದ ಕ್ರೈಸ್ತರು ಅವಳ ವಿರುದ್ಧ ಕೋರ್ಟಿಗೆ ಮೊರೆಹೋಗಿದ್ದಾರೆ. ಬಾಲಿವುಡ್‌ ಮಂದಿ ಅವಳೀಗ ಕಾನೂನಿನ ಕಬಂಧ ಬಾಹುಗಳಲ್ಲಿ ಸಿಕ್ಕಿಬಿದ್ದಳಲ್ಲ ಎಂದು ಪೇಚಾಡುತ್ತಿದ್ದಾರೆ. ತಾನೇನೇ ಸಮಜಾಯಿಷಿ ನೀಡಿದರೂ, ಧರ್ಮದ ಮುಂದೆ ಅವಳೀಗ ತತ್ತರಿಸುವಂತಾಗಿದೆ. ಚೀರ್‌ ಅಪ್‌ ಬೇಬೋ!

ಸರೋಗೆಸಿ ಆಧಾರಿತ ಮಿಮೀ

mimi-1

ಕೃತಿ ಸೇನನ್‌ ಪಂಕಜ್‌ ತ್ರಿಪಾಠಿಯರಂಥ ಘಟಾನುಘಟಿ ಕಲಾವಿದರು ನಟಿಸಿರುವ `ಮಿಮೀ' ಚಿತ್ರ ತಯಾರಾಗಿ ನೆಟ್‌ ಫ್ಲಿಕ್ಸ್ ನಲ್ಲಿ ರಿಲೀಸ್‌ ಗಾಗಿ ಕಾದಿದೆ. ಈ ಚಿತ್ರದ ಟ್ರೇಲರ್‌ ಸೀದಾಸಾದಾ ಆಗಿದ್ದು, ಒಂದು ಯಕ್ಷಪ್ರಶ್ನೆ ಹುಟ್ಟುಹಾಕಿದೆಯಂತೆ. ಈ ಚಿತ್ರ ಮೂಲತಃ ಸರೋಗೆಸಿ ಆಧಾರಿತವಾಗಿದ್ದು, ಹಣದ ದುರಾಸೆಗಾಗಿ ಒಬ್ಬ ಹೆಣ್ಣು ಸರೋಗೇಟ್‌ ಮದರ್‌ಆಗಲು ತಯಾರಾಗಿ ಪ್ರೆಗ್ನೆಂಟ್‌ ಆದಮೇಲೆ, ಅದಕ್ಕೆ ಒಪ್ಪಿದ ದಂಪತಿ ಆ ಮಗುವನ್ನು ಬೇಡ ಎಂದು ತಿರಸ್ಕರಿಸಿದರೆ ಮುಂದೆ ಇವಳ ಗತಿ....? ಇದು ಅತಿ ಗಂಭೀರ ಸವಾಲಾಗಿದ್ದು, ಈ ಬೆಳೆಯುತ್ತಿರುವ ದಂಧೆಯ ಹಲವು ಮುಖ ತೋರಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ