15 ತುಂಬಿದ ಕತ್ರೀನಾ!
ಮೇಲಿನ ಶೀರ್ಷಿಕೆ ಓದಿ ಬೆಚ್ಚಿ ಬೀಳಬೇಡಿ, ಗಾಬರಿ ಬೇಡ. ಕತ್ರೀನಾ ಬಾಲಿವುಡ್‌ಗೆ ಎಂಟ್ರಿ ಪಡೆದು ಇದೀಗ 15 ವರ್ಷ ತುಂಬಿತು. ಕತ್ರೀನಾ `ಬೂಮ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಬಾಲಿವುಡ್ ಗೆ ಡೆಬ್ಯು ಆಗಿದ್ದಳು. ಆದರೆ ಅವಳಿಗೆ ಐಡೆಂಟಿಟಿ ಸಿಕ್ಕಿದ್ದು ಮಾತ್ರ `ಮೈನೆ ಪ್ಯಾರ್ ಕ್ಯೋಂಕಿಯಾ' ಚಿತ್ರದಿಂದ. ಅದಾಗಿ ಆಕೆ ಹಿಂದಿರುಗಿ ನೋಡಲಿಲ್ಲ. 15 ವರ್ಷಗಳಲ್ಲಿ ಅವಳ ನಟನೆ, ಡ್ಯಾನ್ಸ್, ಭಾವಾಭಿನಯದಲ್ಲಿ ಮೇರುಮಟ್ಟದ ಬದಲಾವಣೆ ಕಾಣಿಸಿದ್ದು ಮಾತ್ರವಲ್ಲದೆ, ಆಕೆಯ ಲುಕ್ಸ್ ನಲ್ಲಿಯೂ ಬೇಕಾದಷ್ಟು ಸುಧಾರಣೆಗಳಾದವು. ಇದರ ಜೊತೆಗೆ ಕತ್ರೀನಾ ಬಾಲಿವುಡ್ ನ ಘಟಾನುಘಟಿಗಳೆನಿಸಿದ ಖಾನ್, ಕಪೂರ್, ಕುಮಾರರ ಜೊತೆ ನಾಯಕಿಯಾಗಿ ಮೆರೆದಳು. ಅದರಲ್ಲಿ ಎಷ್ಟೋ ಜನರೊಂದಿಗೆ ಅವಳ ಹೆಸರು ತಳುಕು ಹಾಕಿಕೊಂಡದ್ದೂ ಉಂಟು! ಇತ್ತೀಚೆಗೆ ಕತ್ರೀನಾ ಅಕ್ಷಯ್ ಕುಮಾರ್ ನೊಂದಿಗೆ `ಸೂರ್ಯವಂಶಿ' ಚಿತ್ರಕ್ಕೆ ನಾಯಕಿಯಾಗಿ ಬುಕ್ ಆಗಿದ್ದಾಳೆ, ಅಂದ ಹಾಗೆ 2020 ಕತ್ರೀನಾ ಪಾಲಿಗೆ ಶುಭಾರಂಭ ಆಗಿದೆ.
ಟ್ರೋಲರ್ಸ್ ಗೆ ನಾಚಿಕೆ ಆಗಬೇಕು
ಫೇಸ್ ಬುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲಂಗುಲಗಾಮಿಲ್ಲದ ಕುದುರೆಯಾಗಿದೆ. ಇದರಿಂದಾಗಿ ಯಾರೋ ಬೀದೀಲಿ ಹೋಗೋರು ಇನ್ನಾರದೋ ಬಗ್ಗೆ ಬಾಯಿಗೆ ಬಂದಂತೆ ಪಬ್ಲಿಕ್ ಆಗಿ ಮಾತನಾಡಲು ಅವಕಾಶವಾಗಿದೆ. ಇಲ್ಲಿ ಟ್ರೋಲ್ ಆಗುವವರು ಬಹುತೇಕ ಬಾಲಿವುಡ್ ಸೆಲೆಬ್ರಿಟೀಸ್ ಮತ್ತು ಅವರ ಮನೆಯ ಸದಸ್ಯರಾಗಿರುತ್ತಾರೆ. ಇತ್ತೀಚೆಗೆ ಅಜಯ್ ದೇವಗನ್ ತಮ್ಮ ಮಗಳ ಟ್ರೋಲ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಸಲಿಗೆ ನಡೆದದ್ದು ಎಂದರೆ, ಇವರ ಮಗಳು ನ್ಯಾಸಾ ತಾತನ ನಿಧನದ ಮಾರನೇ ದಿನ ಪಾರ್ಲರ್ ಗೆ ಹೋಗಿದ್ದಳು. ಅವಳ ಫೋಟೋ ತೆಗೆದು ಫೇಸ್ ಬುಕ್ ಗೆ ಹಾಕಿದರೆ ಯಾರೋ, ಕನಿಷ್ಠ ತಾತನ ತಿಥಿ ಕಾರ್ಯ ಮುಗಿಯುವವರೆಗೂ ಕಾಯದೇ ಪಾರ್ಲರ್ ಗೆ ಹೋಗುವುದೇ ಎಂದು ವ್ಯಂಗ್ಯವಾಡಿದ್ದರು. ಅಜಯ್ ಹೇಳುವುದೆಂದರೆ, ಆ ದಿನವಿಡೀ ಅವಳು ಬಹಳ ದುಃಖದಲ್ಲಿದ್ದಳು. ಅವಳ ಮೂಡ್ ಚೇಂಜ್ ಆಗಲಿ ಎಂದು ನಾನೇ ಪಾರ್ಲರ್ ಗೆ ಕಳುಹಿಸಿದ್ದೆ. ಯಾರಿಗೆ ಅಸಲಿ ವಿಷಯ ಗೊತ್ತಿಲ್ಲವೋ ಅವರು ಹೀಗೆಲ್ಲ ಕಮೆಂಟ್ ಮಾಡದೆ ತೆಪ್ಪಗಿದ್ದರೆ ವಾಸಿ. ಮತ್ತೊಂದು ಮುಖ್ಯ ವಿಷಯ ಎಂದರೆ ಟ್ರೋಲಿಗರಿಗೆ ಹೀಗೆ ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡಲು ಅಧಿಕಾರ ಕೊಟ್ಟವರಾರು?
ಫರ್ಹಾನ್ ಧೂಳೆಬ್ಬಿಸಿದ ತೂಫಾನ್
ನಾಗರಿಕತ್ವದ ಕಾನೂನಿನ ವಿರುದ್ಧ ನಿಂತ ನಂತರ ಫರ್ಹಾನ್ ಅಖ್ತರ್, ಇದೀಗ ತೂಫಾನ್ ತರಹ ಕ್ರಾಂತಿಕಾರಿ ಧೂಳೆಬ್ಬಿಸಲು ತೆರೆ ಮೇಲೆ ಮರಳಿ ಬರುತ್ತಿದ್ದಾನೆ. ತನ್ನ ಮುಂದಿನ `ತೂಫಾನ್' ಚಿತ್ರದಲ್ಲಿ ಫರ್ಹಾನ್ ತನ್ನ ಮಸ್ಕ್ಯುಲರ್ ಬಾಡಿಯಿಂದ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾನೆ. ಈಗಾಗಲ್ ಜನ ಈ ಚಿತ್ರದ ಯಶಸ್ಸನ್ನು ಈತನ ಹಿಂದಿನ `ಭಾಗ್ ಮಿಲ್ಕಾ ಭಾಗ್' ಚಿತ್ರಕ್ಕೆ ಹೋಲಿಸಿ ನೋಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರ ಪ್ರಕಾರ ಇದು ಬಾಲಿವುಡ್ ನಲ್ಲಿ ಹೊಸ ಆಯಾಮ ಪಡೆಯಲಿದೆ. ಈ ಬಾಕ್ಸಿಂಗ್ ಡ್ರಾಮಾ ಚಿತ್ರದಲ್ಲಿ ಕಮೆಡಿಯನ್ ಪರೇಶ್ ರಾಮ್ ಸಹ ಪ್ರಧಾನ ಪಾತ್ರ ವಹಿಸಲಿದ್ದಾರೆ. ಈ ತೂಫಾನ್ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಧೂಳೆಬ್ಬಿಸಲಿದೆ ಎಂಬುದನ್ನು ಕಾಲವೇ ಹೇಳಬೇಕು.