ಜೀವನ ಎಂಬುದು ಏರಿಳಿತ ತುಂಬಿದ ಜೀವನದಿಯ ಪ್ರವಾಹ. ನೆನಪು, ಅನುಭವಗಳ ನಿಲ್ಲದ ನಿತ್ಯ ನಿರಂತರ ಪಯಣ. ಇದರಲ್ಲಿ ಸುಖದುಃಖ, ಸಿಹಿಕಹಿ ಸಂಘರ್ಷಗಳ ಮಿಶ್ರಣ ಎಲ್ಲರಿಗೂ ಕಟ್ಟಿಟ್ಟ ಬುತ್ತಿ. ನಮ್ಮ ನಡುವೆ ನಡೆಯುವ ಪ್ರತಿಯೊಂದು ಘಟನೆ ಅದು ಸಕಾರಾತ್ಮಕ ಯಾ ನಕಾರಾತ್ಮಕವೇ ಆಗಿರಲಿ, ಎಲ್ಲರಿಗೂ ಹೊಸ ಅನುಭವ, ಅನುದಿನದ ಪಾಠ ಆಗಲಿದೆ. ಸಮಯ ಇದನ್ನು ಸದಾ ಮುನ್ನಡೆಸುತ್ತದೆ. ಈ ಜೀವನಾನುಭವ ನಮ್ಮ ಮುಂದೆ ಬೆಳ್ಳಿತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಮೂಡಿಬಂದಾಗ, ಅದಕ್ಕೆ ಪ್ರತಿಸ್ಪಂದನೆ ಹೇಗಿರುತ್ತದೆ? ಬನ್ನಿ, ವಿವರವಾಗಿ ತಿಳಿಯೋಣ.....!

2_Kannada-Movie-'Landlord'

ಕನ್ನಡ : ಲ್ಯಾಂಡ್ಲಾರ್ಡ್

ದುನಿಯಾ ವಿಜಯ್‌ ನಟನೆಯ `ಲ್ಯಾಂಡ್‌ ವಾರ್ಡ್‌' ಸಿನಿಮಾ ಜನವರಿ 23ಕ್ಕೆ ತೆರೆಕಂಡು ಇಪ್ಪತ್ತೈದು ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನದೊಂದಿಗೆ ಮುಂದುವರಿಯುತ್ತಿದೆ. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದ ಸಿನಿಮಾ ಗಣ್ಯರ ಮೆಚ್ಚುಗೆ ಪಡೆದಿದೆ. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ಸಿಕ್ಕಿದೆ. ಚಿತ್ರರಂಗದ ಯಶಸ್ವಿ ಕಥೆಗಾರ ಜಡೇಶ್‌ ಹಂಪಿ ನಿರ್ದೇಶನ ಮಾಡಿರುವ ಈ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಕಥೆಯನ್ನು ಒಳಗೊಂಡಿದೆ. ಈ ಹಿಂದೆ ಬ್ಲಾಕ್‌ ಬಸ್ಟರ್‌ ಹಿಟ್ ಆದ `ಕಾಟೇರ' ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್‌ ಸುಧೀರ್‌ ಜೊತೆ ಜಡೇಶ್‌ ಕೈ ಜೋಡಿಸಿದ್ದರು.

ಈ ಸಿನಿಮಾದಲ್ಲಿ ಸಹ `ಕಾಟೇರ' ಸಿನಿಮಾದ ಶೇಡ್‌ ಕಾಣಿಸಿಕೊಳ್ಳುತ್ತದೆ. `ಲ್ಯಾಂಡ್‌ ಲಾರ್ಡ್‌' ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಭೂಮಾಲೀಕರ ದರ್ಪದ ಕಥೆ. ಜೀತದಾಳುಗಳ ನೋವಿನ ಕಥೆ. ಭೂಮಾಲೀಕರ ದೌರ್ಜನ್ಯಕ್ಕೆ ಒಳಗಾಗು ಕುಟುಂಬವೊಂದು ಅದನ್ನು ಮೆಟ್ಟಿ ನಿಲ್ಲುವ ಜೊತೆಗೆ ತಮ್ಮಂತೆ ಸಂತ್ರಸ್ತರಾದರಲ್ಲಿ ಶಕ್ತಿ, ಮಾಹಿತಿ ತುಂಬುವ ಕಥೆ ಇಲ್ಲಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಬಡವನ ಕಥೆ ಇದೆ. ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾದ ಜನರ ಕಹಾನಿ ಇದೆ. ರೆಟ್ರೋ ಕಾಲದ ಕಥೆಯನ್ನು ಪ್ರೆಕ್ಷಕರ ಮುಂದೆ ಇಡಲಾಗಿದೆ. ದುನಿಯಾ ವಿಜಯ್‌ ಇಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ, ತಮ್ಮ ಇತರೆ ಕೆಲಸ ಸಿನಿಮಾಗಳಿಗಿಂತಲೂ ಭಿನ್ನವಾದ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ ನಟಿಸಿದ್ದು, ರಾಜ್‌ ವಿಲನ್‌ ಆಗಿಯೂ ಸಖತ್‌ ಗಮನ ಸೆಳೆಯುತ್ತದೆ.

ಇಡೀ ಊರಿಗೆ ಊರೇ ದಣಿಗಳ ಒಡೆತನದಲ್ಲಿ ಇರುವಾಗ, ತನ್ನ ಪಾಲಿಗೂ ಸ್ವಂತದ ತುಂಡು ಭೂಮಿ ಇರಬೇಕು ಎಂಬುದು ಬಡವನ ಆಸೆ. ಆದರೆ ಬಡವರಿಗೆ ಭೂಮಿ ಕೊಟ್ಟರೆ ಅವರು ಕೂಡ `ಲ್ಯಾಂಡ್‌ ಲಾರ್ಡ್‌' ಎನಿಸಿಕೊಳ್ಳುತ್ತಾರೆ. ಅದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬುದು ದಣಿಗಳ ವಾದ. ಹಾಗಾಗಿ, ಎಂದೆಂದಿಗೂ ಬಡವರಿಗೆ ಭೂಮಿಯ ಒಡೆತನ ಸಿಗಲೇಬಾರದು ಎಂದು ದಣಿಗಳು ಕುತಂತ್ರ ನಡೆಸುತ್ತಾರೆ. ಅಂಥ ದಣಿಗಳ ವಿರುದ್ಧ ಸಿಡಿದು ನಿಲ್ಲುವ ರಾಚಯ್ಯ ಉರ್ಫ್‌ ಕೊಡಲಿ ರಾಚಯ್ಯ ಎಂಬ ಬಡವನ ಕಥೆ ಈ ಸಿನಿಮಾದಲ್ಲಿ ಇದೆ. ಸಿನಿಮಾದಲ್ಲಿ ವಿಜಯ್‌ ಪುತ್ರಿ ರಿತನ್ಯಾ ಪೊಲೀಸ್‌ ಕಾನ್‌ ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ.  ಯುವ ನಟ ಶಿಶಿರ್‌ ಬೈಕಾಡಿ ಪಾತ್ರ ಗಮನ ಸೆಳೆಯುತ್ತಿದೆ. ರಾಕೇಶ್‌ ಅಡಿಗ ಸಹ ಸಖತ್‌ ವಿಲನಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ ಅದ್ಭುತ ನಟನೆ ಚಿತ್ರಕ್ಕೆ ಹೆಚ್ಚಿನ ಕಳೆ ತುಂಬಿದರೆ, ನಟಿ ರಚಿತಾ ರಾಮ್ ಪಾತ್ರ ಖಡಕ್‌ ಆಗಿದೆ. ಒಟ್ಟಾರೆಯಾಗಿ ಜಡೇಶ್‌ ದಮನಿತರ ಸಿಟ್ಟಿನ ಕಥೆಯನ್ನು ಆ್ಯಕ್ಷನ್‌ ಲೇಪದೊಂದಿಗೆ ತೆರೆಗೆ ತಂದು ಗೆದ್ದಿದ್ದಾರೆ. ಸಿನಿಮಾಕ್ಕೆ ಹೇಮಂತ್‌ ಗೌಡ ಮತ್ತು ಕೆವಿ ಸಂಪತ್‌ ಬಂಡವಾಳ ಹೂಡಿದ್ದಾರೆ. ಸಂಗೀತ ನೀಡಿರುವುದು ಅಜನೀಶ್‌ ಲೋಕನಾಥ್‌. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ