ರಿಯಲ್‌ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಟ ನಿರಂಜನ್‌ ಅವರು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಡಾ. ಸಂಜನಾ ಅವರನ್ನು ವರಿಸಿರುವ ನಿರಂಜನ್​, ಭಾನುವಾರ ಜರುಗಿದ ವಿವಾವಹದಲ್ಲಿ ರಾಜಾರಾಣಿಯರಂತೆ ಮಿಂಚಿದ್ದಾರೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ ನಿರಂಜನ್ ಸುಧೀಂದ್ರ ಮದುವೆ ಕ್ಷಣಗಳು ಮನೆ ತುಂಬಿವೆ.ನಿರಂಜನ್‌ ಅವರು ಸುಧೀಂದ್ರ ಮತ್ತು ವೀಣಾ ದಂಪತಿಯ ಹಿರಿಯ ಪುತ್ರ. ಇವರ ಕಿರಿಯ ಸಹೋದರನ ಹೆಸರು ನಿದರ್ಶನ್‌. ಸದ್ಯ ಈ ಕುಟುಂಬಕ್ಕೆ ಡಾ. ಸಂಜನಾ ರಾಜ್‌ ಸೇರ್ಪಡೆಯಾಗಿದ್ದಾರೆ.ಚಿಕ್ಕಪ್ಪ ಉಪೇಂದ್ರ, ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಅವರ ನಂತರ ಕನ್ನಡ ಮತ್ತು ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ನಟ ನಿರಂಜನ್‌. ‘ಬಳ್ಳಾರಿ ನಾಗ’, ‘ನಮ್ಮ ಹುಡುಗರು’ ‘ಬರ್ಮಾ’, ‘ಸೀತಾ ಪಯಣಂ’, ‘ಸ್ಪಾರ್ಕ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ರಿಸೆಪ್ಷನ್‌ಗೆ ಸ್ಯಾಂಡಲ್‌ವುಡ್‌ನ ಖ್ಯಾತನಾಮರು ಹಾಜರಿದ್ದರು. ಡೈನಾಮಿಕ್ ಸ್ಟಾರ್ ದೇವರಾಜ್, ಮಾಲಾಶ್ರೀ, ಶ್ರೀಮುರಳಿ,  ಮೇಘನಾ ಗಾಂವ್ಕರ್, ಸಾನ್ಯ ಅಯ್ಯರ್, ರಮೇಶ್ ಭಟ್, ರವಿಶಂಕರ್, ಸಂಗೀತಾ ಗುರುರಾಜ್, ಗುರುಕಿರಣ್, ಕೆ ಮಂಜು, ಉಮೇಶ್ ಬಣಕಾರ್, ಸಂತೋಷ್ ಆನಂದ್‌ರಾಮ್, ಅಭಿಷೇಕ್ ಅಂಬರೀಶ್ ಮುಂತಾದ ಕಲಾವಿದರು ಹಾಜರಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ