ಪ್ರಕೃತಿಯ ತರಹವೇ ಮಾನವ ಸ್ವಭಾವ ಸಹ ವೈವಿಧ್ಯತೆಗಳಿಂದ ಕೂಡಿದೆ. ಹೀಗಾಗಿ ನಮ್ಮ ಜೀವನ ನಿಜಕ್ಕೂ ವಿಸ್ಮಯಗಳ ಭಂಡಾರ! ಹಾಗಾಗಿ ಈ ಪ್ರಪಂಚ ಉಜ್ವಲತೆ, ಸ್ವಪ್ನಲೋಕದ ಸಾಕಾರ ಆಗಿರುವಂತೆ ಅನೇಕ ನಿಗೂಢ, ನೋವು ತುಂಬಿದ ಕಥೆಗಳನ್ನೂ ಅಡಗಿಸಿಕೊಂಡಿದೆ. ಹೀಗಾಗಿ ಮಾನವ ಲೋಕದ ಈ ಸಿಹಿಕಹಿಯ ಸಾಕ್ಷಾತ್ಕಾರ ಆಗಬೇಕಾದರೆ ಬೆಳ್ಳಿತೆರೆಗಿಂತ ಚೆಂದದ್ದು ಬೇರೇನಿರಲು ಸಾಧ್ಯ.....?

02-Kannada-movie

ಕನ್ನಡ : ಫುಲ್ ಮೀಲ್ಸ್

ಸದ್ಯದ ಬದಲಾದ ಕಾಲಘಟ್ಟದಲ್ಲಿ ಸಿನಿಮಾವೊಂದು ಯಶಸ್ವಿಯಾಗಿ, ಥಿಯೇಟರ್‌ ಗಳಲ್ಲಿ ಸತತ 25 ದಿನ ಪೂರೈಸುವುದೊಂದು ವಿಶೇಷ! ಈ ಕ್ರೆಡಿಟ್‌ `ಫುಲ್ ಮೀಲ್ಸ್' ಚಿತ್ರಕ್ಕೆ ದಕ್ಕಿದೆ. ವೆಡ್ಡಿಂಗ್‌ ಫೋಟೋಗ್ರಾಫರ್‌ ನೊಬ್ಬನ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮದ ರಮ್ಯ ಚಿತ್ರವಿದು. ನಟ ಲಿಖಿತ್‌ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ಮಿಸಿರುವ, ಈ ಚಿತ್ರದ ಚಿತ್ರಕಥೆ, ನಿರ್ದೇಶನ ಎನ್‌. ವಿನಾಯಕ್‌ ರದು. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ, ಇಬ್ಬರೂ ನಾಯಕಿಯರಾಗಿ ಇಲ್ಲಿ ಮಿಂಚಿದ್ದಾರೆ.

ಯಾರದೋ ಮದುವೆಗೆ ಬಂದು ಪ್ರೀವೆಡ್ಡಿಂಗ್‌ ಫೋಟೋಶೂಟ್‌ ನಡೆಸುವ ಫೋಟೋಗ್ರಾಫರ್‌ ಮೇಲೆ ಮದುಮಗಳಿಗೆ ಆಕರ್ಷಣೆ ಮೂಡುತ್ತದೆ. ಈ ಕುತೂಹಕಾರಿ ಒನ್‌ ಲೈನ್‌ ಚಿತ್ರಣವೇ `ಫುಲ್ ಮೀಲ್ಸ್.' ಎಲ್ಲ ವಯೋಮಾನದವರಿಗೆ ಸೂಕ್ತವಾದ ಫ್ಯಾಮಿಲಿ ಎಂಟರ್‌ ಟ್ರೈನರ್‌. ಈ ಚಿತ್ರದಲ್ಲಿ ರೊಮ್ಯಾಂಟಿಕ್‌ ಕಾಮಿಡಿಯೇ ಹೈಲೈಟ್‌.

`ಸಂಕಷ್ಟಕರ ಗಣಪತಿ, ಅಬ್ಬಬ್ಬ, ಫ್ಯಾಮಿಲಿ ಪ್ಯಾಕ್‌' ಚಿತ್ರಗಳಲ್ಲಿ ನಾಯಕನಾಗಿದ್ದ ಲಿಖಿತ್‌ ಶೆಟ್ಟಿ ಇಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ! ತಮ್ಮ ಚೊಚ್ಚಲ ಚಿತ್ರದಲ್ಲೇ ನಿರ್ದೇಶಕ ಸೈ ಎನಿಸುತ್ತಾರೆ. ಗುರು ಕಿರಣ್‌ ಸಂಗೀತ ನಿರ್ದೇಶನವಿದೆ. ಇತರ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್‌ ಚಿಂಡೂರ್‌, ರವಿಶಂಕರ್‌ ಗೌಡ, ಚಂದ್ರಕಲಾ ಮೋಹನ್‌ ಜೊತೆಗೂಡಿದ್ದಾರೆ.

05-Malayalam-Movie-'Kalamkaval'

ಮಲೆಯಾಳಂ : ಕಲಂಕಾಲ್

ಈ ಚಿತ್ರ ಕೇರಳದ ಒಬ್ಬ ಕುಖ್ಯಾತ ಸೀರಿಯಲ್ ಕಿಲ್ಲರ್‌ ನ ಕುರಿತಾದ ಕ್ರೈಂ ಥ್ರಿಲ್ಲರ್‌. ಒಂಟಿ ಹೆಣ್ಣನ್ನು ಆಕ್ರಮಿಸುವ `ಸೈನೈಡ್ ಮೋಹನ್‌' ಎಂಬಾತನ ನೈಜ ಕಥೆಯಿಂದ ಪ್ರೇರಿತ.

ಇಲ್ಲಿ ಖ್ಯಾತ ನಟ ಮಮ್ಮುಟಿ ಕಿಲ್ಲರ್‌ ಹಾಗೂ ವಿನಾಯಗನ್‌ ಇನ್‌ ವೆಸ್ಟಿಗೇಟರ್‌. ಈ ಚಿತ್ರ ಯಾವ ರೀತಿ ಕ್ರೂರಿ ಕಾಮಪಿಪಾಸು ಹೆಣ್ಣುಮಕ್ಕಳನ್ನು ವಂಚಿಸಿ, ಕೊಲೆಗೈಯುತ್ತಾನೆ ಎಂದು ಹೇಳುತ್ತಾ ಸಾಗುತ್ತದೆ. ಚಿತ್ರದ ನಿರ್ದೇಶಕರು ಜಿತಿನ್‌ ಕೆ. ಬೋಸ್‌ (ಡೆಬ್ಯು) ಹಾಗೂ ಸಂಗೀತ ಮುಜೀಬ್‌ ಮಜೀದ್‌. ಸೈಕೋಪಾತ್‌ ನ ಸುತ್ತಾ ತಿರುಗುವ ಕ್ರೈಂನ್ನು ಇನ್‌ ಸ್ಪೆಕ್ಟರ್‌ ಮಾರ್ಮಿಕವಾಗಿ ಭೇದಿಸುವುದೇ ಕಥೆ. ತಾರಾಗಣದಲ್ಲಿ ಗಾಯತ್ರಿ ಅರುಣ್‌, ರಾಜೇಶ್‌ ವಿಜಯನ್‌, ಶೃತಿ ರಾಮಚಂದ್ರನ್‌, ಮಾಳವಿಕಾ ಮೆನನ್‌ ಸಹ ಜೊತೆಗಿದ್ದಾರೆ. ಚರ್ವಿತಚವರ್ಣ ಫಿಲ್ಮಿ ಕಥೆಯಾದರೂ ಮಲೆಯಾಳದ ಮೊನಚಾದ ಚಿತ್ರಕಥೆ, ನಿರ್ದೇಶನ, ಮಮ್ಮುಟಿಯಂಥ ದೈತ್ಯ ಪ್ರತಿಭೆಗಳ ನಟನೆ ಚಿತ್ರಕ್ಕೆ ಹೊಸ ಟಚ್‌ ನೀಡಿದೆ.

01-Bengali-Film-'Swarthopor'

ಬಂಗಾಳಿ : ಸ್ವಾರ್ಥೋಪೋರ್

ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿರುವ ಈ ಬಂಗಾಳಿ ಚಿತ್ರ, ಬಾಕ್ಸ್ ಆಫೀಸ್‌ ನಲ್ಲೂ ಬಿಗ್‌ ಹಿಟ್‌! ಈ ಚಿತ್ರದ ನಿರ್ದೇಶಕರು ಅನ್ನಪೂರ್ಣಾ ಬಸು, ಸಂಗೀತ ಅಮಿತ್‌ ಚಟರ್ಜಿ. ಈ ಚಿತ್ರ ಅಣ್ಣತಂಗಿಯರಾದ ಅಪರ್ಣಾ ಹಾಗೂ ಸೌರವ್, ತಾಯಿತಂದೆಯರ ಮರಣಾನಂತರ, ತಮ್ಮ ಪಿತ್ರಾರ್ಜಿತ ಆಸ್ತಿಯಾದ ಮನೆ ಯಾರಿಗೆ ಸಿಗಬೇಕೆಂದು ಹೊಡೆದಾಡುವ ಸಾಂಸಾರಿಕ ಕಥಾಹಂದರ ಹೊಂದಿದೆ. ತಾರಾಗಣದಲ್ಲಿ ಕೋಯೆಲ್ ‌ಮಲ್ಲಿಕ್‌, ಕೌಶಿಕ್‌ ಸೇನ್‌, ಅನನ್ಯಾ ಸೇನ್‌, ಅನಿರ್ಬನ್‌ ಚಕ್ರವರ್ತಿ ಮುಂತಾದವರಿದ್ದಾರೆ. ತಂದೆಮಗಳ ಪಾತ್ರಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ