ಜಾಗೀರ್ದಾರ್*

ಕಲೆಗೆ ಯಾವುದೇ ಜಾತಿ ,ಧರ್ಮ, ಭಾಷೆಗಳ ಬೇಧವಿಲ್ಲದೆ , ಸಪ್ತ ಸ್ವರಗಳಿಗೆ ಎಲ್ಲರೂ ಸರಿಸಮರು ಎಂಬ ಅಚಲವಾದ ಸಿದ್ಧಾಂತವನ್ನು ಹೊಂದಿರುವ ಸಂಸ್ಥೆ - ಲಹರಿ ಹಾಗೂ MRT Music ಸಂಸ್ಥೆ.*

*ಲಹರಿ ಸಂಸ್ಥೆ ಕಳೆದ 50 ವರುಷಗಳಿಂದ ನಾಡಿನ ಸಂಗೀತ, ಸಾಹಿತ್ಯ, ಸಂಸ್ಕೃತಿಯನ್ನು, ಸಿನಿಮಾಗಳನ್ನು ಪೋಷಿಸಿ , ದೇಶದ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಿರುವ ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ಪ್ರಮುಖ ಆಡಿಯೋ ಸಂಸ್ಥೆ.*

ಈ ಸುವರ್ಣ ಮಹೋತ್ಸವವನ್ನು ಆಚರಿಸಲು ಲಹರಿ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಯನ್ನು ರೂಪಿಸಿದೆ. ಅದುವೇ *" ಲಹರಿ - MRT ಮ್ಯೂಸಿಕ್ - ಪ್ರಯೋಗ್ ಇಂಡಿಯನ್ ಕ್ಲಾಸಿಕಲ್ ಕಾನ್ಸರ್ಟ್".*

*ಪ್ರಯೋಗ್ ಸ್ಟುಡಿಯೋ, Only ಕನ್ನಡ OTT* ಸಹಯೋಗದೊಂದಿಗೆ ಮುಂದಿನ *ಒಂದು ವರುಷದಲ್ಲಿ ಹತ್ತು ಸಾವಿರ - 10,000* ಹಾಡುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಕಲಾರಸಿಕರಿಗೆ *ಲಹರಿ ಮ್ಯೂಸಿಕ್ ,MRT ಮ್ಯೂಸಿಕ್ youtube ಚಾನೆಲ್ ಹಾಗೂ ಓನ್ಲಿ ಕನ್ನಡ OTT ವಾಹಿನಿ* ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಮೂಲಕ *ನಾಡಿನ ನಗರದ ಪ್ರದೇಶದಿಂದ ಹಿಡಿದು ಕಾಡಿನ ಮಧ್ಯದಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ* , ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಲಾಗುತ್ತಿದೆ.

ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ದೇಶದ ಮೂಲೆ ಮೂಲೆಯಿಂದ ಆಯ್ಕೆಮಾಡಿ ಅವರ ಕಲೆಯನ್ನು ಅನಾವರಣಗೊಳಿಸುವ ಮಹತ್ತರ ವೇದಿಕೆ ಯನ್ನು ಸೃಷ್ಟಿ ಮಾಡಿದ್ದಾರೆ.

ದೇಶದ ಶ್ರೀಮಂತ ಕಲೆಗಳಾದ *ಶಾಸ್ತ್ರೀಯ ಸಂಗೀತ, ಸಾಹಿತ್ಯ, ಭಾವಗೀತೆ, ಭಕ್ತಿ ಗೀತೆ, ಜನಪದ ಗೀತೆ, ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ಹರಿಕಥೆ, ಯಕ್ಷಗಾನ , ನಾಟಕ , ಕಿರುಚಿತ್ರಗಳು* ಹಾಗೂ ಎಲ್ಲಾ ಪ್ರಕಾರದ ನಮ್ಮ *ಭಾರತೀಯ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಪೋಷಿಸಿ ಮುಂದಿನ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.*

ಈಗಾಗಲೇ ಕಳೆದ ತಿಂಗಳು ಪ್ರಯೋಗ್ ಸ್ಟುಡಿಯೋ ಸಹಯೋಗದೊಂದಿಗೆ ಒಂದು ಸಾವಿರದ ಐನೂರಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಯನ್ನು ರೆಕಾರ್ಡಿಂಗ್ ಮಾಡಿ ಸುಮಾರು ಇನ್ನೂರಕ್ಕೂ ಹೆಚ್ಚು ಹೊಸ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ವೇದಿಕೆಯನ್ನು ನೀಡಿದ್ದಾರೆ.*

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ದೇಶದ ಹಿರಿಯ ಹಲವಾರು ಕಲಾವಿದರು ಈ ಯೋಜನೆ ಹಾಗೂ ಯೋಚನೆಗೆ ತಮ್ಮ ಸಹಯೋಗವನ್ನು ಸೂಚಿಸಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಮುಂದೆ ಬಂದಿದ್ದಾರೆ.

ಈ ಮಹತ್ತರವಾದ ಕಾರ್ಯಕ್ರಮದಿಂದ ಹಲವಾರು ಕಲಾವಿದರು, ತಂತ್ರಜ್ಞರು, ಬರಹಗಾರರು, ಸಂಗೀತ ನಿರ್ದೇಶಕರು ಬೆಳಕಿಗೆ ಬರಲಿದ್ದಾರೆ* ಎಂದು *ಲಹರಿ ಮ್ಯೂಸಿಕ್ ಹಾಗೂ MRT ಮ್ಯೂಸಿಕ್ ಸಂಸ್ಥೆಯ ನಿರ್ದೇಶಕರಾದ ಲಹರಿ ವೇಲು ಅವರು ಹೇಳಿದ್ದಾರೆ.*

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ