- ರಾಘವೇಂದ್ರ ಅಡಿಗ ಎಚ್ಚೆನ್. 

ಪೋಷಕ ಕಲಾವಿದರು ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಖದೀಮ ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರದ ತುಂಬಿದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಶಿವೇಶು ಪ್ರೊಡಕ್ಷನ್ ಅಡಿಯಲ್ಲಿ ಅಮೇರಿಕಾ ನಿವಾಸಿ ಅನಿವಾಸಿ ಭಾರತೀಯ ಟಿ.ಸಿವಕುಮಾರನ್ ಬಂಡವಾಳ ಹೂಡಿದ್ದಾರೆ. ಯಶಸ್ವಿನಿ.ಆರ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಯಿ ಪ್ರದೀಪ್ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕಥೆಯಲ್ಲಿ ನಾಯಕನಾಗಿ ಚಂದನ್, ನಾಯಕಿಯಾಗಿ ಅನುಷಾಕೃಷ್ಣ ಅಭಿನಯಸಿದ್ದಾರೆ.

image-9

image-8

ನಾಯಕ ಚಂದನ್ ಹೇಳುವಂತೆ, ಜಿಮ್ ತರಭೇತಿದಾರನಾಗಿದ್ದ ನನಗೆ ಗೆಳೆಯರು ಹೀರೋ ಆಗು ಅಂತ ಹುರಿದುಂಬಿಸಿದರು. ಆಗ ಮೊದಲು ನಿರ್ಮಾಪಕರನ್ನು ಕ್ಯಾಚ್ ಹಾಕಿಕೊಂಡಿದ್ದೆ ಮೊದಲ ಸಾಧನೆ ಎನ್ನಬಹುದು. ನಟನೆಯ ಅನುಭವ ಇಲ್ಲದಿದ್ದರೂ, ದೇವರ ದಯೆಯಿಂದ ಸೆಟ್‌ನಲ್ಲಿ ನಿರ್ದೇಶಕರು ಹೇಳಿಕೊಟ್ಟಂತೆ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಅವರೇ ನನಗೆ ಗುರುಗಳು ಎಂದರು.

image-10

ರಿಯಲ್‌ದಲ್ಲಿ ರಂಗಕರ್ಮಿಯಾಗಿರುವ ನಾಯಕಿ ಅನುಷಾಕೃಷ್ಣ ರೀಲ್‌ದಲ್ಲೂ ಅದೇ ಪಾತ್ರವನ್ನು ನಿಭಾಯಿಸಿದ್ದಾರಂತೆ. ತಾರಾಗಣದಲ್ಲಿ ಶೋಭರಾಜ್, ಗಿರಿಜಾಲೋಕೇಶ್, ಮುಖ್ಯಮಂತ್ರಿ ಚಂದ್ರು, ವಿ.ಮನೋಹರ್, ಯಶ್‌ಶೆಟ್ಟಿ, ಮಿಮಿಕ್ರಿ ದಯಾನಂದ್, ಶಿವಕುಮಾರ್‌ಆರಾಧ್ಯ, ಅರಸು ಮುಂತಾದವರು ನಟಿಸಿದ್ದಾರೆ.

image-11

ವ್ಯವಹಾರದಲ್ಲಿ ಅಭಿವೃದ್ದಿ ಹೊಂದಿದ ಮೇಲೆ ಬೇರೆ ಏನಾದರೂ ಮಾಡಬೇಕು ಅಂತ ಯೋಚಿಸಿದ್ದೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂಬುದು ಸಹ ನಿರ್ಮಾಪಕಿ ಯಶಸ್ವಿನಿ.ಆರ್ ಸಂತಸದ ನುಡಿ.

image-13

ಚಿತ್ರವು ಮಾಸ್ ಕಂಟೆಂಟ್ ಇರುವುದರಿಂದ ನಿರ್ಮಾಪಕರ ಬೇಡಿಕೆಯಂತೆ ಬಿ,ಸಿ ಕೇಂದ್ರಗಳಲ್ಲಿ ಹೆಚ್ಚು ಬಿಡುಗಡೆ ಮಾಡಲಾಗುತ್ತಿದೆ ಎಂಬುದರ ಮಾಹಿತಿಯನ್ನು ಸಚಿತ್ ಫಿಲಂಸ್‌ನ ವೆಂಕಟ್‌ಗೌಡ ಮಾಹಿತಿ ನೀಡಿದರು.

image-14

ಕವಿರಾಜ್-ಪ್ರಮೋದ್‌ಮರವಂತೆ-ಭರ್ಜರಿ ಚೇತನ್‌ಕುಮಾರ್ ಸಾಹಿತ್ಯದ ಗೀತೆಗಳಿಗೆ ಶಶಾಂಕ್‌ಶೇಷಗಿರಿ ಸಂಗೀತ ಸಂಯೋಜಿಸುವರ ಜತೆಗೆ ಒಂದು ಹಾಡು ಬರೆದು, ಗಾಯನ ಅಲ್ಲದೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಛಾಯಾಗ್ರಹಣ ನಾಗಾರ್ಜುನ.ಆರ್.ಡಿ, ಸಂಕಲನ ಉಮೇಶ್.ಆರ್.ಬಿ, ಕ್ರಿಯೇಟೀವ್ ಹೆಡ್ ಭೀಮೇಶ್‌ಬಾಬು, ಸಾಹಸ ವಿಕ್ರಂಮೋರ್-ಮಾಸ್‌ಮಾದ ಅವರದಾಗಿದೆ. ಅಂದಹಾಗೆ ಸಿನಿಮಾವು ಏಪ್ರಿಲ್ ಮೂರನೇ ವಾರದಂದು ಸುಮಾರು 120 ಸೆಂಟರ್‌ಗಳಲ್ಲಿ ತೆರೆ ಕಾಣುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ