ಮತ್ತಷ್ಟು ಚಿಂತೆಗೆ ಒಳಗಾದ ಸಾರಾ
ಇತ್ತೀಚೆಗಷ್ಟೆ ಸಾರಾ ಅಲೀಖಾನ್ ಳ ಚಿತ್ರ `ಲವ್ ಆಜ್ ಕಲ್' ಬಿಡುಗಡೆಯಾಯಿತು. ಇದೇ ಹೆಸರಿನಲ್ಲಿ ದಶಕಗಳಾಚೆ ಇವಳಪ್ಪನ ಅಂದ್ರೆ ಸೈಫ್ ಅಲಿಖಾನ್ ನ ಚಿತ್ರ ರಿಲೀಸ್ ಆಗಿತ್ತು, ಆ ಕಾಲಕ್ಕೆ ಓಡಿತ್ತು. ಇತ್ತೀಚೆಗೆ ನಡೆದ ಒಂದು ಪತ್ರಿಕಾ ಗೋಷ್ಠಿಯಲ್ಲಿ ಸಾರಾಳನ್ನು ಆ ಬಗ್ಗೆ ರಿಪೀಟ್ ಟೈಟಲ್ ಏಕೆಂದು ಪ್ರಶ್ನಿಸಲಾಯಿತು. ತುಸು ಹಿಂಜರಿಯುತ್ತಾ ಅವಳು, ಇದು ಆ ಚಿತ್ರದ ಸೀಕ್ವೆಲ್ ಅಲ್ಲ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ, ಹೊಸ ಕಥೆ ಎಂದಳು. ಈ ಚಿತ್ರ ಎಷ್ಟು ಮಾತ್ರ ಸಕ್ಸೆಸ್ ಆಗಲಿದೆ ಎಂದು ಕಾಲವೇ ಹೇಳಬೇಕು. ಆದರೆ ನಂಬಲರ್ಹ ಮೂಲಗಳ ಪ್ರಕಾರ, ಇವಳ ತಾಯಿ ಅಮೃತಾ ಸಿಂಗ್ ಅನಿಲ್ ಕಪೂರ್ ಜೋಡಿಯ `ಚಮೇಲಿ ಕೀ ಶಾದಿ' ಚಿತ್ರವನ್ನು ಮಗಳ ಹೆಸರಲ್ಲಿ ಮತ್ತೆ ರೀಮೇಕ್ ಮಾಡುತ್ತಿದ್ದಾರೆ. ಅಪ್ಪನದಾದ ಮೇಲೆ ಇದ್ಯಾಕಮ್ಮ ಅಮ್ಮನ ಚಿತ್ರ ಹಿಡಿದಿದ್ದೀಯಾ ಎಂದರೆ ಸಾರಾ ಕಕ್ಕಾಬಿಕ್ಕಿ ಆಗದೇ ಇದ್ದಾಳಾ?
ತನ್ನ ಬ್ರಾಂಡ್ ವ್ಯಾಲ್ಯೂ ಗಮನಿಸದ ಜಾಹ್ನವಿ
ಈಗ ಬಹುತೇಕ ಸ್ಟಾರ್ ಮಕ್ಕಳು ಹೀಗೆ ಮಾಡಿದರೆ ಆಶ್ಚರ್ಯ ಆಗದೆ ಇದ್ದಿತೇ? ವಿಷಯ ಶ್ರೀದೇವಿ ಮಗಳು ಜಾಹ್ನವಿಯದು. ಕೇವಲ 1-2 ಚಿತ್ರಗಳಲ್ಲಷ್ಟೇ ನಟಿಸಿರುವ ಈಕೆ, ಈಗಲೇ ಸ್ಟಾರ್ ಗಿರಿಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾಳೆ. ಯಾವುದೋ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಈಕೆ, ಬಾಲಿವುಡ್ ನಲ್ಲಿ ನಾಯಕಿಯರ ಬ್ರಾಂಡ್ ವ್ಯಾಲ್ಯೂ ಕಡಿಮೆ ಆಗಿದೆ ಎಂದು ಗೊಣಗಿದಳು. ಅವರು ಹೆಚ್ಚು ಫೀಸ್ ಡಿಮ್ಯಾಂಡ್ ಮಾಡುವ ಹಾಗಿಲ್ಲ ಎಂದಳು. ಈ ಮಾತೇನೋ ಒಂದು ಹಂತದವರೆಗೆ ಸರಿ. ಆದರೆ ತನ್ನನ್ನು ತಾನು ಇನ್ನೂ ಸ್ಟಾರ್ ಆಗಿಸಿಕೊಳ್ಳದ ಈ ಮಿನಿಸ್ಟಾರ್, ಈಗಲೇ ಇಂತಹ ಸ್ಟೇಟ್ ಮೆಂಟ್ಸ್ ಕೊಡುವ ಅಗತ್ಯವೇನು? ಇತ್ತೀಚೆಗೆ ಈಕೆ ತಿರುಪತಿಗೆ `ಬರಿಗಾಲಲ್ಲಿ' ಮೆಟ್ಟಿಲು ಹತ್ತಿ ದರ್ಶನ ಪಡೆದಳು ಎಂಬುದೂ ಸುದ್ದಿಯಾಯ್ತು. ಹಲೋ ಮರಿ ಸ್ಟಾರ್, ಈಗಲೇ ಇದೆಲ್ಲ ಬೇಕಾ ಎಂಬುದು ಹಿತೈಷಿಗಳ ಅಂಬೋಣ.
ಇವರು ಒಂದಾದರೆ ಜನರಿಗೆ ಏನಂತೆ?
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಇಬ್ಬರೂ ಲಿವ್ ಇನ್ ರಿಲೇಶನ್ ಗೆ ಬಂದು ಬಹಳ ದಿನಗಳಾಗಿವೆ. ಆದರೆ ಬೇಹುಗಾರರು ಈ ಜೋಡಿಯನ್ನು ಕಿಚಾಯಿಸುವುದನ್ನು ಇನ್ನೂ ಬಿಟ್ಟಿಲ್ಲ. ಎರಡು ಸ್ವತಂತ್ರ ಹಕ್ಕಿಗಳು ತಮ್ಮಷ್ಟಕ್ಕೆ ತಾವು ಎಂಜಾಯ್ ಮಾಡುತ್ತಿದ್ದರೆ ಅದನ್ನು ಕಂಡು ಅಸೂಯೆಪಡುವುದೇಕೆ? ಈ ಜೋಡಿ ಕಂಡು ಜನ ಒಂದು ಪಾಠ ಕಲಿಯಬೇಕಿದೆ, ಒಲ್ಲದ ದಾಂಪತ್ಯದಲ್ಲಿ ಅವಳು ಉಸಿರುಗಟ್ಟಿ ಬಾಳುವ ಬದಲು ಹೊಸ ಬಾಳಿಗೆ ತೊಡಗಲು ಮುಂದಾಗಿದ್ದಾಳೆ. ಅವಳಿಗಿಂತ ಅವನು ಕಿರಿಯ, ಆದರೇನಂತೆ? ಜೋಡಿ ಚೆನ್ನಾಗಿದೆ ಅನ್ನುವುದು ಮುಖ್ಯ. ಸದಾ ಪೂಜೆ ಪುನಸ್ಕಾರಗಳಲ್ಲಿ ಮುಳುಗಿರುವ ಹೆಂಗಸರು ಮಲೈಕಾಳಿಂದ ಫಿಟ್ನೆಸ್ ಹಾಗೂ ಪ್ರೇಮಕ್ಕೆ ವಯಸ್ಸು, ಧರ್ಮದ ಹಂಗಿಲ್ಲ ಎಂದು ಫ್ರೀಬರ್ಡ್ ಆಗಿರುವ ಅರ್ಜುನ್ ನನ್ನು ಕಂಡು ತರುಣರು ಕಲಿಯಬೇಕಿದೆ. ಗಾಸಿಪ್ ಮಾಡುವ ಹೆಂಗಸರು ಮಲೈಕಾಳಿಂದ ಫಿಟ್ನೆಸ್ ಕಲಿತರೆ ತಪ್ಪೇನು?