ಜಾಗೀರ್ದಾರ್*

ಕಿರೀಟಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’. ಇತ್ತೀಚಿಗೆ ಬಿಡುಗಡೆ ದಿನಾಂಕ ಘೋಷಣೆ‌ ಮಾಡಿದ್ದ ಚಿತ್ರತಂಡವೀಗ ಮೊದಲ ಹಾಡು ರಿಲೀಸ್ ಮಾಡಿದೆ. ಕನ್ನಡ ತೆಲುಗು ಭಾಷೆಯಲ್ಲಿ ಆದಿತ್ಯ ಮ್ಯೂಸಿಕ್ ಚಾನೆಲ್ ನಲ್ಲಿ ಸಾಂಗ್ ಅನಾವರಣಗೊಂಡಿದೆ.

ಜೂನಿಯರ್ ಚಿತ್ರದ ಮೊದಲ ಲೆಟ್ಸ್ ಲಿವ್ ದಿಸ್ ಮೊಮೆಂಟ್ ಎಂಬ ಲಿರಿಕಲ್ ವಿಡಿಯೋ ರಿಲೀಸ್ ಈವೆಂಟ್ ಅನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಿತು. ಸಮಾಂಭಕ್ಕೆ ನಟ ರವಿಚಂದ್ರನ್, ಬಾಹುಬಲಿ ಹಾಗೂ ಆರ್ಆರ್ಆರ್ ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಕೆ.ಕೆ.ಸೆಂಥಿಲ್ ಕುಮಾರ್, ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್, ನಿರ್ಮಾಪಕ ರಜನಿ ಕೊರಾಪಾಟಿ, ನಿರ್ದೇಶಕ ರಾಧಾಕೃಷ್ಣ ಸೇರಿ ಚಿತ್ರತಂಡ ಸಾಕ್ಷಿಯಾಗಿತ್ತು.

live

ಈ ವೇಳೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, ರಾಧಾಕೃಷ್ಣ ಅವರ ಹತ್ತಿರ ಒಳ್ಳೆ ಗುಣವಿದೆ. ಅವರು ಕಥೆ ಹೇಳುವಾಗ ಕಿವಿಯಲ್ಲಿ ಪಿಸುಗುಟ್ಟಿದ ರೀತಿ ಇದೆ.‌ ಆ ಕಥೆ ಮನಸ್ಸು ತಟ್ಟುತ್ತದೆ. ಇದು ನಿಮಗೆಲ್ಲಾ ಜೂನಿಯರ್. ನನಗೆ ಮಾತ್ರ ಇದು ಮೈ ಜೂನಿಯರ್. ಇದು ಲಾಂಗ್ ಜರ್ನಿ. ಡಬ್ ಮಾಡುವಾಗ ನೋಡಿದಾಗ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಎಷ್ಟು ಟೈಮ್ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ಪ್ರೇಕ್ಷಕರನ್ನು ಕುರಿಸುತ್ತದೆ ಎನ್ನುವುದು ಮುಖ್ಯ. ಈ ಹುಡ್ಗ ಕಥೆ ಆರಿಸಿಕೊಳ್ಳುವ ಧೈರ್ಯ ಇದೆ. ತಾನು ಹೀರೋ ಆಗಬೇಕು. ಪಾತ್ರ ಮೇಕಿಂಗ್ , ಮೂಲಕ ಹೀರೋ ಆಗಬೇಕು ಎನ್ನುವುದು ಕಿರೀಟಿಯಲ್ಲಿ ಇದೆ.‌ ನಾನು ಮರೆಯುವುದಲ್ಲ. ಈ ರೀತಿ ಸ್ಟ್ರಿಪ್ ಆಯ್ಕೆ ಮಾಡಿಕೊಳ್ಳುವುದು ಹೊಸಬರು ತುಂಬಾ ಕಡಿಮೆ ಎಂದರು.

ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಕಿರೀಟಿ ಒಳ್ಳೆ ಕಥೆ ಆಯ್ಕೆ ಮಾಡಿದ್ದಾರೆ.‌ ಎಮೋಷನಲ್ ಕಥೆ ಇದೆ. ಲವ್ ಸ್ಟೋರಿ, ಎಮೋಷನಲ್ ಸಿನಿಮಾಗಳ ಮೂಲಕ ನನ್ನ ಜರ್ನಿ ಶುರುವಾಗಿದೆ. ಈ ಹಾಡಿಗೆ ಶ್ರೀಮಣಿ ಸರ್ ತೆಲುಗು ಲಿರಿಕ್ಸ್ ಬರೆದಿದ್ದಾರೆ. ಪವನ್ ಭಟ್ ಕನ್ನಡದಲ್ಲಿ ಹಾಡು ಹಾಡಿದ್ದಾರೆ. ಇಡೀ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಸೆಂಥಿಲ್ ಸರ್ ಈ ಚಿತ್ರಕ್ಕೆ ಕೆಲಸ ಮಾಡಿದ್ದು, ಈ ಚಿತ್ರದ ಬಲ ಅವರು ಎಂದರು.

live 1

ನಟ ಕಿರೀಟಿ ಮಾತನಾಡಿ, ಸಿನಿಮಾ ಮೂರು ವರ್ಷ ತಡವಾಗಿದೆ. ಅದಕ್ಕೆ ಕಾರಣ ಫೈಟ್ ಮಾಡುವಾಗ ನನಗೆ ಬೆನ್ನು ಇಂಜೂರಿ ಆಗಿತ್ತು. ಅದು ಹೊರತು ಬೇರೆ ಕಾರಣವಿಲ್ಲ. ಸೆಂಥಿಲ್ ಸರ್, ಡಿಎಸ್ ಪಿ ಸರ್, ವಿಜಯ್ ಸರ್ ಗೆ ಧನ್ಯವಾದ. ರವಿ ಸರ್ ಜೊತೆ ಇಪ್ಪೈದು ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಪುಣ್ಯ. ಅವರ ಜೊತೆ ತುಂಬಾ ಕಲಿತುಕೊಂಡೆ. ಶ್ರೀಲೀಲಾ, ಜೆನಿಲಿಯಾ ಚಿತ್ರದಲ್ಲಿ ಒಳ್ಳೆ ಮಾತ್ರ ಮಾಡಿದ್ದಾರೆ.

ನಿರ್ದೇಶಕ ರಾಧಾಕೃಷ್ಣ ಮಾತನಾಡಿ, ದೊಡ್ಡ ಲೆಜೆಂಡರಿಗಳು ಕೆಲಸ ಮಾಡಿರುವುದು ಜೂನಿಯರ್ ಸೇಫ್ ಎಂದರ್ಥ. ದೇವಿ ಸರ್ ಜೊತೆ ಕೆಲಸ ಮಾಡಿರುವುದು ನೆನಪಿನಲ್ಲಿ ಉಳಿಯುವಂತಹದ್ದು, ಸೆಂಥಿಲ್ ಸರ್, ಸಾಯಿ ಸರ್ ಹಾಗೂ ದೇವಿ ಸರ್ ಕೆಲಸ ಮಾಡಿರುವುದು ವಿಶೇಷ. ಚಿತ್ರದ ಪ್ರತಿ ಫ್ರೇಮ್ ಕೂಡ ಸ್ಪೆಷಲ್ ಅಗಿದೆ‌ ಎಂದು ತಿಳಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ