ಕೊನೇರೂ ಹಂಪೀ
ಚದುರಂಗದ ರಣರಂಗದಲ್ಲಿ ಮತ್ತೊಂದು ನಡೆ ಭವ್ಯಾ ಡೋರೆ ಕೊನೇರೂ ಹಂಪೀ ವಿಶ್ವ ಚದುರಂಗದಾಟದಲ್ಲಿ ಚಾಂಪಿಯನ್ ಎನಿಸಿದ್ದಾರೆ! ಈ ಯಶಸ್ಸಿನ ಶಿಖರವೇರಲು ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಡೀ ಜೀವನ ಸಂಘರ್ಷದಲ್ಲಿಯೇ ನಡೆದು, ಹಣದ ಬಿಕ್ಕಟ್ಟು ಕಂಗೆಡಿಸಿತು. ಹೀಗಿದ್ದೂ ಸಮಾಜದ ಕಂದಾಚಾರದ ವಿರುದ್ಧ ಹೋರಾಡಿ, ಈ ಯಶಸ್ಸಿನ ಶಿಖರ ಮುಟ್ಟಿದ್ದು ಖಂಡಿತಾ ಸುಲಭ ಆಗಿರಲಿಲ್ಲ.......
ಕೊನೇರೂ ಹಂಪೀ ತಮ್ಮ ಹೆಗಲ ಮೇಲೆ ಹೊದೆಯಲಾಗಿದ್ದ ಸ್ಲೇಟ್ ಬಣ್ಣದ ನೆಟೆಡ್ ಜ್ಯಾಕೆಟ್ ನ್ನು ಇನ್ನಷ್ಟು ಬಿಗಿಯಾಗಿ ಹೊದ್ದರು. ಅವರ ಎದುರಿಗೆ ಇರಿಸಲಾಗಿದ್ದ ಚದುರಂಗದಾಟದ ಕ್ರೀಂ ಬಣ್ಣದ ಪಾನ್ ಗಳನ್ನು ಆಕೆ ವಿಧಿವತ್ತಾಗಿ ವ್ಯವಸ್ಥಿತಗೊಳಿಸಿದರು. ಇವರ ಎದುರಾಳಿ, ಮಹಾಷ್ಟ್ರಾದ 19ರ ಹರೆಯದ ಪ್ರತಿಭಾಶಾಲಿ ದಿವ್ಯಾ ದೇಶ್ ಮುಖ್ ತಮ್ಮ ರಿವಾಲ್ವಿಂಗ್ ಕುರ್ಚಿಯ ಮೇಲೆ ಲೈಟಾಗಿ ತೂಗುತ್ತಾ ಕಾಯುತ್ತಲೇ ಇದ್ದರು. ದಿವ್ಯಾ ಟೈಂ ಸೆಟ್ ಮಾಡಲು ಮುಂದಾದರು. ಇಬ್ಬರು ಹೆಂಗಸರೂ ಪರಸ್ಪರ ಕೈ ಕುಲುಕಿಕೊಂಡರು.
ಜುಲೈ 2025ರ ಜಾರ್ಜಿಯಾ ಅಂತಾರಾಷ್ಟ್ರೀಯ ಚದುರಂಗದ ಮಹಾಸಂಘ ಮಹಿಳಾ ವಿಶ್ವ ಕಪ್ ನ್ನು ಆಯೋಜಿಸಿತ್ತು. ಮೊದಲ ಸಲ ಇಬ್ಬರು ಭಾರತೀಯ ಆಟಗಾರರು ಫೈನಲ್ ನಲ್ಲಿ ಪರಸ್ಪರ ಎದುರಾಗಿದ್ದರು. 3 ದಿನಗಳ ಸತತ ಸರಿಸಮಾನ ಪೈಪೋಟಿಯ ನಂತರ ಹಂಪೀ ಮತ್ತು ದಿವ್ಯಾ ಕೊನೆಯದಾಗಿ ಪರಸ್ಪರ ಎದುರಬದುರಾಗಿದ್ದರು.
ಅಂತೂ ಮ್ಯಾಚ್ ಶುರುವಾಯಿತು. ಹಂಪೀ ಕ್ವೀನ್ಸ್ ಗ್ಯಾಂಬಿಟ್ ಮೂಲಕ ಆಟ ಶುರು ಮಾಡಿದರು. ಆಕೆ ರಾಣಿಯ ಮುಂದಿದ್ದ ಸೈನಿಕನನ್ನು ಮುನ್ನಡೆಸಿದರು. ಇವರ ಈ ನಡೆ ಬೋರ್ಡ್ ನ ಕೇಂದ್ರದಲ್ಲಿ ನಿಯಂತ್ರಣ ತರುವಂಥದ್ದಾಗಿತ್ತು. ಸುಮಾರು 15 ನಿಮಿಷಗಳಲ್ಲಿ ದಿವ್ಯಾ ಈಕೆಯನ್ನು ಸೋಲಿನ ಅಂಚಿಗೆ ಎಳೆತಂದಿದ್ದರು. ಭಾರತದ ಪ್ರಪ್ರಥಮ ಹಾಗೂ ಎಲ್ಲರಿಗಿಂತ ವರಿಷ್ಠ ಮಹಿಳಾ ಗ್ರಾಂಡ್ ಮಾಸ್ಟರ್, ಭಾರತದ ನವನವೀನ ಯುವ ಆಟಗಾರ್ತಿಯ ಮುಂದೆ, ಅದೂ ಕೊನೆ ಮ್ಯಾಚಿನಲ್ಲಿ ಇಂಥ ತಪ್ಪು ತಂದುಕೊಂಡಿದ್ದರು!
ಇದಾದ 2 ತಿಂಗಳ ನಂತರ ಆಂಧ್ರದ ವಿಜಯವಾಡಾದ ತಮ್ಮ ಮನೆಯಿಂದ ನನ್ನೊಂದಿಗೆ ಮಾತನಾಡುತ್ತಿದ್ದ 38ರ ಹರೆಯದ ಹಂಪೀ, ಆ ಸೋಲಿನ ಕುರಿತು ಬಹಳ ವಿಚಲಿತರಾಗಿದ್ದರು. ಆ ದಿನ ಅವರು ಒಂದು ಸಾಧಾರಣ ಬಿಳಿ ಕುರ್ತಾ ಧರಿಸಿ, ಸಣ್ಣ ಬಿಂದಿ ಇರಿಸಿದ್ದರು. ಅವರ ಹಿಂದೆ ಒಂದು ಲೈಟ್ ಕಲರ್ ಪರದೆ ಇಳಿಬಿಡಲಾಗಿತ್ತು.
``ಖಂಡಿತವಾಗಿಯೂ ಇದೊಂದು ಅತ್ಯಂತ ಕಠಿಣಕರ ಹಾಗೂ ಸಾಲುಭರಿತ ಪೈಪೋಟಿ ಆಗಿತ್ತು!'' ಹಂಪೀ ಮಾತನಾಡುತ್ತಿದ್ದರು, ``ಈ ಮಟ್ಟದಲ್ಲಿ ಗಟ್ಟಿಯಾಗಿ ನೆಲೆಯೂರಲು ನಾವು ಯುವಜನತೆ ವಿರುದ್ಧ ತೀವ್ರ ಸೆಣಸಬೇಕಾಗುತ್ತದೆ. ಏಕೆಂದರೆ, ಅವರ ಬಳಿ ಅತ್ಯಧಿಕ ಧೀಶಕ್ತಿ ಇರುತ್ತದೆ. ನಮ್ಮ ಪೀಳಿಗೆಗೆ ಹೋಲಿಸಿದರೆ ಅವರು ಅಧಿಕ ತಯಾರಿ ನಡೆಸಿ, ಬೆಟರ್ ಪರ್ಫಾರ್ಮೆನ್ಸ್ ನೀಡಲು ತರಬೇತಿ ಪಡೆದಿರುತ್ತಾರೆ.''
ಅನುಭವದ ಝಲಕ್
ಹಂಪೀಯ ಮಾತುಗಳಲ್ಲಿ 3 ದಶಕಗಳಿಗಿಂತ ಹೆಚ್ಚಿನ ಝಲಕ್ ಕಾಣುತ್ತಿತ್ತು. ಆಕೆ 1993ರಲ್ಲಿ ಚದುರಂಗದ ಸ್ಪರ್ಧೆಯಲ್ಲಿ ಮೊದ ಮೊದಲು ಆಟ ಆರಂಭಿಸಿದ್ದರು. ಆಗ ಆಕೆಗೆ ಕೇವಲ 6 ವರ್ಷ. ಇದಾದ 3 ವರ್ಷಗಳ ನಂತರ ಆಕೆ ತನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು. ಇದಾದ ನಂತರ ಹಂಪೀ, ಈ ಚದುರಂಗದ ಸರ್ವಶ್ರೇಷ್ಠ ಆಟಗಾರ್ತಿ ಎಂದೇ ಗುರುತಿಸಲ್ಪಟ್ಟರು. 2002ರಲ್ಲಿ ತನ್ನ 15ನೇ ಹುಟ್ಟುಹಬ್ಬದ 1 ತಿಂಗಳ ನಂತರ, ಹಂಪೀ ಭಾರತದ ಪ್ರಪ್ರಥಮ ಮಹಿಳಾ ಗ್ರಾಂಡ್ ಮಾಸ್ಟರ್‌ಎನಿಸಿದರು! ಆ ಸಮಯದಲ್ಲಿ ಆಕೆ ವಿಶ್ವದ ಅತಿ ಯಂಗ್ ಗ್ರಾಂಡ್ ಮಾಸ್ಟರ್ ಆಗಿದ್ದರು. 2003ರಲ್ಲಿ ಈಕೆಗೆ `ಅರ್ಜುನ ಪ್ರಶಸ್ತಿ' ಲಭಿಸಿತು, ನಮ್ಮ ದೇಶದ ಪ್ರಧಾನ ಕ್ರೀಡಾ ಸನ್ಮಾನಗಳಲ್ಲಿ ಒಂದು! 2007ರಲ್ಲಿ ಈಕೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ಇದಂತೂ ನಮ್ಮ ದೇಶದ ನಾಲ್ಕನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಆಗಿತ್ತು.





