ಕನ್ನಡದ ಹುಡುಗಿಯರಿಗೆ ಕನ್ನಡ ಚಿತ್ರರಂಗದಲ್ಲೇ ಅವಕಾಶಗಳ ಕೊರತೆ ಇದೆ ಎಂಬ ಮಾತು ಮೊದಲಿನಿಂದಲೂ ಕೇಳಿಬಂದಿದೆ. ಆದರೆ ಸ್ವಲ್ಪ ಅವಕಾಶ ಸಿಕ್ಕರೆ ಸಾಕು ತಮ್ಮ ಟ್ಯಾಲೆಂಟ್‌ ತೋರಿಸಿ ಗೆಲ್ಲಬಲ್ಲರು. ಇತ್ತೀಚೆಗೆ ಟಿವಿ ಧಾರಾವಾಹಿ ಮೂಲಕ ಸಾಕಷ್ಟು ಪ್ರತಿಭೆಗಳು ಸಿನಿಮಾ ರಂಗದಲ್ಲಿ ಜನಪ್ರಿಯರಾಗಿರುವ ನಿದರ್ಶನ ಬಹಳಷ್ಟು. ರಚಿತಾ ರಾವ್‌ ಕೂಡಾ ಕಿರುತೆರೆ ಕೊಡುಗೆ.

077A1826

ಈಗ ನಾವು ಪರಿಚಯಿಸುತ್ತಿರುವ ಅನನ್ಯಾ ಎಂಬ ನಟಿ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದಾಳೆ.

`ಕನ್ನಡತಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಅಂದಹಾಗೆ ಅನನ್ಯಾ ನಟಿ, ನಿರೂಪಕಿ, ಪ್ರಾಧ್ಯಾಪಕಿ ವತ್ಸಲಾ ಮೋಹನ್‌ ರವರ ಪುತ್ರಿ.

ಅನನ್ಯಾ ಕಿರು ಪರಿಚಯ ಹೀಗಿದೆ.

077A1345

ಹುಟ್ಟಿ ಬೆಳೆದದ್ದು ಬಸವನಗುಡಿಯಲ್ಲಿ. ಕುಮಾರನ್ಸ್ ಚಿಲ್ಡ್ರನ್‌ ಹೋಂ ಶಾಲೆಯಲ್ಲಿ ಹತ್ತನೇ ತರಗತಿ ನಂತರ ಜೈನ್‌ ಕಾಲೇಜಿಗೆ ಪ್ರವೇಶ. ಜೆಓಎಸ್‌ಎಫ್‌ ಡಿಗ್ರಿ ಬಿಕಾಂ. ಅದೇ ಕಾಲೇಜಿನಲ್ಲಿ ಪೋಸ್ಟ್ ಗ್ರ್ಯಾಜುಯೇಶನ್‌ ಫೈನಾನ್ಶಿಯಲ್ ಅನಾಲಿಸಿಸ್‌. ಸಾಕಷ್ಟು ಬುದ್ಧಿವಂತೆ.

ವಿದ್ಯಾಭ್ಯಾಸ ನಂತರ ಎಂಎನ್‌ಸಿ ಕಂಪನಿಯಲ್ಲಿ ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಉತ್ತಮ ಹುದ್ದೆ. ಅನನ್ಯಾಳಿಗೆ ಬಾಲ್ಯದಲ್ಲಿ ಸಂಗೀತ, ನೃತ್ಯ ಕಲಿಯಲು ಅವಕಾಶ ಮಾಡಿಕೊಡಿಸಲಾಗಿತ್ತು. ನಿರುಪಮಾ ರಾಜೇಂದ್ರರವರ ಬಳಿ ಕಥಕ್‌ ನೃತ್ಯ ಕಲಿತಳು, ಕರ್ನಾಟಕ ಸಂಗೀತ ಜೂನಿಯರ್‌ ಆಗಿದೆ. ಚೆನ್ನಾಗಿ ಹಾಡಬಲ್ಲಳು. ಅಂದಹಾಗೆ ಅನನ್ಯಾ ಹತ್ತು ವರ್ಷದ ಹುಡುಗಿಯಾಗಿದ್ದಾಗಲೇ `ಮುಕ್ತ' ಧಾರಾವಾಹಿಯಲ್ಲಿ ಅಮ್ಮ ವತ್ಸಲಾ ಮೋಹನ್‌ ಜೊತೆ ತೆರೆ ಮೇಲೂ ಮಗಳಾಗಿ ನಟಿಸಿದ್ದಳು. ಆ ಪಾತ್ರದ ಹೆಸರು ಫಲ್ಗುಣಿ.

077A1726

ಲಾಕ್‌ ಡೌನ್‌ ಟೈಮಲ್ಲಿ ಕಲರ್ಸ್‌ನ ಹೊಸ ಧಾರಾವಾಹಿಗೆ ಆಡೀಶನ್‌ ಕರೆದಾಗ ಅಮ್ಮನ ಬಲವಂತಕ್ಕೆ ಆಡೀಶನ್‌ ಕೊಟ್ಟಿದ್ದಳಂತೆ. ಅವಳ ಕಮ್ಯುನಿಕೇಶನ್‌ ತುಂಬಾ ಚೆನ್ನಾಗಿದೆ. ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ. ಅವಳು ಬೆಳೆದಿರೋದೆ ಸಾಹಿತ್ಯ, ಸಂಗೀತ, ನಾಟಕ ವಾತಾವರಣದಲ್ಲಿ ಎಂದು ಅನನ್ಯಾ ಅಮ್ಮ ವತ್ಸಲಾ ಮೋಹನ್‌ ಹೇಳುತ್ತಾರೆ.

077A1499

ಅನನ್ಯಾ ಈಗ ಕನ್ನಡ ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಕನ್ನಡತಿ'ಯಲ್ಲಿ ಸಿಂಚನ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಅದೃಷ್ಟ ಹೆಗಲಿಗೇರಿದೆ. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಅನನ್ಯಾಳಿಗೆ ಸಿನಿಮಾದಲ್ಲೂ ನಟಿಸುವ ಆಸಕ್ತಿ ಇದೆಯಂತೆ. ದೀಪಿಕಾ ಪಡುಕೋಣೆ ಮೆಚ್ಚಿನ ತಾರೆ. ನಿತ್ಯಾ ಮೆನೆನ್‌ ಮಾಡೋ ಪಾತ್ರಗಳು ಇಷ್ಟ. ಧನಂಜಯ್‌, ರಕ್ಷಿತ್‌ ಶೆಟ್ಟಿ ಮೆಚ್ಚಿನ ನಟರು. ಆದರೆ ತುಂಬಾ ಇಷ್ಟ ಪಡೋದು ಕಿಚ್ಚ ಸುದೀಪ್‌ರನ್ನು ಅಂತೆ. ಈ ಎಲ್ಲ ನಟರ ಜೊತೆ ನಟಿಸಲು ಇಷ್ಟು ಎನ್ನುವ ಅನನ್ಯಾ ಆದಷ್ಟು ಬೇಗ ಕಿರುತೆರೆಯಿಂದ ಸಿಲ್ವರ್‌ ಸ್ಕ್ರೀನ್‌ಗೆ ಬರುವಂತಾಗಲಿ.

- ಸರಸ್ವತಿ ಜಾಗೀರ್‌ದಾರ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ