ಕಥೆ - ಪದ್ಮಾ ಮೂರ್ತಿ

ತಾನು ಗಂಡೆಂಬ ಅಹಂಕಾರದಲ್ಲಿ ಸತೀಶ ಬೇಕೆಂದೇ ಗುಣವತಿಯಾದ ನಿರ್ಮಲಾಳನ್ನು ಮದುವೆಯಾಗಲು ನಿರಾಕರಿಸಿದ. ಮುಂದೆ ಅವಳ ಎದುರು ಅವನು ಕೈಕಟ್ಟಿ ಕ್ಷಮೆ ಕೇಳುವಂತೆ ಕಾಲ ಬುದ್ಧಿ ಕಲಿಸಿದ್ದು ಹೇಗೆ.....?

``ಸತೀಶ.....  ಹುಡುಗಿ ಮನೆಯವರಿಗೆ ಏನೋ ಹೇಳೋದು....? ನೋಡು, ಈ ಸಂಬಂಧ ಒಪ್ಪಿಕೊ, ಹುಡುಗಿ ಚೆನ್ನಾಗಿದ್ದಾಳೆ.  ಜೊತೆಗೆ ಇಂಟರ್ಮೀಡಿಯೇಟ್‌ ಓದಿದ್ದಾಳೆ. ಹುಡುಗಿಗೆ ಮನೆ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಇದೆ. ಇನ್ನೇನು ಬೇಕು ಹೇಳು....? ಅವರಪ್ಪ ನನ್ನ ಹಳೆ ಸ್ನೇಹಿತ. ಕಂಡವರು, ಕೇಳಿದರು,'' ಎಂದು ತಂದೆ ಹೇಳಿದರು.

``ಅಪ್ಪಾ..... ನಾನು ಎಂಎಸ್ಸಿ ಫಸ್ಟ್ ಕ್ಲಾಸ್‌! ಮುಂದಕ್ಕೆ ಡಾಕ್ಟರೇಟ್‌ ಕೂಡ ಮಾಡಬೇಕೆಂಬ ಯೋಚನೆ ಇದೆ. ನನ್ನಂಥವನಿಗೆ ಒಂದು ಡಿಗ್ರಿಯನ್ನು ಸಹ ಮಾಡದ ದಡ್ಡ ಹುಡುಗಿಯನ್ನು ತಂದು ಕಟ್ಟುತ್ತೀರಾ....? ಖಂಡಿತಾ ಸಾಧ್ಯವಿಲ್ಲ! ಮಗ ಒಪ್ಪಲಿಲ್ಲ ಎಂದು ಹೇಳಿಬಿಡಿ,'' ಎಂದು ದುರ್ದಾನ ತೆಗೆದುಕೊಂಡನಂತೆ ಹೊರನಡೆದ ಸತೀಶ.

ಹುಡುಗಿ ಡಿಗ್ರಿ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಇಂತಹ ಒಳ್ಳೆಯ ಹುಡುಗಿಯನ್ನು ಬಿಡಬೇಕಲ್ಲ ಎಂದು ರಾಯರಿಗೆ ಕಸಿವಿಸಿಯಾಯಿತು.  `ಅವರವರ ಹಣೇಬರಹ ನಾವು ಏನು ಮಾಡಲು ಸಾಧ್ಯ....? ನನ್ನ ಪ್ರಯತ್ನ ನಾನು ಮಾಡಿದೆ. ನಮಗೆ ಆ ಹುಡುಗಿಯನ್ನು ಸೊಸೆಯಾಗಿ ಪಡೆಯುವ ಭಾಗ್ಯ ಇಲ್ಲ ಅಷ್ಟೇ.....' ಎಂದುಕೊಂಡು ನಿರಾಸೆಯಿಂದಲೇ ಸ್ನೇಹಿತ ಕೇಶವಮೂರ್ತಿಗೆ ಫೋನ್‌ ಮಾಡಿ ಮಗ ಹೇಳಿದ ವಿಷಯ ತಿಳಿಸಿ, ಕ್ಷಮಿಸುವಂತೆ ಕೇಳಿಕೊಂಡರು.

ವಿಷಯ ಮಗಳು ನಿರ್ಮಲಾಳಿಗೂ ತಿಳಿದಾಗ, ಅವಳಿಗೆ ಬಹಳ ಅವಮಾನವಾಯಿತು. ಬೇಡ ಅಂದಿದ್ದಕ್ಕೆ ಅಲ್ಲಾ.... ತನ್ನನ್ನು ದಡ್ಡಿ ಎಂದ ಕಾರಣಕ್ಕೆ.... `ಹೌದು ಹಳ್ಳಿಯಲ್ಲಿರುವ ಕಾರಣ ಕಾಲೇಜ್‌ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಇಷ್ಟರ ಮೇಲೆ ಓದಿನಲ್ಲಿ ನನಗೆ ಆಸಕ್ತಿ ಇದ್ದುದು ಅಷ್ಟಕಷ್ಟೇ.... ಆದರೆ ನಾನು ಯಾವುದರಲ್ಲಿ ಕಡಿಮೆ ಇದ್ದೆ, ಬುದ್ಧಿವಂತೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ನಾನೂ ರೂಪಸ್ಥೆ! ಒಳ್ಳೆಯ ಹುಡುಗಿ, ಕೇವಲ ಪದವಿ ಪಡೆದಿಲ್ಲ ಎಂಬ ಒಂದೇ ಕಾರಣಕ್ಕೆ ದಡ್ಡಿ ಎಂದು ನನ್ನ ಆತ್ಮಗೌರವಕ್ಕೆ ಅಮಾನಿಸಿದ್ದಾನೆ,' ಇದನ್ನು ನಿರ್ಮಲಾಳಿಂದ ಅರಗಿಸಿಕೊಳ್ಳಲಾಗಲಿಲ್ಲ.

ರಾತ್ರಿಯೆಲ್ಲಾ ನಿರ್ಮಲಾಳಿಗೆ ನಿದ್ದೆ ಬರಲಿಲ್ಲ, `ದಡ್ಡಿ'ಯನ್ನು ಕಟ್ಟಿಕೊಳ್ಳಲೇ ಎಂದ ಸತೀಶನ ಮಾತೇ ನೆನಪಾಗುತ್ತಿತ್ತು. ಕೊನೆಗೆ ಏನೋ ಒಂದು ನಿರ್ಧಾರಕ್ಕೆ ಬಂದವಳಂತೆ ಮಲಗಿ ನಿದ್ರಿಸಿದಳು. ಬೆಳಗ್ಗೆ ಎದ್ದ ತಕ್ಷಣ ತಂದೆ ಹತ್ತಿರ ಹೋಗಿ, ``ಅಪ್ಪಾ..... ನಾನು ಮುಂದೆ ಓದಲು ಕಾಲೇಜಿಗೆ ಸೇರಿಕೊಳ್ತೀನಿ. ಇದಕ್ಕೆ ನೀವು, ಅಮ್ಮಾ ಒಪ್ಪಲೇಬೇಕು. ನಗರದಲ್ಲೇ ಹಾಸ್ಟೆಲ್ ‌ನಲ್ಲಿದ್ದು, ವಿದ್ಯಾಭ್ಯಾಸ ಮುಂದುವರಿಸ್ತೀನಿ. ನೀವಿಬ್ಬರೂ ಇದಕ್ಕೆ ಒಪ್ಪಿಕೊಳ್ಳಲೇಬೇಕು. ಸಂತೋಷದಿಂದ ಆಶೀರ್ದಿಸಿ ನನ್ನನ್ನು ಓದಿಸಿ,'' ಎಂದಾಗ ಕೇಶವ ಮೂರ್ತಿಗಳು ತಬ್ಬಿಬ್ಬಾದರು. ಮಗಳ ಹಠಕ್ಕೆ ಗಂಡ ಹೆಂಡತಿ ಇಬ್ಬರೂ ಮಣಿಯಬೇಕಾಯಿತು. ಸತೀಶನ ಹೇಳಿದ, `ದಡ್ಡಿ' ಎಂಬ ಒಂದು ಮಾತು ಅವಳನ್ನು ಓದುವುದಕ್ಕೆ ರೊಚ್ಚಿಗೆಬ್ಬಿಸಿತ್ತು. ಮೂರು ವರ್ಷಗಳ ಕಾಲ ಓದಿ ಪದವಿ ಮುಗಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದುಕೊಂಡ ನಂತರ, ಮಾಸ್ಟರ್‌ ಡಿಗ್ರಿಯಲ್ಲೂ ಐದು ಚಿನ್ನದ ಪದಕ ಗಳಿಸಿದಳು. ಈ ಮಧ್ಯೆ ಮೂರ್ತಿಗಳು ಮಗಳನ್ನು ಮದುವೆಗೆ ಒತ್ತಾಯ ಮಾಡಲಾರಂಭಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ