ಮಹಾನ್ಸ್ಟಾರ್ಪ್ರಿಯಾಂಕಾ ಚೋಪ್ರಾಳ ತಂಗಿ ಆದ ಮಾತ್ರಕ್ಕೆ ನನಗೇನೂ ಲಾಭ ಆಗಲಿಲ್ಲ ಎನ್ನುವ ಮೀರಾಳ ಮನದಾಳದ ಮಾತುಗಳನ್ನು ವಿವರವಾಗಿ ಅರಿಯೋಣವೇ......?

ಬಾಲಿವುಡ್‌ ನ ಪ್ರಬುದ್ಧ ನಟಿ ಮೀರಾ ಚೋಪ್ರಾ ಪ್ರಿಯಾಂಕಾ, ಪರಿಣೀತಿ, ಮನಾರಾ ಚೋಪ್ರಾರ ಕಸಿನ್‌. ಕಳೆದ 8 ವರ್ಷಗಳಿಂದ ಈಕೆ ಬಾಲಿವುಡ್‌ ನಲ್ಲಿ ಸಕ್ರಿಯಳಾಗಿದ್ದಾಳೆ. ಇತ್ತೀಚೆಗೆ 5 ಚಾನೆಲ್ ತಯಾರಿಸಿ, ಸಂದೀಪ್‌ ಸಿಂಗ್‌ ನಿರ್ದೇಶಿಸಿದ ಈಕೆಯ `ಸಫೇದ್‌' ಚಿತ್ರ, ಸದಾ ಬಿಳಿ ಸೀರೆಯಲ್ಲಿರಬೇಕಾದ ವಿಧವೆಯ ಕರುಣಾಜನಕ ಕಥೆ ಸಾರುವ ಚಿತ್ರವಾಗಿ ಉತ್ತಮ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಈಕೆ ಒಬ್ಬ ಖೋಜಾನನ್ನು ಪ್ರೇಮಿಸುವ ಕಥಾ ಹಂದರವಿದೆ. 80ರ ದಶಕದ ಈ ಕಥೆ, ಅಂದಿನ ಕಾಲದಲ್ಲಿ ವಿಧವೆ, ಖೋಜಾಗಳ ಸ್ಥಿತಿಗತಿಗಳನ್ನು ಎತ್ತಿ ತೋರಿಸಿದೆ.

ಇದಕ್ಕೆ ಮೊದಲು ಈಕೆ `ಸೆಕ್ಷನ್‌ 365' ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಪಾತ್ರ ನಿರ್ವಹಿಸಿದ್ದಳು. ತನ್ನ 8 ವರ್ಷದ ಕೆರಿಯರ್‌ ನಲ್ಲಿ ಮೀರಾ ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಗ್ಲಾಮರಸ್‌ ಪಾತ್ರಗಳನ್ನು ಯಾರಾದರೂ ಮಾಡಬಲ್ಲರು, ಇಂಥ ಕ್ಲಿಷ್ಟಕರ ಪಾತ್ರ ನಿರ್ವಹಿಸುವುದರಲ್ಲೇ ನಿಜಾದ ಸವಾಲು ಅಡಗಿದೆ ಎನ್ನುತ್ತಾಳೆ ಮೀರಾ.

40 ವರ್ಷದ ಮೀರಾ ತನ್ನನ್ನು ತಾನು ಎಲ್ಲರಿಗಿಂತ ವಿಭಿನ್ನ ಎಂದೇ ಭಾವಿಸುತ್ತಾಳೆ. ಆಕೆ ಆರಿಸಿಕೊಳ್ಳುವ ಪ್ರತಿ ಚಿತ್ರದ ಕಥೆಯೂ ವಿಭಿನ್ನ, ವಿಶಿಷ್ಟ ಆಗಿರುತ್ತದೆ.

ಈಕೆ ತನ್ನ ವೃತ್ತಿ ಜೀವನದ ಏರಿಳಿತ, ಲವ್ ಲೈಫ್‌ ಕುರಿತು ಏನು ಹೇಳಿದ್ದಾಳೆ ಎಂದು ನೋಡೋಣವೇ?

Meera

`ಸಫೇದ್‌' ಚಿತ್ರದಲ್ಲಿ ಒಬ್ಬ ವಿಧವೆಯ ಪಾತ್ರ ನಿರ್ವಹಿಸಿದ್ದು ನಿನಗೆಷ್ಟು ಚಾಲೆಂಜಿಂಗ್ಎನಿಸಿತು?

ಇದು ನನಗೆ ಕೇವಲ ಚಾಲೆಂಜಿಂಗ್‌ ಮಾತ್ರವಲ್ಲದೆ, ಬಹಳ ಆಸಕ್ತಿಪೂರ್ಣ ಪಾತ್ರ ಆಗಿತ್ತು! ಒಬ್ಬ ನಟಿಯಾಗಿ ನನಗೆ ಈ ಪಾತ್ರದಿಂದ ಹೆಚ್ಚಿನ ತೃಪ್ತಿ ದೊರಕಿದೆ. ಒಬ್ಬ ಮಧ್ಯಮ ವರ್ಗದ ವಿಧವೆಯ ಜೀವನ ಎಷ್ಟು ಯಾತನಾಮಯ ಎಂಬುದೂ ಇದರಿಂದ ಗೊತ್ತಾಯಿತು. ಇದರಲ್ಲಿ ಅವಳದು ಏನೂ ತಪ್ಪಿಲ್ಲದಿದ್ದರೂ ಸಮಾಜ ಅವಳನ್ನು ಎಷ್ಟು ಧಿಕ್ಕರಿಸುತ್ತದೆ ಎಂಬುದು 80ರ ದಶಕದ ಈ ಕಥೆಯಲ್ಲಿ ಸ್ಪಷ್ಟವಾಗಿದೆ.

ಅದೇ ತರಹ ಖೋಜಾ ಜೀವನ ಸಹ ಅಷ್ಟೇ ಯಾತನಾಮಯ ಆಗಿರುವುದು ತಿಳಿಯುತ್ತದೆ. ಅವರನ್ನು ಅತಿ ಕೀಳಾಗಿ ನಡೆಸಿಕೊಳ್ಳುತ್ತಾ, ನೀನು ಹುಟ್ಟಿದ್ದೇ ಖೋಜಾ ಆಗಲು ಎಂಬಂತೆ ಹೆಜ್ಜೆ ಹೆಜ್ಜೆಗೂ ದಂಡಿಸುತ್ತಾರೆ. ಇಂದಿಗೂ ನೀವು ಸಣ್ಣ ಹೋಬಳಿ, ಗ್ರಾಮಗಳಿಗೆ ಹೋಗಿ ನೋಡಿದಾಗ, ಅಲ್ಲಿನ ವಿಧವೆಯರ ಸ್ಥಿತಿ ಕಂಬನಿ ತರಿಸುತ್ತದೆ. ವಿಧವೆಯಾಗಿ ಇಂಥ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಗುರಿಯಾಗಿರುವವರನ್ನು ಕಣ್ಣಾರೆ ನೋಡಿದ್ದೇನೆ. ಇಂದಿಗೂ ಅವರು ಕೇಶ ಮುಂಡನದ ಶಿಕ್ಷೆ ಅನುಭವಿಸುತ್ತಾರೆ. `ಫಣಿಯಮ್ಮ'ನ ಈ ರೂಪ ನಗರ ಪ್ರದೇಶಗಳಲ್ಲಿ ಕಂಡುಬರುವುದಿಲ್ಲ, ಆದರೆ ಗ್ರಾಮೀಣ ಪರಿಸ್ಥಿತಿ ಬಹಳ ಸುಧಾರಿಸಬೇಕಿದೆ.

ಚಿತ್ರದಲ್ಲಿ ನಿನ್ನ ಪಾತ್ರ ಖೋಜಾನನ್ನು ಪ್ರೇಮಿಸುತ್ತದೆ. ಅಂದ್ರೆ ಖೋಜಾಗಳ ದುಃಖದ ಬಗ್ಗೆಯೂ ಗೊತ್ತಾಯಿತೇ? ಅವರ ಬಗ್ಗೆ ಏನು ಹೇಳ್ತೀಯಾ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ