ಕನ್ನಡದ ಚಿತ್ರರಂಗದ ‘ಕಿಸ್’ ಖ್ಯಾತಿಯ ನಟಿ ಶ್ರೀಲೀಲಾ ಈಗ ಸೌತ್ ಸಿನಿ ದುನಿಯಾದ ಬಹುಬೇಡಿಕೆಯ ನಟಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ನಟಿಸಿ ನಟನೆಗೆ ಸೈ ಎನಿಸಿಕೊಂಡಿದ್ದಾರೆ. ಅದೆಂಥದ್ದೇ ಪಾತ್ರವಿದ್ರೂ ಸರಿ ನಿರಾಳವಾಗಿ ಅಭಿನಯಿಸಿದ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಮಾದಕ ನಟಿಯಾಗಿಯೂ.. ಮನಮೋಹಕ ಬೆಡಗಿ ಆಗಿಯೂ ಜನಮೆಚ್ಚುವಂತೆ ನಟಿಸಿ ಹಲವು ಸಿನಿಮಾಗಳ ಸೂಪರ್ಹಿಟ್ಗೆ ಕಾರಣರಾಗಿದ್ದಾರೆ.
ಅಷ್ಟೇ ಅಲ್ಲ, ‘ಪುಷ್ಪ 2’ರಲ್ಲಿ ತಮ್ಮ ಅದ್ಭುತ ಡ್ಯಾನ್ಸ್ನಿಂದಲೇ ಎಲ್ಲರ ಫೇವರೇಟ್ ಆಗಿದ್ದಾರೆ. ವಿಶೇಷ ಅಂದ್ರೆ, ಶ್ರೀಲೀಲಾ ಹಾಕೋ ಹೆಜ್ಜೆಗೆ ಆ ಚಿತ್ರದ ನಾಯಕ ಕೂಡ ಹೆಜ್ಜೆ ಹಾಕೋಕೆ ಒಮ್ಮೊಮ್ಮೆ ಕಷ್ಟ ಪಡೋದುಂಟು. ಅಷ್ಟರ ಮಟ್ಟಿಗೆ ಫೇಮಸ್ ಆಗಿರೋ ನಟಿ ಶ್ರೀಲೀಲಾ ಈಗ ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ ಮಾಡಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿರೋದ್ರಿಂದ ಟೈಮೇ ಇಲ್ಲದಂತಾಗಿದೆ.
ಟಾಲಿವುಡ್ನಲ್ಲಿ ಟಾಪ್ ಹೀರೋಯಿನ್ಗಳಲ್ಲಿ ಶ್ರೀಲೀಲಾ ಕೂಡ ಒಬ್ಬರು. ಇಂಥಾ ನಟಿ ವಿರುದ್ಧ ನಿರ್ಮಾಪಕರೊಬ್ಬರು ಕಿಡಿಕಿಡಿ ಆಗಿದ್ದಾರೆ. ಅದ್ರಲ್ಲಿ ಒಬ್ಬ ನಿರ್ಮಾಪಕರು ನಟಿ ವಿರುದ್ಧ ತೆಲುಗು ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ಕೊಡೋಕೆ ಮುಂದಾಗಿದ್ದಾರೆ. ಹಾಗಾದ್ರೆ, ನಟಿ ಶ್ರೀಲೀಲಾ ಅಂಥಾ ತಪ್ಪೇನು ಮಾಡಿದ್ರು..?
ತೆಲುಗಿನ ಮಾಸ್ ಮಹರಾಜ ಅಂತಾನೇ ಖ್ಯಾತಿ ಆಗಿರೋ ನಟ ರವಿತೇಜಗೆ ಶ್ರೀಲೀಲಾ ಅಂದ್ರೆ ಒಂದು ರೀತಿಯ ಲಕ್ಕಿ ಹೀರೋಯಿನ್ ಅಂತೆ. ಹಾಗಾಗೇ ಅವರ ನಟನೆಯ ‘ಮಾಸ್ ಜಾತರ’ ಹೆಸರಿನ ಸಿನಿಮಾದಲ್ಲಿ ಶ್ರೀಲೀಲಾ ಆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಬಹುತೇಕ ಮುಕ್ತಾಯದ ಹಂತದಲ್ಲಿದೆ. ನಟಿ ಶ್ರೀಲೀಲಾ ಕೂಡ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡು ಮನೋಜ್ಞವಾಗಿ ಅಭಿನಯಿಸುತ್ತಿದ್ದಾರೆ. ಆದರೆ, ಶ್ರೀಲೀಲಾ ಕೈಯಲ್ಲಿ ಐದಾರು ಸಿನಿಮಾಗಳಿವೆ. ಆ ಸಿನಿಮಾಗಳಿಗೂ ಶೆಡ್ಯೂಲ್ ಕೊಟ್ಟಿರೋದ್ರಿಂದ ‘ಮಾಸ್ ಜಾತರ’ದ ಉಳಿದ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋಕೆ ಸಾಧ್ಯವಾಗ್ತಿಲ್ಲ.
ನಿರ್ಮಾಪಕ ಭಾನು ಬೋಗವರ್ಪು ಹೇಳುವ ಪ್ರಕಾರ ‘ಮಾಸ್ ಜಾತರ’ದ ಶೂಟಿಂಗ್ ಇನ್ನು ಕೇವಲ 20 ದಿನವಷ್ಟೇ ಬಾಕಿ ಇರೋದು. ಈಗ ನಾವು ಬೇರೆ ಹೀರೋಯಿನ್ ಕರೆದು ಶೂಟ್ ಮಾಡಿಸೋಕೆ ಆಗಲ್ಲ. ಹೀಗಾಗಿ ಎಷ್ಟೇ ಬೇಡಿಕೊಂಡ್ರೂ ನಟಿ ಶ್ರೀಲೀಲಾ ಡೇಟ್ ಕೊಡ್ತಿಲ್ಲ. ಹಾಗಾಗಿ ನಿರ್ಮಾಪಕರ ಸಂಘಕ್ಕೆ ದೂರು ಕೊಡೋದೇ ಅಂತಿಮ ದಾರಿ ಅಂತಾ ಚಿಂತೆ ಮಾಡ್ತಿದ್ದಾರೆ.
ನಟ ರವಿತೇಜ ಜೊತೆ ನಟಿ ಶ್ರೀಲೀಲಾ ಈ ಹಿಂದೆ ಧಮಾಕ ಸಿನಿಮಾದಲ್ಲಿ ನಾಯಕಿ ಆಗಿ ನಟಿಸಿದ್ದರು. ಅದು ತೆಲುಗು ಚಿತ್ರರಂಗದಲ್ಲಿ ಸೂಪರ್ಹಿಟ್ ಆಗಿತ್ತು. ಇದೀಗ ‘ಮಾಸ್ ಜಾತರ’ ಕೂಡ ಹಿಟ್ ಸಿನಿಮಾ ಆಗಲಿದ್ದು, ಚಿತ್ರದ ಶೂಟಿಂಗ್ ಬಹುಬೇಗ ಮುಗಿಸಬೇಕೆಂಬ ಆಸೆ ನಿರ್ಮಾಪಕರದ್ದಾಗಿದೆ.